CWG 2022: ನೀರಜ್, ಸಿಂಧು ಸೇರಿದಂತೆ ಭಾರತದ ಆಟಗಾರರು ಯಾವಾಗ ಮೈದಾನಕ್ಕಿಳಿಯುತ್ತಾರೆ? ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

CWG 2022: ಜುಲೈ 28 ರಿಂದ ಆರಂಭವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಈ ಬಾರಿ 215 ಭಾರತೀಯ ಆಟಗಾರರು ಪದಕಕ್ಕಾಗಿ ಸೆಣಸಾಡಲಿದ್ದಾರೆ.

CWG 2022: ನೀರಜ್, ಸಿಂಧು ಸೇರಿದಂತೆ ಭಾರತದ ಆಟಗಾರರು ಯಾವಾಗ ಮೈದಾನಕ್ಕಿಳಿಯುತ್ತಾರೆ? ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ನೀರಜ್ ಚೋಪ್ರಾ
Follow us
TV9 Web
| Updated By: ಪೃಥ್ವಿಶಂಕರ

Updated on: Jul 25, 2022 | 3:50 PM

ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 (Commonwealth Games 2022)ಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಭಾರತೀಯ ಆಟಗಾರರು ಕೂಡ ಸಂಪೂರ್ಣ ಸಜ್ಜಾಗಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 70ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ. ಜುಲೈ 28 ರಿಂದ ಆರಂಭವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಈ ಬಾರಿ 215 ಭಾರತೀಯ ಆಟಗಾರರು ಪದಕಕ್ಕಾಗಿ ಸೆಣಸಾಡಲಿದ್ದಾರೆ.ಪಿವಿ ಸಿಂಧು, ನೀರಜ್ ಚೋಪ್ರಾ, ಮಣಿಕಾ ಬಾತ್ರಾ ( PV Sindhu, Neeraj Chopra, Manika Batra) ಸೇರಿದಂತೆ ಭಾರತದ ತಾರೆಯರು ಯಾವಾಗ ಮೈದಾನದಲ್ಲಿ ತಮ್ಮ ಶಕ್ತಿ ಪ್ರದರ್ಶಿಸುತ್ತಾರೆ, ಯಾವ ಸಮಯದಲ್ಲಿ ತಮ್ಮ ಪಂದ್ಯವನ್ನು ಆಡುತ್ತಾರೆ ಎಂಬುದರ ಬಗ್ಗೆ ಪೂರ್ಣ ವಿವರ ಇಲ್ಲಿದೆ.

  1. ಬ್ಯಾಡ್ಮಿಂಟನ್ ಪಂದ್ಯಗಳು ಜುಲೈ 29 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 8 ರವರೆಗೆ ನಡೆಯಲಿವೆ. ಪಂದ್ಯಗಳು ಸಂಜೆ 5 ರಿಂದ ಆರಂಭವಾಗಲಿದ್ದು, ಪಿವಿ ಸಿಂಧು, ಗಾಯತ್ರಿ ಗೋಪಿಚಂದ್, ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್, ಸಾತ್ವಿಕ್ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಕಣಕ್ಕಿಳಿಯಲಿದ್ದಾರೆ.
  2. ಬಾಕ್ಸಿಂಗ್ ಪಂದ್ಯಗಳು ಜುಲೈ 29 ರಿಂದ ಆಗಸ್ಟ್ 7 ರವರೆಗೆ ನಡೆಯಲಿವೆ. ಭಾರತೀಯ ಬಾಕ್ಸರ್‌ಗಳು ರಾತ್ರಿ 9 ರಿಂದ ತಮ್ಮ ಸವಾಲನ್ನು ಪ್ರಸ್ತುತಪಡಿಸಲಿದ್ದಾರೆ. ಎಲ್ಲರ ಕಣ್ಣುಗಳು ನಿಖತ್ ಜರೀನ್, ಲೊವ್ಲಿನಾ ಬೊರೆಗೊಹಾನ್ ಮೇಲೆ ಇರುತ್ತದೆ.
  3. ವೇಟ್ ಲಿಫ್ಟಿಂಗ್ ಪಂದ್ಯಗಳು ಜುಲೈ 30 ರಿಂದ ಆಗಸ್ಟ್ 3 ರವರೆಗೆ ನಡೆಯಲಿವೆ. ಪಂದ್ಯಗಳು ಬೆಳಗ್ಗೆ 5 ಗಂಟೆಗೆ ಆರಂಭವಾಗಲಿವೆ. ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು, ಜೆರೆಮಿ ಲಾಲ್ರಿನ್ನುಂಗಾ ಪದಕಕ್ಕೆ ಪ್ರಬಲ ಸ್ಪರ್ಧಿಗಳಾಗಿದ್ದಾರೆ.
  4. ಆಗಸ್ಟ್ 5 ಮತ್ತು 6 ರಂದು ರಾತ್ರಿ 7.30 ರಿಂದ ಕುಸ್ತಿ ಪಂದ್ಯಗಳು ನಡೆಯಲಿವೆ. ಇಡೀ ರಾಷ್ಟ್ರವೇ ಭಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಅವರ ಪ್ರದರ್ಶನಕ್ಕಾಗಿ ಕಾಯುತ್ತಿದೆ.
  5. ಇದನ್ನೂ ಓದಿ
    Image
    CWG 2022: ಕಾಮನ್‌ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ; ಮಹಿಳಾ ಸ್ಟಾರ್ ಕ್ರಿಕೆಟರ್​ಗೆ ಕೊರೊನಾ
    Image
    CWG 2022: ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಪದಕ ಗೆದ್ದಿರುವ 5 ಭಾರತೀಯ ಅಥ್ಲೀಟ್ ದಂಪತಿಗಳ ಬಗ್ಗೆ ನಿಮಗೆಷ್ಟು ಗೊತ್ತು?
    Image
    CWG 2022: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಅತಿ ಹೆಚ್ಚು ಪದಕ ತಂದುಕೊಟ್ಟ ಕ್ರೀಡೆ​ಗಳಿವು
  6. ಅಥ್ಲೆಟಿಕ್ಸ್ ಪಂದ್ಯಗಳು ಜುಲೈ 30 ರಿಂದ ಆಗಸ್ಟ್ 7 ರವರೆಗೆ ನಡೆಯಲಿವೆ. ಬೆಳಗ್ಗೆ 10ರಿಂದ ಅಥ್ಲೆಟಿಕ್ಸ್ ಪಂದ್ಯಗಳು ಆರಂಭವಾಗಲಿವೆ. ಒಲಿಂಪಿಕ್ ಚಾಂಪಿಯನ್‌ಗಳಾದ ನೀರಜ್ ಚೋಪ್ರಾ, ಎಂ ಶ್ರೀಶಂಕರ್, ಹಿಮಾ ದಾಸ್, ದ್ಯುತಿ ಚಂದ್ ಅವರನ್ನು ಪ್ರಶಸ್ತಿಗೆ ಪ್ರಬಲ ಸ್ಪರ್ಧಿಗಳೆಂದು ಪರಿಗಣಿಸಲಾಗಿದೆ.
  7. ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸವಾಲೊಡ್ಡಲು ಭಾರತ ಕ್ರಿಕೆಟ್‌ ತಂಡ ಸಜ್ಜಾಗಿದೆ. ಜುಲೈ 29 ಮತ್ತು ಆಗಸ್ಟ್ 7 ರ ನಡುವೆ, ಕ್ರಿಕೆಟ್ ಪಂದ್ಯಗಳು ಬೆಳಿಗ್ಗೆ 11 ರಿಂದ ನಡೆಯಲಿವೆ. ಜುಲೈ 31 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದೆ. ಸೆಮಿಫೈನಲ್ ಪಂದ್ಯಗಳು ಆಗಸ್ಟ್ 6 ರಂದು ಮತ್ತು ಫೈನಲ್ ಆಗಸ್ಟ್ 7 ರಂದು ನಡೆಯಲಿದೆ.
  8. ಹಾಕಿ ಪಂದ್ಯಗಳು ಜುಲೈ 29 ರಿಂದ ಆಗಸ್ಟ್ 8 ರವರೆಗೆ ನಡೆಯಲಿದ್ದು, ಭಾರತದ ಪುರುಷ ಮತ್ತು ಮಹಿಳಾ ತಂಡದೊಂದಿಗೆ ಘಾನಾ, ಇಂಗ್ಲೆಂಡ್, ಕೆನಡಾ ಮತ್ತು ವೇಲ್ಸ್ ತಂಡಗಳು ಗುಂಪಿನಲ್ಲಿವೆ. ರಾತ್ರಿ 7.30ಕ್ಕೆ ಪುರುಷರ ಮತ್ತು ಮಹಿಳೆಯರ ಪಂದ್ಯಗಳು ಆರಂಭವಾಗಲಿವೆ.
  9. ಜುಲೈ 29ರಿಂದ ಸೈಕ್ಲಿಂಗ್ ಸ್ಪರ್ಧೆಗಳು ಆರಂಭವಾಗಲಿದ್ದು, ಭಾರತದಿಂದ 13 ಆಟಗಾರರು ಸವಾಲನ್ನು ಮಂಡಿಸಲಿದ್ದಾರೆ. ಪುರುಷರ ವಿಭಾಗದಲ್ಲಿ ರೊನಾಲ್ಡೊ ತಂಡವನ್ನು ಮುನ್ನಡೆಸಿದರೆ, ಮಹಿಳೆಯರ ವಿಭಾಗದಲ್ಲಿ ಮಯೂರಿ ಲೂಟ್ ತಂಡವನ್ನು ಮುನ್ನಡೆಸಲಿದ್ದಾರೆ.
  10. ಜೂಡೋ ಪಂದ್ಯಗಳು ಆಗಸ್ಟ್ 1 ರಿಂದ 3 ರವರೆಗೆ ನಡೆಯಲಿವೆ. ಈ ಸ್ಪರ್ಧೆಯಲ್ಲಿ ಭಾರತ 3 ಬೆಳ್ಳಿ ಮತ್ತು 5 ಕಂಚು ಸೇರಿದಂತೆ ಒಟ್ಟು 8 ಪದಕಗಳನ್ನು ಗೆದ್ದಿದೆ, ಆದರೆ ಚಿನ್ನದ ಕಾಯುವಿಕೆ ಇನ್ನೂ ಮುಂದುವರೆದಿದೆ. ಸುಶೀಲಾ ತಂಡದ ಅನುಭವಿ ಆಟಗಾರ್ತಿಯಾಗಿದ್ದು, ಈ ಬಾರಿ ಪದಕದ ಬಣ್ಣ ಬದಲಿಸುವ ನಿರೀಕ್ಷೆ ಇದೆ. 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ್ದರು.
  11. ಸ್ಕ್ವಾಷ್ ಪಂದ್ಯಗಳು ಜುಲೈ 29 ರಿಂದ ಆಗಸ್ಟ್ 8 ರವರೆಗೆ ನಡೆಯಲಿದ್ದು, ಇದರಲ್ಲಿ ಭಾರತ ಒಟ್ಟು 3 ಪದಕಗಳನ್ನು ಗೆದ್ದಿದೆ. ದೀಪಿಕಾ ಪಳ್ಳಿಕಲ್, ಜೋಷ್ನಾ ಚಿನಪ್ಪ ನಿರಂತರವಾಗಿ ಪದಕ ಗೆಲ್ಲುತ್ತಿದ್ದಾರೆ. ಪಂದ್ಯಗಳು ಸಂಜೆ 4.30ಕ್ಕೆ ಆರಂಭವಾಗಲಿವೆ.
  12. ಜುಲೈ 29 ರಿಂದ ಆಗಸ್ಟ್ 8 ರವರೆಗೆ ಟೇಬಲ್ ಟೆನಿಸ್ ಪಂದ್ಯಗಳು ನಡೆಯಲಿವೆ. ಶರತ್ ಕಮಲ್, ಜಿ ಸತ್ಯನ್, ಮನಿಕಾ ಬಾತ್ರಾ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ. ಪಂದ್ಯಗಳು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿವೆ.

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್