ಬೆಂಗಳೂರಿನಲ್ಲಿ ನಕಲಿ ಬ್ರ್ಯಾಂಡೆಡ್ ಬಟ್ಟೆ ಗೋದಾಮಿನ ಮೇಲೆ ಸಿಸಿಬಿ ದಾಳಿ; 4 ಲಕ್ಷ ರೂ. ಮೌಲ್ಯದ ಬಟ್ಟೆಗಳು ಸೀಜ್
ಪ್ಲಸ್ ಗಾರ್ಮೆಂಟ್ ಹೆಸರಿನ ಗೋದಾಮಿನಲ್ಲಿ ಪ್ರತಿಷ್ಠಿತ ಕಂಪನಿಗಳ ನಕಲಿ ಲೇಬಲ್ ಅಂಟಿಸಿ ಬಟ್ಟೆಗಳನ್ನ ಮಾರಾಟ ಮಾಡುತ್ತಿದ್ದರು.
ಬೆಂಗಳೂರು: ನಗರದಲ್ಲಿ ನಕಲಿ ಬ್ರ್ಯಾಂಡೆಡ್ ಬಟ್ಟೆ (Cloth) ಗೋದಾಮಿನ ಮೇಲೆ ಇಂದು ಸಿಸಿಬಿ ಅಧಿಕಾರಿಗಳು (CCB Officials) ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ನಕಲಿ ಬ್ರ್ಯಾಂಡೆಡ್ ಬಟ್ಟೆಗಳನ್ನ ಸೀಜ್ ಮಾಡಲಾಗಿದೆ. ಪ್ಲಸ್ ಗಾರ್ಮೆಂಟ್ ಹೆಸರಿನ ಗೋದಾಮಿನಲ್ಲಿ ಪ್ರತಿಷ್ಠಿತ ಕಂಪನಿಗಳ ನಕಲಿ ಲೇಬಲ್ ಅಂಟಿಸಿ ಬಟ್ಟೆಗಳನ್ನ ಮಾರಾಟ ಮಾಡುತ್ತಿದ್ದರು. ಈ ಸಂಬಂಧ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಮಾಲೀಕನ ವಿರುದ್ಧ ಕಾಪಿ ರೈಟ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ವಿರುದ್ಧ ದೂರು: ರಜೆ ನೀಡದೆ ನಿತ್ಯ ಕಿರಿಕಿರಿ ನೀಡುತ್ತಿದ್ದಾರೆಂದು ಆರೋಪಿಸಿ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ವಿರುದ್ಧ ದೂರು ದಾಖಲಾಗಿದೆ. ಡಿಸಿಪಿ ಅಶೋಕ್ ಆರ್.ಜುಂಜರವಾಡ ವಿರುದ್ಧ ಪೊಲೀಸ್ ಜೀಪ್ ಚಾಲಕ ಪವನ್ ದೂರು ನೀಡಿದ್ದಾರೆ. ತನ್ನ ಕೈಕೆಳಗೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಕಿರುಕುಳ ನೀಡುತ್ತಾರೆ. ಮಕ್ಕಳನ್ನ ಶಾಲೆಗೆ ಬಿಡಲು ಸರ್ಕಾರಿ ವಾಹನವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆಂದು ಚಾಲಕ ಪವನ್ ದೂರು ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ವಿಧಾನಸೌಧ ಡಿಸಿಪಿಯಾಗಿಯೇ ಮುಂದುವರೆದಿದ್ದಾರೆ. ಕರ್ತವ್ಯದ ಸಮಯದಲ್ಲಿ ಅಪಘಾತವಾದರೆ ಡಿಸಿಪಿ ಹೊಣೆ ಎಂದು ಉಲ್ಲೇಖ ಮಾಡಿರುವ ಪವನ್ ದೂರಿನ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ರಾಯಚೂರು: ಸಿಂಧನೂರು ಬಳಿ ವಿದ್ಯುತ್ ಕಂಬಕ್ಕೆ ಗುದ್ದಿ ನೆಲಕ್ಕುರುಳಿತು ಶಾಲಾ ವಾಹನ, ಮಕ್ಕಳೆಲ್ಲ ಸುರಕ್ಷಿತ
ಬಿಎಂಟಿಸಿಗೆ ಈಗ ಡೀಸೆಲ್ ಅಭಾವ: 746 ಕೋಟಿ ನಷ್ಟದಲ್ಲಿರುವ ಬಿಎಂಟಿಸಿಗೆ ಈಗ ಡೀಸೆಲ್ ಅಭಾವ ಉಂಟಾಗಿದೆ. ಬಿಎಂಟಿಸಿಗೆ ಪ್ರತಿನಿತ್ಯ 2.40 ಲಕ್ಷ ಲೀಟರ್ ಡೀಸೆಲ್ ಅಗತ್ಯವಿದೆ. ಡೀಸೆಲ್ ಕೊರತೆಯಿಂದಾಗಿ ಬಿಎಂಟಿಸಿಗೆ ಫುಲ್ ಟೆನ್ಷನ್ ಶುರುವಾಗಿದೆ. 48 ಡಿಪೋಗಳಲ್ಲಿ 4-5 ದಿನದಲ್ಲಿ ಡೀಸೆಲ್ ಸಂಪೂರ್ಣವಾಗಿ ಖಾಲಿಯಾಗುತ್ತದೆ. ಖಾಸಗಿ ಬಂಕ್ಗಳಲ್ಲಿ ಡೀಸೆಲ್ ಹಾಕಿಸಿದರೆ ಬಸ್ ಸಂಚಾರ ಕಡಿಮೆಯಾಗುತ್ತದೆ.
ಇದನ್ನೂ ಓದಿ: ವೃದ್ಧಾಪ್ಯ, ವಿಧವಾ ವೇತನಕ್ಕಾಗಿ ನಸುಕಿನ 4 ಗಂಟೆಯಿಂದಲೇ ಕ್ಯೂ- ಮೂರ್ನಾಲ್ಕು ದಿನ ಅಲೆದಾಡಿದರೂ ಸಮಯಕ್ಕೆ ಕೈ ಸೇರುತ್ತಿಲ್ಲ ಹಣ
Published On - 3:12 pm, Tue, 28 June 22