AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ನಗರ ಪೊಲೀಸ್ ಆಯುಕ್ತರಿಂದ ಇಂದು ಮಹತ್ವದ ಸಭೆ

Bengaluru Traffic: 6 ತಿಂಗಳಲ್ಲಿ ಟ್ರಾಫಿಕ್ ನಿಯಂತ್ರಿಸಲು ಸೂಚನೆ ನೀಡಿರುವ ಹಿನ್ನೆಲೆ ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸಂಚಾರಿ ವಿಭಾಗದ ಹಿರಿಯ ಅಧಿಕಾರಿಗಳನ್ನ ಸಭೆಗೆ ಕರೆದಿದ್ದಾರೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ನಗರ ಪೊಲೀಸ್ ಆಯುಕ್ತರಿಂದ ಇಂದು ಮಹತ್ವದ ಸಭೆ
ಬೆಂಗಳೂರು ಟ್ರಾಫಿಕ್ (ಸಂಗ್ರಹ ಚಿತ್ರ)
TV9 Web
| Updated By: sandhya thejappa|

Updated on:Jun 28, 2022 | 12:25 PM

Share

ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಜಾಮ್​ನಿಂದ (Traffic Jam) ಪ್ರಯಾಣಿಕರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಹೀಗಾಗಿ ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಗಡುವು ನೀಡಿದ್ದು, ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಇಂದು ಮಹತ್ವದ ಸಭೆ ನಡೆಸಲಿದ್ದಾರೆ. 6 ತಿಂಗಳಲ್ಲಿ ಟ್ರಾಫಿಕ್ ನಿಯಂತ್ರಿಸಲು ಸೂಚನೆ ನೀಡಿರುವ ಹಿನ್ನೆಲೆ ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸಂಚಾರಿ ವಿಭಾಗದ ಹಿರಿಯ ಅಧಿಕಾರಿಗಳನ್ನ ಸಭೆಗೆ ಕರೆದಿದ್ದಾರೆ. ನಗರ ಪೊಲೀಸ್ ಆಯಕ್ತರ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಕೆಲ ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ನಿನ್ನೆಯೂ ಕಮಿಷನರ್ ರವಿಕಾಂತೇಗೌಡ ಸಂಚಾರಿ ಠಾಣೆ ಇನ್ಸ್​ಪೆಕ್ಟರ್​ ಜೊತೆ ಸಭೆ ನಡೆಸಿದ್ದರು. ಪ್ರಧಾನಿ ಸೂಚನೆ ಬಳಿಕ ಈಗಾಗಗಲೇ ಬೆಂಗಳೂರಿನಲ್ಲಿ ಎರಡು ಮಹತ್ವದ ಸಭೆ ನಡೆದಿವೆ. ಸದ್ಯ ಪೊಲೀಸರು 10 ಟ್ರಾಫಿಕ್ ಜಂಕ್ಷನ್ ಗುರುತಿಸಿದ್ದಾರೆ. ಸಿಲ್ಕ್ ಬೋರ್ಡ್, ಜಯದೇವ, ಹೆಬ್ಬಾಳ, ಕೆ.ಆರ್ಪುರಂ, ಗೊರಗುಂಟೆಪಾಳ್ಯ, ಮೈಸೂರು ರಸ್ತೆ ಸೇರಿದಂತೆ 10 ಜಂಕ್ಷನ್ನಲ್ಲಿ ಸುಗಮ ಸಂಚಾರ ನಿರ್ಮಾಣ ಕ್ರಮದ ಬಗ್ಗೆ ಇಂದು ಚರ್ಚೆ ಮಾಡಲಾಗುತ್ತದೆ.

ಪ್ರಮುಖ ಜಂಕ್ಷನ್​ಗಳಲ್ಲಿ ಟ್ರಾಫಿಕ್ ನಿಯಂತ್ರಣ ಸೇರಿದಂತೆ ಮೊದಲು ಆಗಬೇಕಿರುವ ಪ್ರಮುಖ 50 ವಿಚಾರಗಳ ಬಗ್ಗೆ ಪಟ್ಟಿ ಸಿದ್ಧಪಡಿಸಿ ಪೊಲೀಸರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೀಡಿದ್ದಾರೆ.

ಇದನ್ನೂ ಓದಿ
Image
NPS: ಸರ್ಕಾರದ ಈ​ ಸ್ಕೀಮ್​ನಲ್ಲಿ ಹಣ ತೊಡಗಿಸಿದರೆ 2 ಲಕ್ಷ ರೂಪಾಯಿ ತಿಂಗಳ ಪೆನ್ಷನ್ ನಿರೀಕ್ಷಿಸಬಹುದು
Image
Kichcha Sudeep: ತಮ್ಮ ಮನೆಗೆ ಬಂದು ಬೇರೆ ಹೀರೋ ಬಗ್ಗೆ ನೆಗೆಟಿವ್​ ಮಾತಾಡಿದ್ರೆ ಸುದೀಪ್​ ಗರಂ ಆಗ್ತಾರೆ; ಯಾಕೆ?
Image
ಕೊಡಗು ಜಿಲ್ಲೆಯ ಕೆಲಭಾಗಗಳಲ್ಲಿ ಪುನಃ ಭೂಕಂಪದ ಅನುಭವ, ಮೂರು ದಿನಗಳ ಹಿಂದೆಯೂ ಭೂಮಿ ಕಂಪಿಸಿತ್ತು!
Image
ಕರ್ನಾಟಕದಲ್ಲಿ 33 ಲಕ್ಷ ರೈತರಿಗೆ ಸಾಲ ಕೊಡಲು ನಿರ್ಧಾರ; ಸಚಿವ ಎಸ್​ಟಿ ಸೋಮಶೇಖರ್ ಮಾಹಿತಿ

ಇದನ್ನೂ ಓದಿ: NPS: ಸರ್ಕಾರದ ಈ​ ಸ್ಕೀಮ್​ನಲ್ಲಿ ಹಣ ತೊಡಗಿಸಿದರೆ 2 ಲಕ್ಷ ರೂಪಾಯಿ ತಿಂಗಳ ಪೆನ್ಷನ್ ನಿರೀಕ್ಷಿಸಬಹುದು

ಅಧಿಕಾರಿಗಳಿಗೆ ಸಿಎಂ ಸೂಚನೆ: ನಗರದಲ್ಲಿ ಟ್ರಾಫಿಕ್ ನಿಯಂತ್ರಣ ಬಗ್ಗೆ ಈಗಾಗಲೇ ಸಭೆ ನಡೆಸಿರುವ ಸಿಎಂ ಬೊಮ್ಮಾಯಿ, ಟ್ರಾಫಿಕ್ ಜಾಮ್​ ಸ್ಥಳಗಳೆನಿಸಿದ ಹೆಬ್ಬಾಳ ಫ್ಲೈಓವರ್ ಮತ್ತು ಸಿಲ್ಕ್​ ರೋಡ್ ಜಂಕ್ಷನ್ ಸೇರಿ 10 ಸ್ಥಳಗಳಲ್ಲಿ ವಾಹನಸಂದಣಿ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: NPS: ಸರ್ಕಾರದ ಈ​ ಸ್ಕೀಮ್​ನಲ್ಲಿ ಹಣ ತೊಡಗಿಸಿದರೆ 2 ಲಕ್ಷ ರೂಪಾಯಿ ತಿಂಗಳ ಪೆನ್ಷನ್ ನಿರೀಕ್ಷಿಸಬಹುದು

Published On - 12:18 pm, Tue, 28 June 22