CWG 2022: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾಗವಹಿಸುವ ರಾಷ್ಟ್ರಗಳು ಯಾವುವು ಗೊತ್ತಾ?

Commonwealth Games 2022: ಜುಲೈ 28 ರಿಂದ ಶುರುವಾಗಲಿರುವ ಕಾಮನ್​ವೆಲ್ತ್​ ಗೇಮ್ಸ್​ಗೆ ಆಗಸ್ಟ್ 8 ರಂದು ತೆರೆಬೀಳಲಿದೆ. 2018 ರ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಒಟ್ಟು 66 ಪದಕ ಗೆದ್ದಿದ್ದ ಭಾರತವು ಈ ಬಾರಿ ಕೂಡ ಪದಕ ಪಟ್ಟಿಯಲ್ಲಿ ಟಾಪ್- 5 ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

CWG 2022: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾಗವಹಿಸುವ ರಾಷ್ಟ್ರಗಳು ಯಾವುವು ಗೊತ್ತಾ?
CWG 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jul 25, 2022 | 5:33 PM

22ನೇ ಆವೃತ್ತಿಯ ಕಾಮನ್​ವೆಲ್ತ್ ಗೇಮ್ಸ್​ಗೆ ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಮ್​ನಲ್ಲಿ ಜುಲೈ 28 ರಂದು ಅಧಿಕೃತ ಚಾಲನೆ ದೊರೆಯಲಿದೆ. 1930 ರಲ್ಲಿ ಲಂಡನ್ ಮತ್ತು 2002 ರಲ್ಲಿ ಮ್ಯಾಂಚೆಸ್ಟರ್ ಕ್ರೀಡಾಕೂಟದ ಬಳಿಕ ಇಂಗ್ಲೆಂಡ್ ಕಾಮನ್‌ವೆಲ್ತ್ ಗೇಮ್ಸ್​ ಆಯೋಜಿಸುತ್ತಿರುವುದು ಇದು ಮೂರನೇ ಬಾರಿ ಎಂಬುದು ವಿಶೇಷ. ಈಗಾಗಲೇ ಭಾರತದಿಂದ 200 ಕ್ಕೂ ಅಧಿಕ ಸ್ಪರ್ಧಿಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಿದೆ. ಒಲಿಂಪಿಕ್ಸ್ ಬಳಿಕ ಅತೀ ಹೆಚ್ಚು ರಾಷ್ಟ್ರಗಳು ಭಾಗವಹಿಸುವ ಕ್ರೀಡಾಕೂಟಗಳಲ್ಲಿ ಕಾಮನ್​ವೆಲ್ತ್ ಗೇಮ್ಸ್ ಕೂಡ ಒಂದು. ಹೀಗಾಗಿಯೇ ಈ ಕ್ರೀಡಾಕೂಟದ ಫಲಿತಾಂಶವನ್ನು ಇಡೀ ವಿಶ್ವದ ಕ್ರೀಡಾ ಪ್ರೇಮಿಗಳು ಎದುರು ನೋಡುತ್ತಿರುತ್ತಾರೆ.

ಕಾಮನ್‌ವೆಲ್ತ್ ಎಂದರೇನು? ಕಾಮನ್​ವೆಲ್ತ್ ಎಂಬುದು 1949 ರಲ್ಲಿ ಔಪಚಾರಿಕ ಸಂವಿಧಾನದ ಮೂಲಕ ಸ್ಥಾಪಿತವಾದ ರಾಷ್ಟ್ರಗಳ ಒಕ್ಕೂಟ. ಈ ಒಕ್ಕೂಟದಲ್ಲಿ ಪ್ರಸ್ತುತ 56 ಸದಸ್ಯ ರಾಷ್ಟ್ರಗಳಿವೆ.  ವಿಶೇಷ ಎಂದರೆ ಈ ಹಿಂದೆ ಬ್ರಿಟಿಷರು ವಸಾಹತು ಹೊಂದಿದ್ದ ಬಹುಪಾಲು ರಾಷ್ಟ್ರಗಳು ಕಾಮನ್​ವೆಲ್ತ್​ ಒಕ್ಕೂಟದಲ್ಲಿದೆ. ರಾಜಕೀಯ, ಆರ್ಥಿಕ ಮತ್ತು ಮಾನವೀಯ ದೃಷ್ಟಿಕೋನದಲ್ಲಿ ಇಂತಹದೊಂದು ಒಕ್ಕೂಟವನ್ನು ರೂಪಿಸಲಾಗಿದೆ. ದೇಶಗಳ ಸಮೃದ್ಧಿ, ಪ್ರಜಾಪ್ರಭುತ್ವ ಮತ್ತು ಶಾಂತಿ ಈ ಒಕ್ಕೂಟದ ಮೂಲ ಧ್ಯೇಯವಾಗಿದೆ. ಇನ್ನು ಸರಳವಾಗಿ ಹೇಳಬೇಕೆಂದರೆ ಕಾಮನ್​ವೆಲ್ತ್ ಸದಸ್ಯ ರಾಷ್ಟ್ರವಾಗಿರುವ ಭಾರತಕ್ಕೆ ಯಾವುದಾದರೂ ಸಂದಿಗ್ಧ ಪರಿಸ್ಥಿತಿ ಎದುರಾದರೆ ಕಾಮನ್​ವೆಲ್ತ್​ ದೇಶಗಳಿಂದ ನೆರವು ಸಿಗಲಿದೆ. ಅಂದರೆ ಇಲ್ಲಿ ಎಲ್ಲಾ ರಾಷ್ಟ್ರಗಳು ಒಕ್ಕೂಟದೊಂದಿಗೆ ಒಗ್ಗಟ್ಟು ಪ್ರದರ್ಶಿಸಲಿದೆ.

ಏನಿದು ಕಾಮನ್‌ವೆಲ್ತ್ ಗೇಮ್ಸ್? ಕಾಮನ್‌ವೆಲ್ತ್ ಕ್ರೀಡಾಕೂಟವು ಬಹು-ಕ್ರೀಡಾ ಸ್ಪರ್ಧೆಯಾಗಿದ್ದು, ಇದನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಕಾಮನ್​ವೆಲ್ತ್ ಒಕ್ಕೂಟ ಸದಸ್ಯ ರಾಷ್ಟ್ರಗಳು ಮಾತ್ರ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತವೆ. ಸದ್ಯ ಕಾಮನ್​ವೆಲ್ತ್​ ಒಕ್ಕೂಟದಲ್ಲಿ 56 ಸದಸ್ಯ ರಾಷ್ಟ್ರಗಳಿವೆ. ಇದಲ್ಲದೆ ಒಲಿಂಪಿಕ್ಸ್‌ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸದ ಇತರ ಪ್ರಾಂತ್ಯಗಳಿಗೂ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಅದರಂತೆ ಈ ಬಾರಿ 72 ಧ್ವಜಗಳ ಅಡಿಯಲ್ಲಿ 5 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ USA ತಂಡವಿದೆಯೇ? ಯುಎಸ್ಎ ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದರೂ ಸಹ, ಕಾಮನ್​ವೆಲ್ತ್​ನ ಭಾಗವಲ್ಲ. ಹೀಗಾಗಿ ಯುಎಸ್​ಎ ತಂಡವು ಇದುವರೆಗೆ ಈ ಕ್ರೀಡಾಕೂಟದಲ್ಲಿ ಕಾಣಿಸಿಕೊಂಡಿಲ್ಲ.

ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಭಾಗವಹಿಸಲು ರಾಷ್ಟ್ರಗಳು ಯಾವುವು?

  1. ಭಾರತ
  2. ಅಂಗುಯಿಲಾ
  3. ಆಂಟಿಗುವಾ ಮತ್ತು ಬಾರ್ಬುಡಾ
  4. ಆಸ್ಟ್ರೇಲಿಯಾ
  5. ಬಹಾಮಾಸ್
  6. ಬಾಂಗ್ಲಾದೇಶ
  7. ಬಾರ್ಬಡೋಸ್
  8. ಬೆಲೀಜ್
  9. ಬರ್ಮುಡಾ
  10. ಬೋಟ್ಸ್ವಾನ
  11. ಬ್ರಿಟಿಷ್ ವರ್ಜಿನ್ ದ್ವೀಪಗಳು
  12. ಬ್ರೂನೈ
  13. ಕ್ಯಾಮರೂನ್
  14. ಕೆನಡಾ
  15. ಕೇಮನ್ ದ್ವೀಪಗಳು
  16. ಕುಕ್ ದ್ವೀಪಗಳು
  17. ಸೈಪ್ರಸ್
  18. ಡೊಮಿನಿಕಾ
  19. ಇಂಗ್ಲೆಂಡ್
  20. ಎಸ್ವತಿನಿ
  21. ಫಾಕ್ಲ್ಯಾಂಡ್ ದ್ವೀಪಗಳು
  22. ಫಿಜಿ
  23. ಗ್ಯಾಂಬಿಯಾ
  24. ಘಾನಾ
  25. ಜಿಬ್ರಾಲ್ಟರ್
  26. ಗ್ರೆನಡಾ
  27. ಗುರ್ನಸಿ
  28. ಗಯಾನಾ
  29. ಐಲ್ ಆಫ್ ಮ್ಯಾನ್
  30. ಜಮೈಕಾ
  31. ಜರ್ಸಿ
  32. ಕೀನ್ಯಾ
  33. ಕಿರಿಬಾಟಿ
  34. ಲೆಸೊಥೊ
  35. ಮಲಾವಿ
  36. ಮಲೇಷ್ಯಾ
  37. ಮಾಲ್ಡೀವ್ಸ್
  38. ಮಾಲ್ಟಾ
  39. ಮಾರಿಷಸ್
  40. ಮಾಂಟ್ಸೆರಾಟ್
  41. ಮೊಜಾಂಬಿಕ್
  42. ನಮೀಬಿಯಾ
  43. ನೌರು
  44. ನ್ಯೂಜಿಲ್ಯಾಂಡ್
  45. ನೈಜೀರಿಯಾ
  46. ನಿಯು
  47. ನಾರ್ಫೋಕ್ ದ್ವೀಪ
  48. ಉತ್ತರ ಐರ್ಲೆಂಡ್
  49. ಪಾಕಿಸ್ತಾನ
  50. ಪಪುವ ನ್ಯೂ ಗಿನಿಯಾ
  51. ರುವಾಂಡಾ
  52. ಸೇಂಟ್ ಹೆಲೆನಾ
  53. ಸೇಂಟ್ ಕಿಟ್ಸ್ ಮತ್ತು ನೆವಿಸ್
  54. ಸೇಂಟ್ ಲೂಸಿಯಾ
  55. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
  56. ಸಮೋವಾ
  57. ಸ್ಕಾಟ್ಲೆಂಡ್
  58. ಸೀಶೆಲ್ಸ್
  59. ಸಿಯೆರಾ ಲಿಯೋನ್
  60. ಸಿಂಗಾಪುರ
  61. ಸೊಲೊಮನ್ ದ್ವೀಪಗಳು
  62. ದಕ್ಷಿಣ ಆಫ್ರಿಕಾ
  63. ಶ್ರೀಲಂಕಾ
  64. ಟಾಂಜಾನಿಯಾ
  65. ಟಾಂಗಾ
  66. ಟ್ರಿನಿಡಾಡ್ – ಟೊಬಾಗೊ
  67. ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು
  68. ಟುವಾಲು
  69. ಉಗಾಂಡಾ
  70. ವನವಾಟು
  71. ವೇಲ್ಸ್
  72. ಜಾಂಬಿಯಾ

ಜುಲೈ 28 ರಿಂದ ಶುರುವಾಗಲಿರುವ ಕಾಮನ್​ವೆಲ್ತ್​ ಗೇಮ್ಸ್​ಗೆ ಆಗಸ್ಟ್ 8 ರಂದು ತೆರೆಬೀಳಲಿದೆ. 2018 ರ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಒಟ್ಟು 66 ಪದಕ ಗೆದ್ದಿದ್ದ ಭಾರತವು ಈ ಬಾರಿ ಕೂಡ ಪದಕ ಪಟ್ಟಿಯಲ್ಲಿ ಟಾಪ್- 5 ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

Published On - 5:33 pm, Mon, 25 July 22

ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ