CWG 2022: ಸ್ಕ್ವಾಷ್‌ ಸ್ಪರ್ಧೆಯಲ್ಲಿ ಭಾರತದ ಪರ ಪದಕ್ಕಾಗಿ ಸೆಣಸಲಿರುವ 9 ಆಟಗಾರರಿವರು!

CWG 2022: ಇದರಲ್ಲಿ ಭಾರತ ಇದುವರೆಗೆ ಒಟ್ಟು 3 ಪದಕಗಳನ್ನು ಗೆದ್ದಿದೆ. 2014 ರ ಗ್ಲಾಸ್ಗೋ ಕಾಮನ್‌ವೆಲ್ತ್‌ನಲ್ಲಿ ಭಾರತ ಮೊದಲ ಬಾರಿಗೆ ಪದಕ ಗೆದ್ದುಕೊಂಡಿತು ಮತ್ತು ದೀಪಿಕಾ ಪಳ್ಳಿಕಲ್ ಮತ್ತು ಜೋಶ್ನಾ ಚಿನಪ್ಪ ಜೋಡಿಯು ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಗೆದಿದ್ದರು.

CWG 2022: ಸ್ಕ್ವಾಷ್‌ ಸ್ಪರ್ಧೆಯಲ್ಲಿ ಭಾರತದ ಪರ ಪದಕ್ಕಾಗಿ ಸೆಣಸಲಿರುವ 9 ಆಟಗಾರರಿವರು!
TV9kannada Web Team

| Edited By: pruthvi Shankar

Jul 24, 2022 | 5:44 PM

ದೀಪಿಕಾ ಪಲ್ಲಿಕಲ್, ಜೋಷ್ನಾ ಚಿನಪ್ಪ, ಸೌರವ್ ಘೋಸಲ್ ಅವರಿಂತಹ ಸ್ಟಾರ್ ಆಟಗಾರರಿಂದ ಕೂಡಿರುವ ಭಾರತೀಯ ಸ್ಕ್ವಾಷ್ ತಂಡವು ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022) ಕ್ಕೆ ಸಜ್ಜಾಗಿದೆ. ಕಳೆದ ಎರಡು ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಭಾರತೀಯ ಸ್ಕ್ವಾಷ್ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದರಲ್ಲಿ ಭಾರತ ಇದುವರೆಗೆ ಒಟ್ಟು 3 ಪದಕಗಳನ್ನು ಗೆದ್ದಿದೆ. 2014 ರ ಗ್ಲಾಸ್ಗೋ ಕಾಮನ್‌ವೆಲ್ತ್‌ನಲ್ಲಿ ಭಾರತ ಮೊದಲ ಬಾರಿಗೆ ಪದಕ ಗೆದ್ದುಕೊಂಡಿತು ಮತ್ತು ದೀಪಿಕಾ ಪಳ್ಳಿಕಲ್ ಮತ್ತು ಜೋಶ್ನಾ ಚಿನಪ್ಪ ಜೋಡಿಯು ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತದ ಖಾತೆಯನ್ನು ತೆರೆದರು. ಮುಂದಿನ ಕಾಮನ್‌ವೆಲ್ತ್ ಅಂದರೆ 2018 ರ ಗೋಲ್ಡ್ ಕೋಸ್ಟ್‌ನಲ್ಲಿ ಭಾರತ 2 ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು.

14 ವರ್ಷದ ಅನ್ಹತ್ ಮೇಲೆ ಎಲ್ಲರ ಕಣ್ಣು

ದೀಪಿಕಾ ಮತ್ತು ಸೌರವ್ ಘೋಷಾಲ್ ಮಿಶ್ರ ಡಬಲ್ಸ್ ಬೆಳ್ಳಿ ಮತ್ತು ದೀಪಿಕಾ ಮತ್ತು ಚಿನಪ್ಪ ಮಹಿಳೆಯರ ಡಬಲ್ಸ್ ಬೆಳ್ಳಿ ಪದಕ ಗೆದ್ದಿದ್ದಾರೆ. ಮತ್ತೊಮ್ಮೆ ಪದಕದ ಬಣ್ಣ ಬದಲಿಸುವತ್ತ ತಂಡದ ಕಣ್ಣು ನೆಟ್ಟಿದೆ. ಈ ಬಾರಿ 5 ಪುರುಷರು ಮತ್ತು 4 ಮಹಿಳಾ ಆಟಗಾರರು ಭಾರತದ ಸವಾಲನ್ನು ಪ್ರಸ್ತುತಪಡಿಸಲಿದ್ದಾರೆ. ದೀಪಿಕಾ, ಜೋಶ್ನಾ, ಸೌರವ್, ರಮಿತ್ ಟಂಡನ್ ಅವರಲ್ಲದೆ ಎಲ್ಲರ ಕಣ್ಣು ಕೂಡ ಅನ್ಹತ್ ಸಿಂಗ್ ಮೇಲೆಯೇ ಇರುತ್ತದೆ. 14 ವರ್ಷದ ಅನ್ಹತ್ ಯಾವುದೇ ಪ್ರಮುಖ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆ್ಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸ್ಪರ್ಧಿಗಳ ವಿವರ ಹೀಗಿದೆ

ಸೌರವ್ ಘೋಷಾಲ್: ಸೌರವ್ ಘೋಷಾಲ್ ಅವರ ಪ್ರಸ್ತುತ ಶ್ರೇಯಾಂಕ 15 ಆಗಿದ್ದು, ಈ ವರ್ಷ ಅವರು ದೀಪಿಕಾ ಅವರೊಂದಿಗೆ ವಿಶ್ವ ಡಬಲ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ದೀಪಿಕಾ ಪಳ್ಳಿಕಲ್: ಈ ವರ್ಷದ ಆರಂಭದಲ್ಲಿ ಗ್ಲಾಸ್ಗೋದಲ್ಲಿ ನಡೆದ ವಿಶ್ವ ಡಬಲ್ಸ್ ಚಾಂಪಿಯನ್‌ಶಿಪ್‌ನಲ್ಲಿ ದೀಪಿಕಾ ಮಿಶ್ರ ಮತ್ತು ಮಹಿಳೆಯರ ಡಬಲ್ಸ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದರು. ದೀಪಿಕಾ ಡಬಲ್ಸ್ ಸ್ಪೆಷಲಿಸ್ಟ್ ಕೂಡ ಆಗಿದ್ದಾರೆ.

ಜೋಷ್ನಾ ಚಿನಪ್ಪ: 18 ಬಾರಿ ರಾಷ್ಟ್ರೀಯ ಚಾಂಪಿಯನ್ ಮತ್ತು ವಿಶ್ವದ 17 ನೇ ಶ್ರೇಯಾಂಕಿತೆ, ಜೋಷ್ನಾ ಅವರು 2014 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಾಡಿದ ಸಾಧನೆಯನ್ನು ಪುನರಾವರ್ತಿಸಲು ಕಣ್ಣಿಟ್ಟಿದ್ದಾರೆ. 2014ರಲ್ಲಿ ದೀಪಿಕಾ ಜತೆಗೂಡಿ ಭಾರತಕ್ಕೆ ಮೊದಲ ಬಾರಿಗೆ ಜೋಶ್ನಾ ಚಿನ್ನ ತಂದುಕೊಟ್ಟಿದ್ದರು.

ರಮಿತ್ ಟಂಡನ್: ರಮಿತ್ ಟಂಡನ್ ಈ ತಿಂಗಳಲ್ಲೇ ತಮ್ಮ ವೃತ್ತಿಜೀವನದ ಅತ್ಯುತ್ತಮ 36 ನೇ ಶ್ರೇಯಾಂಕವನ್ನು ತಲುಪಿದ್ದಾರೆ. ಏಷ್ಯನ್ ಗೇಮ್ಸ್ ಪದಕ ವಿಜೇತರಾಗಿರುವ ರಮಿತ್ ದೀರ್ಘಕಾಲದವರೆಗೆ ಭಾರತ ತಂಡದ ಭಾಗವಾಗಿದ್ದಾರೆ. ಇದುವರೆಗೆ ರಮಿತ್ ಜೂನಿಯರ್ ಮಟ್ಟದಲ್ಲಿ 6 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

ಪೂರ್ಣ ತಂಡ ಹೀಗಿದೆ

ಪುರುಷರ ತಂಡ: ಸೌರವ್ ಘೋಷಾಲ್, ರಮಿತ್ ಟಂಡನ್, ಅಭಯ್ ಸಿಂಗ್, ಹರಿಂದರ್ ಪಾಲ್ ಸಂಧು, ವೆಲವನ್ ಸೆಂಥಿಲ್‌ಕುಮಾರ್

ಇದನ್ನೂ ಓದಿ

ಮಹಿಳಾ ತಂಡ: ದೀಪಿಕಾ ಪಳ್ಳಿಕಲ್, ಜೋಷ್ನಾ ಚಿನಪ್ಪ, ಸುನಯ್ನಾ ಕುರುವಿಲ್ಲಾ, ಅನ್ಹತ್ ಸಿಂಗ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada