NPS: ಸರ್ಕಾರದ ಈ ಸ್ಕೀಮ್ನಲ್ಲಿ ಹಣ ತೊಡಗಿಸಿದರೆ 2 ಲಕ್ಷ ರೂಪಾಯಿ ತಿಂಗಳ ಪೆನ್ಷನ್ ನಿರೀಕ್ಷಿಸಬಹುದು
ಸರ್ಕಾರ ಬೆಂಬಲಿತ ಈ ಪೆನ್ಷನ್ ಯೋಜನೆಯಲ್ಲಿ ಹಣ ತೊಡಗಿಸಿದರೆ ತಿಂಗಳಿಗೆ 2 ಲಕ್ಷ ರೂಪಾಯಿ ದೊರೆಯುತ್ತದೆ. ಯಾವುದು ಆ ಸ್ಕೀಮ್, ತಿಂಗಳಿಗೆ ಎಷ್ಟು ಹಣ ತೊಡಗಿಸಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಎಂಬುದು ಸ್ವಯಂಪ್ರೇರಿತ ನಿವೃತ್ತಿ ಉಳಿತಾಯ ಯೋಜನೆ. ಚಂದಾದಾರರು ತಮ್ಮ ಭವಿಷ್ಯವನ್ನು ಪಿಂಚಣಿ ರೂಪದಲ್ಲಿ ಭದ್ರಪಡಿಸಿಕೊಳ್ಳಲು ನಿರ್ದಿಷ್ಟ ಕೊಡುಗೆಯನ್ನು ನೀಡಲು ಅನುವು ಮಾಡಿಕೊಡುತ್ತದೆ. ಸರ್ಕಾರದ ಬೆಂಬಲದೊಂದಿಗೆ ಎನ್ಪಿಎಸ್ ಹೂಡಿಕೆಯು ಈಕ್ವಿಟಿ ಮತ್ತು ಸಾಲಪತ್ರಗಳ ಇನ್ಸ್ಟ್ರುಮೆಂಟ್ಗಳಲ್ಲಿ ಹಣ ತೊಡಗಿಸಲು ಮಾನ್ಯತೆ ನೀಡುತ್ತದೆ. ಪಿಪಿಎಫ್, ಇಪಿಎಫ್, ಸುಕನ್ಯಾ ಸಮೃದ್ಧಿ, ಇತ್ಯಾದಿಗಳಂತೆ, ಈ ಸ್ವಯಂಪ್ರೇರಿತ ಕೊಡುಗೆಯ ಪಿಂಚಣಿ ವ್ಯವಸ್ಥೆಯು ವಿನಾಯಿತಿ, ವಿನಾಯಿತಿ, ವಿನಾಯಿತಿ (EEE) ಸಾಧನವಾಗಿದ್ದು, ಮೆಚ್ಯೂರಿಟಿ ಮತ್ತು ಸಂಪೂರ್ಣ ಪಿಂಚಣಿ ಹಿಂಪಡೆಯುವ ಮೊತ್ತದ ಮೇಲೆ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ. ನಿವೃತ್ತಿಯ ನಂತರ ಹೆಚ್ಚಿನ ಮಾಸಿಕ ಪಿಂಚಣಿ ಪಡೆಯಲು, ಹೂಡಿಕೆದಾರರು ಸಾಧ್ಯವಾದಷ್ಟು ಬೇಗ NPSನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. NPS ಪಿಂಚಣಿ ಕ್ಯಾಲ್ಕುಲೇಟರ್ ಅನ್ನು ಬಳಸುವ ಮೂಲಕ, ತಿಂಗಳಿಗೆ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಪಿಂಚಣಿಯನ್ನು ನೀಡುವ ನಿಧಿಯನ್ನು ಮಾಡಲು ಎಷ್ಟು ಕೊಡುಗೆ ನೀಡಬೇಕೆಂದು ಲೆಕ್ಕ ಹಾಕಬಹುದು.
ಯಾರಾದರೂ 20ನೇ ವಯಸ್ಸಿನಲ್ಲಿ NPSನಲ್ಲಿ ಮಾಸಿಕ 5,000 ರೂಪಾಯಿಗಳನ್ನು ಹೂಡಿಕೆ ಮಾಡುವುದಕ್ಕೆ ಶುರು ಮಾಡಿ, ನಿವೃತ್ತಿ ಆಗುವವರೆಗೆ ಅಥವಾ ಚಂದಾದಾರರು 60 ವರ್ಷಗಳನ್ನು ತಲುಪುವವರೆಗೆ ಹೂಡಿಕೆ ಮಾಡಿದಲ್ಲಿ NPS ಕ್ಯಾಲ್ಕುಲೇಟರ್ ಪ್ರಕಾರ, ಒಬ್ಬರು ಸುಮಾರು 1.91 ಕೋಟಿ ರೂಪಾಯಿಗಳ ಒಟ್ಟು ಮುಕ್ತಾಯ ಮೊತ್ತ ಮತ್ತು 1.27 ಕೋಟಿ ವರ್ಷಾಶನವನ್ನು ಪಡೆಯುತ್ತಾರೆ ಎಂದು ಸೂಚಿಸುತ್ತದೆ. ಮಾಸಿಕ ಪಿಂಚಣಿಗಾಗಿ ವರ್ಷಾಶನದಲ್ಲಿ ಮರು-ಹೂಡಿಕೆಯನ್ನು ಪಡೆಯುವ ಮೌಲ್ಯ. ಆದ್ದರಿಂದ 1.27 ಕೋಟಿ ವರ್ಷಾಶನ ಮೌಲ್ಯದ ಮೇಲೆ ಶೇ 6ರ ವಾರ್ಷಿಕ ಆದಾಯವನ್ನು ಊಹಿಸಿದರೆ ರೂ. 63,768 ಮಾಸಿಕ ಪಿಂಚಣಿ ಪಡೆಯುತ್ತಾರೆ.
ಹೂಡಿಕೆದಾರರಿಗೆ ಇನ್ನೂ ಒಂದು ಆಯ್ಕೆ ಇದೆ – ಅವರು ತಮ್ಮ ಮಾಸಿಕ ಆದಾಯವನ್ನು ಹೆಚ್ಚಿಸಲು SWP (systematic withdrawal plan- ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆ)ನಲ್ಲಿ ಒಟ್ಟು ಮೊತ್ತವನ್ನು ಹೂಡಿಕೆ ಮಾಡಬಹುದು. ಹೂಡಿಕೆದಾರರು ಮಾಸಿಕ ಹೂಡಿಕೆ ಮಾಡುವ SIPನಂತೆ, SWP ಹೂಡಿಕೆದಾರರಿಗೆ ಮಾಸಿಕ ಹಿಂತೆಗೆದುಕೊಳ್ಳುವ ಸೌಲಭ್ಯದೊಂದಿಗೆ ಒಬ್ಬರ ಸಂಪತ್ತನ್ನು ಬಳಸಲು ಅನುಮತಿಸುತ್ತದೆ. SWP ಅನ್ನು ಆಯ್ಕೆ ಮಾಡುವ ಮೂಲಕ ಕನಿಷ್ಠ ಶೇ 8ರಷ್ಟು ಆದಾಯವನ್ನು ನಿರೀಕ್ಷಿಸುವ ದೀರ್ಘಾವಧಿಯವರೆಗೆ ಈ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.
ಆದ್ದರಿಂದ, ನೀವು 20 ವರ್ಷ ವಯಸ್ಸಿನ NPS ಖಾತೆದಾರರಾಗಿದ್ದರೆ ಮತ್ತು 40 ವರ್ಷಗಳವರೆಗೆ ತಿಂಗಳಿಗೆ 5,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ SWPಯಲ್ಲಿ 1.91 ಕೋಟಿ ರೂಪಾಯಿಗಳ ಒಟ್ಟು ಮೊತ್ತದ ಮೆಚ್ಯೂರಿಟಿ ಮೊತ್ತವನ್ನು ಹಾಕುವುದರ ಜೊತೆಗೆ, ಮಾಸಿಕ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಅಂದರೆ ಪಿಂಚಣಿ SWPಯಿಂದ ಮಾಸಿಕ ರೂ. 1.43 ಲಕ್ಷ ಮತ್ತು ವರ್ಷಾಶನದಿಂದ ಮಾಸಿಕ ರೂ. 63,768 ಬರುತ್ತದೆ. ಆದರೆ ವರ್ಷಾಶನದಿಂದ ರೂ. 63,768 ಮಾಸಿಕ ಆದಾಯವು ಹೂಡಿಕೆದಾರರು ಜೀವಂತವಾಗಿರುವವರೆಗೆ ಮುಂದುವರಿಯುತ್ತದೆ. ಆದರೆ SWPಯಿಂದ ರೂ. 1.43 ಲಕ್ಷವು 25 ವರ್ಷಗಳವರೆಗೆ ಮಾತ್ರ ಬರುತ್ತದೆ.
ಇದನ್ನೂ ಓದಿ: National Pension Scheme: ಎನ್ಪಿಎಸ್ನಲ್ಲಿ ಹೆಚ್ಚುವರಿಯಾಗಿ ತೆರಿಗೆ ಉಳಿಸುವುದು ಹೇಗೆ ಗೊತ್ತೆ?
Published On - 12:14 pm, Tue, 28 June 22