ಮೀನುಗಳು ಸಾಯುವ, ವಲಸೆ ಹಕ್ಕಿಗಳು ಮುಖ ತಿರುಗಿಸುವ ಮೊದಲು ಕೆರೆ ಸ್ವಚ್ಛಗೊಳಿಸಿ: ಹರೀಶ್ ಬಿಜ್ಜೂರ್

ಕೆರೆಯನ್ನು ರಕ್ಷಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿಗೆ ಮನವಿ ಮಾಡಿದ್ದಾರೆ.

ಮೀನುಗಳು ಸಾಯುವ, ವಲಸೆ ಹಕ್ಕಿಗಳು ಮುಖ ತಿರುಗಿಸುವ ಮೊದಲು ಕೆರೆ ಸ್ವಚ್ಛಗೊಳಿಸಿ: ಹರೀಶ್ ಬಿಜ್ಜೂರ್
ಹರೀಸ್ ಬಿಜೂರ್ ಹಂಚಿಕೊಂಡಿರುವ ವಿಡಿಯೊದ ಸ್ಕ್ರೀನ್​ಗ್ರಾಬ್
TV9kannada Web Team

| Edited By: Sushma Chakre

Jun 28, 2022 | 10:14 AM

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಪರಿಸರದ ಅಂದವನ್ನು ಹದಗೆಡಿಸುತ್ತಿದೆ. ಸುಂದವಾದ ಕೆಲೆಗಳು ಮಲಿನಗೊಳ್ಳುತ್ತಿವೆ. ಈ ನಡುವೆ ಖ್ಯಾತ ಅಂಕಣಕಾರ ಹಾಗು ಬ್ರ್ಯಾಂಡ್ ಸ್ಟ್ರಾಟೆಜಿಸ್ಟ್ ಹರೀಶ್ ಬಿಜ್ಜೂರ್ ಅವರು ಕಾಡುಗೊಂಡನಹಳ್ಳಿ ಕೆರೆ ಮಲಿನಗೊಳ್ಳುತ್ತಿರುವ ಕುರಿತು ಕೂ ಮಾಡಿದ್ದಾರೆ. ಕೆರೆಗಳ ನಗರ ಎಂದೇ ಪ್ರಸಿದ್ಧಿ ಗಳಿಸಿದ್ದ ಉದ್ಯಾನನಗರಿ ಕೆರೆಗಳು ಈಗ ಒತ್ತುವರಿ, ಸರ್ಕಾರ ಹಾಗೂ ಸಾರ್ವಜನಿಕರ ನಿರ್ಲಕ್ಷ್ಯದಿಂದಾಗಿ ಅವಸಾನದ ಹಂತ ತಲುಪುತ್ತಿವೆ. ಕೆಲವು ಕೆರೆಗಳಂತೂ ರಾಸಾಯನಿಕಗಳ ಆಗರವಾದ ಪರಿಣಾಮ ಜಲಚರಗಳಿಗೂ ವಾಸಯೋಗ್ಯವಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ತೂರು, ಬೆಳ್ಳಂದೂರಿನಂತಹ ಕೆರೆಗಳು ಆ್ಯಸಿಡ್‌ ಕೆರೆಗಳಾಗಿ ಬೆಂಕಿ ಉಗುಳುವ ಮಟ್ಟಕ್ಕೆ ರಸಾಯನ ತ್ಯಾಜ್ಯದಿಂದ ತುಂಬಿಕೊಂಡಿವೆ.

ಸುಂದರವಾದ ಕಾಡುಗೊಂಡನಹಳ್ಳಿ ಕೆರೆಗೆ ಒಳಚರಂಡಿ ನೀರು ಹರಿಯುತ್ತಿರುವ ಬಗ್ಗೆ ಹರೀಶ್ ಬಿಜ್ಜೂರ್ ವಿಡಿಯೋ ಹಂಚಿಕೊಂಡಿದ್ದು ಕೆರೆಯನ್ನು ರಕ್ಷಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಕೂ ಮಾಡಿರುವ ಹರೀಶ್ ಬಿಜ್ಜೂರ್, ಒಳಚರಂಡಿ ನೀರು ಕೆರೆ ಸೇರುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ‘ಈ ಕೊಳಕು ಚರಂಡಿ ನೀರು ಸುಂದರವಾದ ಕಾಡುಗೊಂಡನಹಳ್ಳಿ ಕೆರೆಗೆ ಹರಿಯುತ್ತದೆ! ಮೀನು ಸಾಯುವ ಮತ್ತು ವಲಸೆ ಹಕ್ಕಿಗಳು ಬರುವುದನ್ನು ನಿಲ್ಲಿಸುವ ಮೊದಲು ಇದರ ಸ್ವಚ್ಛತೆ ಕಾಪಾಡಿ’ ಎಂದು ಬರೆದುಕೊಂಡಿದ್ದಾರೆ. ಇದಲ್ಲದೆ ನಾಗರಿಕ ಸಮಸ್ಯೆಗಳ ಕುರಿತು ಸಾಕಷ್ಟು ವಿಷಯಗಳನ್ನು ಇವರು ತಮ್ಮ ಕೂ ಖಾತೆಯಲ್ಲಿ ಹಂಚಿಕೊಂಡಿದ್ದು, ಇತ್ತೀಚಿಗೆ ಸರ್ಕಾರ ಕಬ್ಬನ್ ಉದ್ಯಾನದಲ್ಲಿ ಸಾಕು ಪ್ರಾಣಿಗಳ ನಿಷೇಧಿಸುವ ನಿರ್ಧಾರದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada