ಅಲ್ ಖೈದಾ ಬೆದರಿಕೆ ಪತ್ರದಲ್ಲಿ ಸ್ಫೋಟಕ ಮಾಹಿತಿ ಬಹಿರಂಗ; ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ ಪ್ಲ್ಯಾನ್
ಶಂಕಿತ ಉಗ್ರ ಅಖ್ತರ್ ಹುಸೇನ್ನ ವಿಚಾರಣೆ ಮಾಡುತ್ತಿರುವ ಸಿಸಿಬಿ ಅಧಿಕಾರಿಗಳಿಗೆ, ಅಲ್ ಖೈದಾ ಸಂಘಟನೆ ಬಗ್ಗೆ ಅನುಮಾನ ಮೂಡಿದೆ.
ಬೆಂಗಳೂರು: ಅಲ್ ಖೈದಾ (Al-Qaeda) ಉಗ್ರ ಸಂಘಟನೆ ಬರೆದಿದ್ದ ಪತ್ರದಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ (Murder) ಸಂಚು ರೂಪಿಸಿದ್ದರೆಂಬ ಮಾಹಿತಿ ತಿಳಿದುಬಂದಿದೆ. ಜೂನ್ನಲ್ಲಿ ಉಗ್ರ ಸಂಘಟನೆ ಪತ್ರ ಬರೆದಿತ್ತು. ಭಾರತದಲ್ಲಿ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದೇವೆ, ಬಾಂಬ್ ದಾಳಿ ಮಾಡಲು ನಾವು ಸಿದ್ಧರಿದ್ದೇವೆ ಎಂದು ಪತ್ರದಲ್ಲಿ ಬೆದರಿಕೆ ಸಂದೇಶ ನೀಡಿದ್ದರು. ಈ ಸಂದೇಶದಿಂದ ಭಾರತದಲ್ಲಿ ಹೈ ಅಲರ್ಟ್ ಮಾಡಲಾಗಿತ್ತು. ಅಲ್ಲದೆ ಅಲ್ ಖೈದಾ ಸಂಪರ್ಕದಲ್ಲಿದ್ದವರಿಗೆ ಗಾಳ ಬೀಸಲಾಗಿತ್ತು.
ಇನ್ನು ನಿನ್ನೆ ಬೆಂಗಳೂರಿನಲ್ಲಿ ಶಂಕಿತ ಉಗ್ರ ಪತ್ತೆಯಾಗಿದ್ದಾನೆ. ಶಂಕಿತ ಉಗ್ರ ಅಖ್ತರ್ ಹುಸೇನ್ನ ವಿಚಾರಣೆ ಮಾಡುತ್ತಿರುವ ಸಿಸಿಬಿ ಅಧಿಕಾರಿಗಳಿಗೆ, ಅಲ್ ಖೈದಾ ಸಂಘಟನೆ ಬಗ್ಗೆ ಅನುಮಾನ ಮೂಡಿದೆ. ಅಲ್ ಖೈದಾದಿಂದ ಪತ್ರ ವೈರಲ್ ಆದ ಬಳಿಕ ಸಂಘಟನೆಯ ಜೊತೆ ಸಂಪರ್ಕ ಹೊಂದಿರುವ ಶಂಕಿತರನ್ನು ಬಂಧಿಸಲಾಗುತ್ತಿದೆ.
ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ತೀವ್ರ ತನಿಖೆ ನಡೆಯುತ್ತಿದೆ. ಆದರೆ ಇದುವರೆಗೂ ಬಂಧಿತನಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: Horoscope Today- ದಿನ ಭವಿಷ್ಯ; ಈ ರಾಶಿಯವರ ಮೇಲೆ ಶನಿಯು ಬಲವಾದ ಪ್ರಭಾವ ಬೀರಲಿದ್ದಾನೆ
ಶಂಕಿತ ಉಗ್ರ ಅಖ್ತರ್ ಹುಸೇನ್ ಮೂಲತ: ಅಸ್ಸಾಂ ಮೂಲದವನು. ಈತ 2015 ರಲ್ಲಿ ನಗರಕ್ಕೆ ಬಂದಿದ್ದ. 8 ತಿಂಗಳಲ್ಲಿ ನಾಲ್ಕು ಕಡೆ ನಗರದಲ್ಲಿ ಕೆಲಸ ಮಾಡಿದ್ದ. ನಗರಕ್ಕೆ ಬಂದಾಗ ಖಾಸಗಿ ಕಂಪನಿಗೆ ಕೆಲಸಕ್ಕಾಗಿ ಹೋಗಿದ್ದ. ಆದರೆ ಆಗ 17 ವರ್ಷ ಆಗಿದ್ದರಿಂದ ಅಲ್ಲಿ ಕೆಲಸ ಸಿಕ್ಕಿರಲಿಲ್ಲ. ನಂತ್ರ ಕೆಮಿಕಲ್ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದ. ಕೆಮಿಕಲ್ ಕಾರ್ಖಾನೆಯಲ್ಲಿ ಕೆಲಸಕ್ಕೆ ಹೋಗಿದ್ದಾಗ ಆರೋಗ್ಯ ಏರುಪೇರಾಗಿದೆ. ನಂತರ ಆ ಕೆಲಸ ಬಿಟ್ಟು ಗಾರ್ಮೆಂಟ್ಸ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.
ಬೆಂಗಳೂರಿಗೆ ಬಂದು 8 ತಿಂಗಳ ಕೆಲಸ ಬಿಟ್ಟು ಅಸ್ಸಾಂಗೆ ವಾಪಸ್ ಆಗಿದ್ದ. ಪಿಯುಸಿ ಮಾಡಲು ವಾಪಸ್ ಹೋಗಿ ನಂತರ 2017 ರಲ್ಲಿ ಮತ್ತೆ ನಗರಕ್ಕೆ ಬಂದಿದ್ದ. 2017 ರಿಂದ ನಿರಂತರವಾಗಿ ಉಗ್ರ ಸಂಘಟನೆ ಸೇರುವ ಕೆಲಸದಲ್ಲಿ ಬ್ಯುಸಿಯಾಗಿದ್ದ. ಉಗ್ರರ ಭಾಷಣ ಕೇಳುವುದು, ಉಗ್ರ ಸಂಘಟನೆ ಹೇಗೆ ಕೆಲಸ ಮಾಡುತ್ತದೆ ಅನ್ನೋದರ ಮಾಹಿತಿ ಸಂಗ್ರಹ ಮಾಡುತ್ತಿದ್ದ.
ಇದನ್ನೂ ಓದಿ: Petrol Price Today: ಜುಲೈ 26ರಂದು ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೇಗಿದೆ?
ನಿನ್ನೆ ಸೇಲಂನಲ್ಲಿ ಸೆರೆ ಸಿಕ್ಕ ಜುಬಾ ಕೂಡಾ ಅಖ್ತರ್ ಮಾದರಿಯಲ್ಲೇ ಅಲ್ ಖೈದಾಗೆ ನೇಮಕಾತಿ ಅಗಿದ್ದ. ಫೇಸ್ ಬುಕ್, ಟ್ವಿಟ್ಟರ್, ಟೆಲಿಗ್ರಾಮ್ ಹಾಗು ವಾಟ್ಸಪ್, ಮತ್ತು ಸ್ನಾಪ್ ಚಾಟ್ ಮೂಲಕ ಸಂಪರ್ಕ ಹೊಂದಿದ್ದ. ಜುಬಾ ತಾನು ಅಲ್ ಖೈದಾ ಸೇರಲು ಸಿದ್ಧನಿದ್ದೇನೆ ಎಂದಿದ್ದಾನೆ.
ಬಂಧನ ಅರೋಪಿಗಳ ಬಳಿ ತಿರುಚಿದ ಖುರಾನ್ನ ಕೆಲ ಪೇಜ್ಗಳು ಪತ್ತೆಯಾಗಿವೆ. ತಿರುಚಿದ ಖುರಾನ್ ದಾಖಲೆಯಲ್ಲಿ ಜಿಹಾದ್, ಕೊಲ್ಲುವುದು, ಮುಸ್ಲಿಂ ಲಾ ಎಲ್ಲವನ್ನು ಸೇರಿಸಲಾಗಿದೆ.
Published On - 11:21 am, Tue, 26 July 22