ಪೊಲೀಸರ ಸಮಯಪ್ರಜ್ಞೆಯಿಂದ ಉಳಿದ ಪ್ರಾಣ; ಕೈಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ರಕ್ಷಿಸಿದ ಪೊಲೀಸರು

ಖಿನ್ನತೆಯಿಂದ ಕೈಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ(Suicide Attempt) ಯುವಕನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಯುವಕ ಆತ್ಮಹತ್ಯೆ ಯತ್ನ ಮುನ್ನ ಸ್ನೇಹಿತನಿಗೆ ಡೆತ್‌ನೋಟ್ ರವಾನಿಸಿದ್ದ.

ಪೊಲೀಸರ ಸಮಯಪ್ರಜ್ಞೆಯಿಂದ ಉಳಿದ ಪ್ರಾಣ; ಕೈಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ರಕ್ಷಿಸಿದ ಪೊಲೀಸರು
ಪೊಲೀಸರ ಸಮಯಪ್ರಜ್ಞೆಯಿಂದ ಉಳಿದ ಪ್ರಾಣ
TV9kannada Web Team

| Edited By: Ayesha Banu

Jun 27, 2022 | 11:32 PM

ಬೆಂಗಳೂರು: ಪೊಲೀಸರ ಸಮಯಪ್ರಜ್ಞೆಯಿಂದ ಯುವಕನ ಪ್ರಾಣ ಉಳಿದಿದೆ. ಬೆಂಗಳೂರಿನ ಜೆ.ಪಿ.ನಗರ(JP Nagar) ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಖಿನ್ನತೆಯಿಂದ ಕೈಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ(Suicide Attempt) ಯುವಕನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಯುವಕ ಆತ್ಮಹತ್ಯೆ ಯತ್ನ ಮುನ್ನ ಸ್ನೇಹಿತನಿಗೆ ಡೆತ್‌ನೋಟ್ ರವಾನಿಸಿದ್ದ. ಈ ವೇಳೆ ಯುವಕನ ಸ್ನೇಹಿತ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ತಕ್ಷಣ ಪಿಜಿಗೆ ತೆರಳಿ ASI ಚಂದ್ರಶೇಖರ್, ಹೆಡ್ ಕಾನ್ಸ್‌ಟೇಬಲ್‌ ರಮೇಶ್‌ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನೀರಿನ ಸಂಪಿಗೆ ಬಿದ್ದು ಬುದ್ಧಿ ಮಾಂದ್ಯ ಬಾಲಕ ಸಾವು ಬೆಂಗಳೂರು: ವಿದ್ಯಾರಣ್ಯಪುರ ಸಮೀಪದ ಮುನೇಶ್ವರ ಲೇಔಟ್‌ನಲ್ಲಿ ಆಟವಾಡಲು ಮನೆಯಿಂದ ಹೊರಗೆ ಬಂದಿದ್ದಾಗ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನೀರಿನ ಸಂಪಿಗೆ ಬಿದ್ದು ಬುದ್ಧಿಮಾಂದ್ಯ ಸಾಯಿ ಶರಣ್(15) ಮೃತಪಟ್ಟಿದ್ದಾನೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುಖ್ಯಮಂತ್ರಿ ಪಟ್ಟಕ್ಕಾಗಿ ಸುಪ್ರೀಂಕೋರ್ಟ್ ನಲ್ಲಿ ಉದ್ದವ್ ಠಾಕ್ರೆ v/s ಏಕನಾಥ್ ಶಿಂಧೆ ಮಧ್ಯೆ ಕಾನೂನು ಸಮರ ಹೀಗಿತ್ತು!

ಸರ್ಕಾರಿ ಬಸ್ ಡಿಕ್ಕಿಯಾಗಿ ಟಂಟಂ ವಾಹನದಲ್ಲದ್ದ ನಾಲ್ಕು ವರ್ಷದ ಮಗು ಸಾವು ಯಾದಗಿರಿ: ಸುರಪುರ ತಾಲೂಕಿನ ಕುಂಬಾರಪೇಟ ಬಳಿ ಸರ್ಕಾರಿ ಬಸ್ ಡಿಕ್ಕಿಯಾಗಿ ಟಂಟಂ ವಾಹನದಲ್ಲಿದ್ದ ನಾಲ್ಕು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಟಂಟಂ ವಾಹನದಲ್ಲಿ 7 ಜನರು ಸುರಪುರ ದಿಂದ ದೇವಾಪುರಕ್ಕೆ ತೆರಳುತ್ತಿದ್ದರು. ಇನ್ನು ಮತ್ತೊಂದು ಕಡೆಯಿಂದ ಸಾರಿಗೆ ಬಸ್ ಬೆಂಗಳೂರಿಗೆ ತೆರಳುತ್ತಿತ್ತು. ಆಗ ಸಾರಿಗೆ ಬಸ್ ಹಿಂಬದಿಯಿಂದ ಟಂಟಂ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇನ್ನುಳಿದ 6 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನ ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಸ್ ಚಾಲಕ, ನಿರ್ವಾಹಕನ ವಿರುದ್ಧ ಸಾರ್ವಜನಿಕರ ಆಕ್ರೋಶ ಹೊರ ಹಾಕಿದ್ದಾರೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada