AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CWG 2022: ಬರ್ಮಿಂಗ್‌ಹ್ಯಾಮ್​ಗೆ ತಲುಪಿದ ಹರ್ಮನ್ ಪಡೆ: ಭಾರತ ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Indian Womens Cricket Team: ಕಾಮನ್​ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022) ಭಾಗವಹಿಸಲು ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರರು ಬರ್ಮಿಂಗ್‌ಹ್ಯಾಮ್​ಗೆ ತಲುಪಿದ್ದಾರೆ. ಹರ್ಮನ್​ಪ್ರೀತ್ ಕೌರ್ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.

CWG 2022: ಬರ್ಮಿಂಗ್‌ಹ್ಯಾಮ್​ಗೆ ತಲುಪಿದ ಹರ್ಮನ್ ಪಡೆ: ಭಾರತ ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ
Indian Womens Cricket Team
TV9 Web
| Updated By: Vinay Bhat|

Updated on:Jul 26, 2022 | 8:34 AM

Share

ಜುಲೈ 28 ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ ಕಾಮನ್​ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022) ಭಾಗವಹಿಸಲು ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರರು ಬರ್ಮಿಂಗ್‌ಹ್ಯಾಮ್​ಗೆ ತಲುಪಿದ್ದಾರೆ. ಬಹಳ ಸಮಯದ ನಂತರ ಕಾಮನ್​​ವೆಲ್ತ್​ ಗೇಮ್ಸ್​​​ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಟಕ್ಕೆ ಅವಕಾಶ ಸಿಕ್ಕಿದ್ದು, ಹರ್ಮನ್​ಪ್ರೀತ್ ಕೌರ್ (Harmanpreet Kaur) ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಕ್ರಿಕೆಟ್ ಪಂದ್ಯವನ್ನು ಟಿ20 ಮಾದರಿಯಲ್ಲಿ ನಡೆಸಲಾಗುತ್ತದೆ. ಜುಲೈ 28ರಿಂದ ಕಾಮನ್​ವೆಲ್ತ್​ ಕ್ರೀಡಾಕೂಟ ಶುರುವಾದರೆ ಮುಂದಿನ ದಿನ ಜುಲೈ 29 ರಂದು ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡ ತನ್ನ ಅಭಿಯಾನವನ್ನು ಆರಂಭಿಸಲಿದೆ. ಗ್ರೂಪ್ ಎ ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ (India Womens Cricket Team) ಸ್ಥಾನ ಪಡೆದುಕೊಂಡಿದೆ.

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತ ಒಟ್ಟು ಮೂರು ತಂಡಗಳೊಂದಿಗೆ ಸೆಣೆಸಾಟ ನಡೆಸಲಿದೆ. ಈಗಾಗಲೇ ಹೇಳಿರುವಂತೆ ಜುಲೈ 29ಕ್ಕೆ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಮೊದಲ ಪಂದ್ಯವನ್ನು ಆಡಿದರೆ, ಜುಲೈ 31 ಕ್ಕೆ ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯ ಆಯೋಜಿಸಲಾಗಿದೆ. ಅಂತೆಯೆ ಗ್ರೂಪ್​ ಹಂತದ ಕೊನೆಯ ಪಂದ್ಯವನ್ನು ಆಗಸ್ಟ್ 3 ರಂದು ಬಾರ್ಬಡೊಸ್ (ವೆಸ್ಟ್​ ಇಂಡೀಸ್) ವಿರುದ್ಧ ಆಡಬೇಕಿದೆ. ಈ ಎಲ್ಲ ಪಂದ್ಯ ಎಡ್ಗಬಸ್ಟನ್​​ನಲ್ಲಿ ನಡೆಯಲಿದೆ. ಮೊದಲೆರಡು ಮ್ಯಾಚ್ ಸಂಜೆ 4:30ಕ್ಕೆ ಶುರುವಾದರೆ, ಕೊನೆಯ ಪಂದ್ಯ ರಾತ್ರಿ 11:30ಕ್ಕೆ ನಡೆಯಲಿದೆ.

ಇದನ್ನೂ ಓದಿ
Image
CWG 2022: ನೀರಜ್ ಅಥವಾ ಸಿಂಧು; ಕಾಮನ್‌ವೆಲ್ತ್‌ ಉದ್ಘಾಟನೆಯಲ್ಲಿ ಭಾರತದ ಧ್ವಜಧಾರಿ ಯಾರು?
Image
CWG 2022: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾಗವಹಿಸುವ ರಾಷ್ಟ್ರಗಳು ಯಾವುವು ಗೊತ್ತಾ?
Image
CWG 2022: ನೀರಜ್, ಸಿಂಧು ಸೇರಿದಂತೆ ಭಾರತದ ಆಟಗಾರರು ಯಾವಾಗ ಮೈದಾನಕ್ಕಿಳಿಯುತ್ತಾರೆ? ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
Image
CWG 2022: ಸ್ಕ್ವಾಷ್‌ ಸ್ಪರ್ಧೆಯಲ್ಲಿ ಭಾರತದ ಪರ ಪದಕ್ಕಾಗಿ ಸೆಣಸಲಿರುವ 9 ಆಟಗಾರರಿವರು!

ಗ್ರೂಪ್ ಹಂತದ ಪಂದ್ಯಗಳಲ್ಲಿ ಮೂರು ತಂಡದ ವಿರುದ್ಧ ಭಾರತ ತಲಾ ಒಂದೊಂದು ಪಂದ್ಯವನ್ನು ಆಡಲಿದೆ. ಇಲ್ಲಿ ಕನಿಷ್ಠ ಎರಡು ಪಂದ್ಯವನ್ನು ಹರ್ಮನ್ ಪಡೆ ಗೆದ್ದರೆ ಸಮಿಫೈನಲ್​ ಹಂತಕ್ಕೇರಲಿದೆ. ಆಡಿದ ಮೂರೂ ಪಂದ್ಯಗಳನ್ನು ಗೆದ್ದರೆ ನೇರವಾಗಿ ಕ್ವಾಲಿಫೈ ಆಗಲಿದೆ. ಆಸ್ಟ್ರೇಲಿಯಾ, ಬಾರ್ಬಡೋಸ್​ ಮತ್ತು ಪಾಕಿಸ್ತಾನದೊಂದಿಗೆ ಭಾರತ ಎ ಗುಂಪಿನಲ್ಲಿದ್ದು, ಶ್ರೀಲಂಕಾ, ಇಂಗ್ಲೆಂಡ್​, ನ್ಯೂಜಿಲೆಂಡ್​ ಮತ್ತು ದಕ್ಷಿಣ ಆಫ್ರಿಕಾ ಬಿ ಗುಂಪಿನಲ್ಲಿವೆ. ಎರಡು ಪೂಲ್​​​ಗಳಿಂದ ಎರಡು ಅಗ್ರ ತಂಡಗಳು ಸೆಮಿಫೈನಲ್​ಗೆ ಲಗ್ಗೆ ಹಾಕಲಿದ್ದು, ಇಲ್ಲಿ ಗೆಲ್ಲುವ ತಂಡಗಳು ಫೈನಲ್​​ಗೆ ಪ್ರವೇಶ ಪಡೆದುಕೊಳ್ಳಲಿವೆ.

ಮಾಹಿತಿಯ ಪ್ರಕಾರ ಭಾರತಪಾಕಿಸ್ತಾನ ನಡುವಣ ಪಂದ್ಯಕ್ಕೆ ಬರೋಬ್ಬರಿ 1.2 ಮಿಲಿಯನ್​ ಟಿಕೆಟ್ ಮಾರಾಟಗೊಂಡಿವೆಯಂತೆ. ಇದರ ನಡುವೆ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಹರ್ಮನ್​, “ಬಹುರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ಅನ್ನು ಸೇರ್ಪಡೆ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರ. ಇದು ಮಹಿಳಾ ಕ್ರಿಕೆಟ್​​​​​ ಬೆಳವಣಿಗೆ ಅಡಿಪಾಯ ಇದ್ದಂತೆ. ಚಿಕ್ಕ ವಯಸ್ಸಿನಿಂದಲೂ ಕಾಮನ್​​ವೆಲ್ತ್​​​​ ಕ್ರೀಡಾಕೂಟಗಳನ್ನ ನೋಡುತ್ತಾ ಬೆಳೆದಿದ್ದೇವೆ. ಇದೀಗ, ಅದೇ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿದ್ದು, ಅದ್ಭುತ ಪ್ರದರ್ಶನ ನೀಡಿ ದೇಶಕ್ಕಾಗಿ ಚಿನ್ನ ಗೆಲ್ಲುತ್ತೇವೆ,” ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಸಬ್ಬಿನೇನಿ ಮೇಘನಾ, ತನಿಯಾ ಸಪ್ನಾ ಭಾಟಿಯಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್‌ವಾಡ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಠಾಕೂರ್, ಎಸ್ ಜೆಮಿಮಾ ರೋಡ್ರಿಗಸ್, ಹರ್ಲೆನ್ ರಾಡ್ರಿಗಸ್, ರಾಧಾ ಯಾದವ್ .

Published On - 8:34 am, Tue, 26 July 22