ಗುಂಡಿ ಬಿದ್ದ ಪ್ರದೇಶದಲ್ಲಿ ಯಾವುದೇ ನೀರು ಸೋರಿಕೆ ಆಗಿಲ್ಲ, ಬಿಬಿಎಂಪಿ ನಮಗೆ ಯಾವುದೇ ಪತ್ರ ಬರೆದಿಲ್ಲ: ಬೆಂಗಳೂರು ಜಲಮಂಡಳಿ
ಗುಂಡಿ ಬೀಳಲು BWSSB ಪೈಪ್ ಲೀಕೇಜ್ ಕಾರಣ ಅಂತಾರೆ, ಆದರೆ ಗುಂಡಿ ಬಿದ್ದ ಪ್ರದೇಶದಲ್ಲಿ ಯಾವುದೇ ನೀರು ಸೋರಿಕೆ ಆಗಿಲ್ಲ, ಸ್ಥಳದಲ್ಲಿ ಹಾದು ಹೋದ ಕೊಳವೆ ಮಾರ್ಗಗಳಿಂದ ಸೋರಿಕೆ ಆಗಿಲ್ಲ, ಮಳೆ ಬಂದಾಗ ಈ ಸ್ಥಳದಲ್ಲಿ ನೀರು ಬರುತ್ತೆಂದು ಸ್ಥಳೀಯರು ತಿಳಿಸಿದ್ದಾರೆ BWSSB ಕಾಮಗಾರಿ ಅಥವಾ ನೀರು ಸೋರಿಕೆಯಿಂದ ಈ ಸಮಸ್ಯೆ ಕಂಡುಬಂದಿಲ್ಲ ಎಂದು ಬಿಬಿಎಂಪಿ ಆಯುಕ್ತರಿಗೆ BWSSB ಅಧ್ಯಕ್ಷ ಜಯರಾಮ್ ಪತ್ರ ಬರೆದಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕರ್ನಾಟಕ ಭೇಟಿ ವೇಳೆ ಬೆಂಗಳೂರು ವಿವಿಯಿಂದ ಮರಿಯಪ್ಪನ ಪಾಳ್ಯದ ಕಡೆ ಹೋಗುವ ಮಾರ್ಗದ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಮಿಕ್ಸ್ ರಸ್ತೆಗಳಲ್ಲಿ ಕಾಮಗಾರಿ ನಿರ್ವಹಿಸಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದ ಎರಡೇ ದಿನಕ್ಕೆ ರಸ್ತೆ ಹಾಳಾಗಿತ್ತು. ಬಿಬಿಎಂಪಿ ಕಳಪೆ ರಸ್ತೆ ನಿರ್ಮಿಸಿದ್ದರ ಸುದ್ದಿ ರಾಷ್ಟ್ರ ಮಟ್ಟದಲ್ಲಿ ಕೂಡ ಸುದ್ದಿ ಆಯ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20ರಂದು ಬೆಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ 23 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ ರಸ್ತೆಗಳು ಹಾಳಾಗಿದ್ದವು. ಕಳಪೆ ಕಾಮಗಾರಿಯು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ, ಪ್ರಧಾನಿ ಕಾರ್ಯಾಲಯ ವರದಿ ಕೇಳಿತ್ತು. ಪ್ರಧಾನಿ ಕಚೇರಿ ಕೇಳಿದ್ದ ವರದಿ ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಮುಖ್ಯಮಂತ್ರಿ ಕಚೇರಿ ಸೂಚನೆ ನೀಡಿತ್ತು. ಆದರೆ ಇದೀಗ ಈ ಪ್ರಕರಣ ಅರೋಪ -ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಪ್ರಧಾನಿ ಮೋದಿ ಭೇಟಿ ವೇಳೆ ಕಳಪೆ ಕಾಮಗಾರಿ ಕುರಿತು ಬಿಬಿಎಂಪಿ, BWSSB ನಡುವೆ ಫೈಟ್ ನಡೆಯುತ್ತಿದೆ. ರಸ್ತೆ ಗುಂಡಿ ವಿಚಾರದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಇದೀಗ ಬಿಬಿಎಂಪಿ ರಸ್ತೆ ಗುಂಡಿಗೆ BWSSB ಮೇಲೆ ಗೂಬೆ ಕೂರಿಸಲು ಪ್ರಯತ್ನ ಮಾಡತ್ತಿದೆ ಎನ್ನಲಾಗುತ್ತಿದೆ. BBMP ಪಾಲಿಕೆ ಆಯುಕ್ತರ ಆರೋಪಕ್ಕೆ BWSSB ತಿರುಗೇಟು ನೀಡಿದೆ. ಗುಂಡಿ ಬೀಳಲು BWSSB ಪೈಪ್ ಲೀಕೇಜ್ ಕಾರಣ ಅಂತಾರೆ, ಆದರೆ ಗುಂಡಿ ಬಿದ್ದ ಪ್ರದೇಶದಲ್ಲಿ ಯಾವುದೇ ನೀರು ಸೋರಿಕೆ ಆಗಿಲ್ಲ, ಸ್ಥಳದಲ್ಲಿ ಹಾದು ಹೋದ ಕೊಳವೆ ಮಾರ್ಗಗಳಿಂದ ಸೋರಿಕೆ ಆಗಿಲ್ಲ, ಮಳೆ ಬಂದಾಗ ಈ ಸ್ಥಳದಲ್ಲಿ ನೀರು ಬರುತ್ತೆಂದು ಸ್ಥಳೀಯರು ತಿಳಿಸಿದ್ದಾರೆ, ಎಂದು ಬಿಬಿಎಂಪಿ ಆಯುಕ್ತರಿಗೆ BWSSB ಅಧ್ಯಕ್ಷ ಜಯರಾಮ್ ಪತ್ರ ಬರೆದಿದ್ದಾರೆ.
ಇದನ್ನು ಓದಿ : ಕಳಪೆ ರಸ್ತೆ ಬಗ್ಗೆ ಪ್ರಧಾನಿ ಕಚೇರಿಗೆ ತಪ್ಪು ಮಾಹಿತಿ ಕೊಟ್ಟ ಬಿಬಿಎಂಪಿ: ಗುತ್ತಿಗೆದಾರನ ರಕ್ಷಣೆಗೆ ಯತ್ನಿಸುತ್ತಿರುವ ಆರೋಪ
ಮರಿಯಪ್ಪನ ಪಾಳ್ಯದಲ್ಲಿ ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನಿಗೆ ದಂಡ ಹಾಕದಿರಲು ಸೂಚನೆ ನೀಡಲಾಗಿದೆ. ಗುತ್ತಿಗೆದಾರನಿಗೆ ದಂಡ ಹಾಕಿದರೆ ಕಳಪೆ ಕಾಮಗಾರಿ ಎಂದು ಒಪ್ಪಿಕೊಂಡಂತೆ ಆಗುತ್ತದೆ. ಹೀಗಾಗಿ ದಂಡ ಹಾಕಬೇಡಿ ಎಂದು ಸ್ಥಳೀಯ ಅಧಿಕಾರಿಗಳಿಗೆ ಉನ್ನತ ಅಧಿಕಾರಿಗಳು ಮೌಖಿಕ ಆದೇಶ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಬಿಬಿಎಂಪಿ ಪಶ್ಚಿಮ ವಿಭಾಗದ ಕಿರಿಯ ಇಂಜಿನಿಯರ್ ಮನೋಜ್ ಕುಮಾರ್ ಕೂಡ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನ್ನ ಕುಟುಂಬ ಜೊತೆಗೆ ಈ ರಸ್ತೆಯಲ್ಲಿ ಹೋಗುವಾಗ ಈ ಸಮಸ್ಯೆಯನ್ನು ಗಮನಿಸಿದ್ದಾರೆ. ಅವರು ಕೂಡ ಒಂದು ಬಾರಿ ಅಚ್ಚರಿಗೊಂಡಿದ್ದಾರೆ. ಅವರು ಇಲ್ಲಿಗೆ ಎರಡನೇ ಬಾರಿ ಕಾಮಗಾರಿಯನ್ನು ಮಾಡಿಸುತ್ತಿದ್ದೇನೆ, ಆದರೆ ಈಗ BWSSB ಕಾಮಗಾರಿ ಅಥವಾ ನೀರು ಸೋರಿಕೆಯಿಂದ ಈ ಸಮಸ್ಯೆ ಕಂಡು ಬಂದಿದೆ ಎಂದು ಹೇಳಿದ್ದಾರೆ.
ಗುತ್ತಿಗೆದಾರರನ್ನು ಕಾಪಾಡಲು ಈ ರೀತಿ ಬಿಬಿಎಂಪಿ ನಮ್ಮ ಮೇಲೆ ಆರೋಪ ಮಾಡಿ ಎಂದು ಬಿಡಬ್ಲ್ಯೂಎಸ್ಎಸ್ಬಿಯು ಹೇಳಿದೆ. ಗುಂಡಿ ಬಿದ್ದ ಪ್ರದೇಶದಲ್ಲಿ ಯಾವುದೇ ನೀರು ಸೋರಿಕೆ ಆಗಿಲ್ಲ, ಸ್ಥಳದಲ್ಲಿ ಹಾದು ಹೋದ ಕೊಳವೆ ಮಾರ್ಗಗಳಿಂದ ಸೋರಿಕೆ ಆಗಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಈಗಾಗಲ್ಲೇ ಬಿಬಿಎಂಪಿ BWSSB ಕಾರ್ಯಪಾಲಕರಿಗೆ ಪತ್ರವನ್ನು ಬರೆದಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬಿಬಿಎಂಪಿ ಹೇಳಿದೆ.
BWSSBನ ಕಾರ್ಯ ನಿರ್ವಾಹಕ ಇಂಜಿನಿಯರ್ ಸೌಮ್ಯ ರಾಣಿ ವಾಲ್ವ್ನಿಂದ ಯಾವುದೇ ನೀರಿನ ಸೋರಿಕೆ ಆಗಿಲ್ಲ ಮತ್ತು ಬಿಬಿಎಂಪಿಯಿಂದ ಯಾವುದೇ ವರದಿ ಬಂದಿಲ್ಲ ಎಂದು ಹೇಳಿದ್ದಾರೆ. ನಾವು ಸ್ಥಳೀಯ ವಾಹನ ಸವಾರರಿಗೆ ಈ ರಸ್ತೆಯಿಂದ ಯಾವುದೇ ಅಪಾಯವಾಗದಂತೆ ಟ್ರಾಫಿಕ್ ಪೊಲೀಸರಲ್ಲಿ ಈ ಪ್ರದೇಶದಲ್ಲಿ ಬ್ಯಾರಿಕೇಡ್ ಹಾಕುವಂತೆ ಸಲಹೆ ನೀಡದ್ದೇವೆ ಎಂದಿದ್ದಾರೆ.
Published On - 2:56 pm, Tue, 28 June 22