ತಡರಾತ್ರಿವರೆಗೆ ಪಾರ್ಟಿ ನಡೆಯುತ್ತಿದ್ದ ಹೋಟೆಲ್ ಮೇಲೆ ಸಿಸಿಬಿ ಪೊಲೀಸರ ದಾಳಿ, ಪಾರ್ಟಿಯಲ್ಲಿದ್ದ ಹೆಚ್ಚಿನವರು ನಾರ್ಥೀಗಳು!
ಪೊಲೀಸರು ಹೋಟೆಲ್ ಗೆ ಆಗಮಿಸಿದಾಗ ಅಲ್ಲಿ 64 ಯುವಕರು ಮತ್ತು 24 ಯುವತಿಯರಿದ್ದರು. ಯುವಕರಿಂದ 400 ಮತ್ತು ಯುವತಿಯರಿಂದ 300 ರೂ. ಗಳ ಪ್ರವೇಶ ಶುಲ್ಕವನ್ನು ಪಡೆಯಲಾಗಿದೆಯಂತೆ.
ಬೆಂಗಳೂರು ಮಹಾನಗರದಲ್ಲಿ ವಿಕೆಂಡ್ ಪಾರ್ಟಿಗಳಿಗೇನೂ (weekend party) ಕಮ್ಮಿಯಿಲ್ಲ. ನಗರದ ಪಾಷ್, ಲಕ್ಸುರಿ ಮತ್ತು ಪಬ್ ಗಳಲ್ಲಿ ತಡರಾತ್ರಿವರೆಗೆ (late night) ಪಾರ್ಟಿ, ಮೋಜು ಮಸ್ತಿ ನಡೆಯುತ್ತಿರುತ್ತವೆ. ಪಾರ್ಟಿ ಮಾಡುವವರೆಲ್ಲ ಯುವಕ ಯುವತಿಯರು (youngsters) ಎಂದು ಬೇರೆ ಹೇಳಬೇಕಿಲ್ಲ ಮಾರಾಯ್ರೇ. ಅದರಲ್ಲೂ ಉತ್ತರ ಭಾರತದ ಯುವಕ-ಯುವತಿಯರು ಪಾರ್ಟಿಗಳಲ್ಲಿ ಜಾಸ್ತಿ ಕಾಣಿಸುತ್ತಾರೆ. ಶುಕ್ರವಾರ ರಾತ್ರಿ ಮಾರತ್ ಹಳ್ಳಿ ಔಟರ್ ರಿಂಗ್ ರೋಡ್ ನಲ್ಲಿರುವ ಕಾಮೆಟ್ ಹೆಸರಿನ ಹೋಟೆಲೊಂದರಲ್ಲಿ ಬೆಳಗಿನ ಜಾವದವರೆಗೆ ಪಾರ್ಟಿಯೊಂದು ನಡೆಯುತಿತ್ತು. ಸದರಿ ಪಾರ್ಟಿಯನ್ನು ಆಯೋಜಿಸಿದವನು ದಕ್ಷಿಣ ಆಫ್ರಿಕಾ ಮೂಲದ ವ್ಯಕ್ತಿಯಂತೆ. ಕಾನೂನಿನ ಪರಿಧಿಯೊಳಗೆ ಪಾರ್ಟಿ ಮಾಡುವ ಜನರಿಗೆ ಪೊಲೀಸರು ತೊಂದರೆ ಮಾಡುವುದದಿಲ್ಲ. ಆದರೆ ಆಯೋಜಕ ದಕ್ಷಿಣ ಆಫ್ರಿಕಾ ಮೂಲದವನು ಅಂತ ಗೊತ್ತಾದ ಬಳಿಕ ನಗರ ಅಪರಾಧ ದಳದ (ಸಿಸಿಬಿ) ಪೊಲೀಸರು ದಾಳಿ ನಡೆಸಿದ್ದಾರೆ.
ಪೊಲೀಸರು ಹೋಟೆಲ್ ಗೆ ಆಗಮಿಸಿದಾಗ ಅಲ್ಲಿ 64 ಯುವಕರು ಮತ್ತು 24 ಯುವತಿಯರಿದ್ದರು. ಯುವಕರಿಂದ 400 ಮತ್ತು ಯುವತಿಯರಿಂದ 300 ರೂ. ಗಳ ಪ್ರವೇಶ ಶುಲ್ಕವನ್ನು ಪಡೆಯಲಾಗಿದೆಯಂತೆ. ಆಫ್ರಿಕಾ ಮೂಲದ ವ್ಯಕ್ತಿ ಪಾರ್ಟಿ ಆಯೋಜಿಸಿದ್ದರಿಂದ ಸಹಜವಾಗೇ ಅಲ್ಲಿ ಡ್ರಗ್ಸ್ ಪೂರೈಕೆ ಆಗುತ್ತ್ತಿರುವ ಬಗ್ಗೆ ಶಂಕೆ ಹುಟ್ಟುತ್ತದೆ. ಅದರೆ ಪಾರ್ಟಿಯಲ್ಲಿದ್ದ ಜನ ಪೊಲೀಸರ ದಾಳಿಗೆ ಮತ್ತು ಅವರ ರಕ್ತ ಪರೀಕ್ಷಣೆಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.
ಪೊಲೀಸರು ದಾಳಿ ನಡೆಸಿ ನಮಗೆ ತೊಂದರೆ ನೀಡುತ್ತಿದ್ದಾರೆ, ನಮ್ಮನ್ನು ಹೋಟೆಲ್ನಲ್ಲಿ ಕೂಡಿಹಾಕಿದ್ದಾರೆ, ಮನೆಗಳಿಗೆ ಹೋಗಲು ಬಿಡುತ್ತಿಲ್ಲ ಅಂತ ಬಹಳಷ್ಟು ಯುವತಿಯರು ಯಾರ್ಯಾರಿಗೋ ಫೋನು ಮಾಡುತ್ತಿದ್ದಾರೆ. ಕೆಲವರು ಅಧಿಕಾರಿಗಳೊಂದಿಗೆ ಜೋರು ಧ್ವನಿಯಲ್ಲಿ ವಾದ ಮಾಡುತ್ತಿದ್ದಾರೆ.
ಅದಾದ ಮೇಲೆ ಪೊಲೀಸರು ಹೋಟೆಲ್ ನಲ್ಲಿದ್ದವರನ್ನು ಟೆರೇಸ್ ಮೇಲೆ ಕರೆದೊಯ್ದಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಶನಿವಾರ ಬೆಳಕು ಹರಿದ ನಂತರ ಅವರನ್ನು ಮನೆಗಳಿಗೆ ಕಳಿಸಲಾಗಿದೆ.