CWG 2022: ನೀರಜ್ ಅಥವಾ ಸಿಂಧು; ಕಾಮನ್‌ವೆಲ್ತ್‌ ಉದ್ಘಾಟನೆಯಲ್ಲಿ ಭಾರತದ ಧ್ವಜಧಾರಿ ಯಾರು?

CWG 2022: ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ದೇಶದಿಂದ 215 ಕ್ರೀಡಾಪಟುಗಳ ತಂಡವನ್ನು ಆಯ್ಕೆ ಮಾಡಲಾಗಿದೆ. ಆದಾಗ್ಯೂ, ಸ್ಪರ್ಧೆಯ ಆರಂಭದ ಮೊದಲು, ಹಲವಾರು ಕಾಮನ್‌ವೆಲ್ತ್ ಅಥ್ಲೀಟ್‌ಗಳು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿ ಐವರು ತಂಡದಿಂದ ಹೊರಬಿದ್ದಿದ್ದಾರೆ.

CWG 2022: ನೀರಜ್ ಅಥವಾ ಸಿಂಧು; ಕಾಮನ್‌ವೆಲ್ತ್‌ ಉದ್ಘಾಟನೆಯಲ್ಲಿ ಭಾರತದ ಧ್ವಜಧಾರಿ ಯಾರು?
Neeraj, Sindhu
Follow us
TV9 Web
| Updated By: ಪೃಥ್ವಿಶಂಕರ

Updated on:Jul 25, 2022 | 8:11 PM

ಕಾಮನ್‌ವೆಲ್ತ್ ಗೇಮ್ಸ್‌ಗೆ (Commonwealth Games) ಕ್ಷಣಗಣನೆ ಆರಂಭವಾಗಿದೆ. ಸ್ಪರ್ಧಾ ಸ್ಥಳಕ್ಕೆ ಕ್ರೀಡಾಪಟುಗಳು ಬರಲಾರಂಭಿಸಿದ್ದಾರೆ. ಜುಲೈ 28 ರಂದು ಬರ್ಮಿಂಗ್ಹ್ಯಾಮ್‌ನ ಹೊಸದಾಗಿ ನವೀಕರಿಸಿದ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. 11 ದಿನಗಳ ಬಹು-ಕ್ರೀಡಾ ಕಾರ್ಯಕ್ರಮದ ಅಧಿಕೃತ ಆರಂಭವಾಗಲಿದೆ. ಭಾರತ ತಂಡವು 30,000 ಪ್ರೇಕ್ಷಕರ ಮುಂದೆ ದೇಶದ ಧ್ವಜವನ್ನು ಹಿಡಿದು ವೇದಿಕೆಯಾದ್ಯಂತ ಸಾಗಲಿದೆ. ಆದರೆ ತ್ರಿವರ್ಣ ಧ್ವಜವನ್ನು ಯಾರು ಹಾರಿಸುತ್ತಾರೆ? ಎಂಬುದು ಪ್ರಶ್ನೆಯಾಗಿದೆ. ನೀರಜ್ ಚೋಪ್ರಾ (Neeraj Chopra) ಹೆಸರು ಇಲ್ಲಿಯವರೆಗೂ ಕೇಳಿ ಬಂದಿತ್ತು. ಜಾವೆಲಿನ್‌ನಲ್ಲಿ ಕಳೆದ ವರ್ಷದ ಒಲಿಂಪಿಕ್ ಚಾಂಪಿಯನ್ ಇತ್ತೀಚೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದರು. ಎರಡು ಬಾರಿ ಒಲಂಪಿಕ್ ಪದಕ ವಿಜೇತೆ ಪಿವಿ ಸಿಂಧು (PV Sindhu) ಅವರ ಹೆಸರೂ ಧ್ವಜಧಾರಿಯಾಗಿ ಕೇಳಿಬರುತ್ತಿದೆ. ನೀರಜ್ ಅಥವಾ ಸಿಂಧೂ ಅಲ್ಲ, ಆದರೆ ಭಾರತೀಯ ಒಲಿಂಪಿಕ್ ಸಂಸ್ಥೆ ಇನ್ನೂ ಯಾರ ಹೆಸರನ್ನು ಅಂತಿಮಗೊಳಿಸಿಲ್ಲ.

ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ದೇಶದಿಂದ 215 ಕ್ರೀಡಾಪಟುಗಳ ತಂಡವನ್ನು ಆಯ್ಕೆ ಮಾಡಲಾಗಿದೆ. ಆದಾಗ್ಯೂ, ಸ್ಪರ್ಧೆಯ ಆರಂಭದ ಮೊದಲು, ಹಲವಾರು ಕಾಮನ್‌ವೆಲ್ತ್ ಅಥ್ಲೀಟ್‌ಗಳು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿ ಐವರು ತಂಡದಿಂದ ಹೊರಬಿದ್ದಿದ್ದಾರೆ. ಅವರಲ್ಲಿ ಇಬ್ಬರು ಪ್ಯಾರಾ ಅಥ್ಲೀಟ್‌ಗಳೂ ಇದ್ದಾರೆ. ಈ ನಡುವೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಧ್ವಜಧಾರಿ ವಿಚಾರದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಒಲಿಂಪಿಕ್ ಚಾಂಪಿಯನ್ ನೀರಜ್ 2018 ರಲ್ಲಿ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದರು. ಆ ವರ್ಷ, ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ನೀರಜ್ ತ್ರಿವರ್ಣ ಧ್ವಜವನ್ನು ಹೊತ್ತಿದ್ದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ನೀರಜ್ ಹೆಸರು ಸದ್ದು ಮಾಡಿತ್ತು. ಆದರೆ ಉದ್ಘಾಟನಾ ಸಮಾರಂಭದ ದಿನ ನೀರಜ್ ಲಭ್ಯರಾಗುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಮೊದಲಿಗೆ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಈಗತಾನೇ ಮುಗಿದಿದ್ದು, ಜಾವೆಲಿನ್ ಥ್ರೋ ಅರ್ಹತಾ ಹಂತವು ಆಗಸ್ಟ್ 5 ರಂದು ಪ್ರಾರಂಭವಾಗಲಿದೆ. ಆದ್ದರಿಂದ ನೀರಜ್ ಇತರರಿಗಿಂತ ಸ್ವಲ್ಪ ತಡವಾಗಿ ಬರ್ಮಿಂಗ್ಹ್ಯಾಮ್ ತಲುಪಬಹುದು ಎಂಬ ಮಾತು ಕೇಳಿ ಬರುತ್ತಿದೆ.

ಇದನ್ನೂ ಓದಿ
Image
ತೆರೆ ಮೇಲೆ ಶೋಯೆಬ್ ಅಖ್ತರ್ ಜೀವನ ಚರಿತ್ರೆ; ನನ್ನ ಬಯೋಪಿಕ್​ಗೆ ಸಲ್ಮಾನ್ ಖಾನ್ ಸೂಕ್ತ ಎಂದ ಪಾಕ್ ಬೌಲರ್
Image
MS Dhoni: ಕ್ಯಾಪ್ಟನ್ ಕೂಲ್​ ಧೋನಿಗೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್! ಕಾರಣವೇನು?
Image
SL Vs PAK: ಬರೋಬ್ಬರಿ 13 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ 1000 ರನ್ ಪೂರೈಸಿದ ಪಾಕ್ ಕ್ರಿಕೆಟಿಗ..!

ಈ ನಿಟ್ಟಿನಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಹಂಗಾಮಿ ಅಧ್ಯಕ್ಷ ಡಾ. ಅನಿಲ್ ಖನ್ನಾ ಮಾತನಾಡಿ, ವಿಶ್ವ ಅಥ್ಲೆಟಿಕ್ಸ್ ಈಗಷ್ಟೇ ಮುಗಿದಿದೆ ಹಾಗಾಗಿ ನೀರಜ್ ಚೋಪ್ರಾ ಯಾವಾಗ ಇಲ್ಲಿಗೆ ಆಗಮಿಸುತ್ತಾರೆ ಎಂಬುದನ್ನು ಕಾದುನೋಡಬೇಕು ಎಂದಿದ್ದಾರೆ. ಹೀಗಾಗಿ ಮಾರ್ಚ್‌ಪಾಸ್ಟ್‌ನಲ್ಲಿ ಭಾರತದ ಧ್ವಜಧಾರಿ ಯಾರು ಎಂಬುದು ಮುಂದಿನ 24 ಗಂಟೆಗಳಲ್ಲಿ ಅಂತಿಮವಾಗಲಿದೆ.” ನೀರಜ್ ಒಬ್ಬರೇ ಲಭ್ಯವಿಲ್ಲದಿದ್ದರೆ ಧ್ವಜಾರೋಹಣದ ಜವಾಬ್ದಾರಿಯನ್ನು ಪಿವಿ ಸಿಂಧು ಅವರಿಗೆ ನೀಡಲಾಗುವುದು. ಬ್ಯಾಡ್ಮಿಂಟನ್ ತಂಡವು ಈಗಾಗಲೇ ಗೇಮ್ಸ್ ವಿಲೇಜ್ ತಲುಪಿದೆ. ಅಲ್ಲದೆ ಸಿಂಧು 2018 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಧ್ವಜಧಾರಿಯಾಗಿದ್ದರು. ಮೇಲಿನ ಎರಡು ಹೆಸರುಗಳ ಹೊರತಾಗಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ರವಿಕುಮಾರ್ ದಹಿಯಾ, ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅಥವಾ ಬಾಕ್ಸರ್ ಲೊವ್ಲಿನಾ ಬಾರ್ಗೋಹಿನ್, ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಝರಿನ್ ಕೂಡ ಧ್ವಜಧಾರಿ ಲಿಸ್ಟ್​ನಲ್ಲಿದ್ದಾರೆ.

Published On - 8:10 pm, Mon, 25 July 22

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು