Video: ಒಳ್ಳೆ ಟಿಪ್​ ಟಾಪ್​ ಆಗಿ ಬಂದು ಈರುಳ್ಳಿ ಖರೀದಿಗೆಂದು ರೈತ ಸ್ಕೂಟಿಯಲ್ಲಿಟ್ಟಿದ್ದ 5 ಲಕ್ಷ ರೂ. ಕದ್ದ ಕಳ್ಳ

Updated on: Apr 08, 2026 | 11:11 AM

ಸೂಟು ಬೂಟು ಹಾಕಿಕೊಂಡು ಬಂದ ಕಳ್ಳ ಬೈಕ್ ಡಿಕ್ಕಿಯಿಂದ 5 ಲಕ್ಷ ರೂ. ಕದ್ದಿರುವ ಘಟನೆ ಪಲ್ನಾಡುವಿನಲ್ಲಿ ನಡೆದಿದೆ. ಸಾಲದ ಮೇಲೆ ಸಾಲ ಪಡೆದು, ಈರುಳ್ಳಿ ಖರೀದಿಸಲೆಂದು ಸ್ಕೂಟಿ ಡಿಕ್ಕಿಯಲ್ಲಿ ರೈತ ಇಟ್ಟಿದ್ದ 5 ಲಕ್ಷ ರೂ. ಹಣವನ್ನು ಓರ್ವ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಈರುಳ್ಳಿ ಗೋದಾಮಿನ ಎದುರು ಬಂದು ವ್ಯಕ್ತಿಯೊಬ್ಬ ಫೋನ್​​ನಲ್ಲಿ ಮಾತನಾಡುತ್ತಿರುವಂತೆ ನಟಿಸುತ್ತಾನೆ. ಬಳಿಕ ರೈತ ಏನೋ ಕೆಲಸ ಮಾಡುತ್ತಿರುವ ಸಮಯ ನೋಡಿ ಬೈಕ್​ನ ಡಿಕ್ಕಿಯಲ್ಲಿದ್ದ ದುಡ್ಡಿನ ಚೀಲ ಎತ್ತಿಕೊಂಡು ಪರಾರಿಯಾಗುತ್ತಾನೆ.

ಪಲ್ನಾಡು, ಏಪ್ರಿಲ್ 08: ಸೂಟು ಬೂಟು ಹಾಕಿಕೊಂಡು ಬಂದ ಕಳ್ಳ ಬೈಕ್ ಡಿಕ್ಕಿಯಿಂದ 5 ಲಕ್ಷ ರೂ. ಕದ್ದಿರುವ ಘಟನೆ ಪಲ್ನಾಡುವಿನಲ್ಲಿ ನಡೆದಿದೆ. ಸಾಲದ ಮೇಲೆ ಸಾಲ ಪಡೆದು, ಈರುಳ್ಳಿ ಖರೀದಿಸಲೆಂದು ಸ್ಕೂಟಿ ಡಿಕ್ಕಿಯಲ್ಲಿ ರೈತ ಇಟ್ಟಿದ್ದ 5 ಲಕ್ಷ ರೂ. ಹಣವನ್ನು ಓರ್ವ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಈರುಳ್ಳಿ ಗೋದಾಮಿನ ಎದುರು ಬಂದು ವ್ಯಕ್ತಿಯೊಬ್ಬ ಫೋನ್​​ನಲ್ಲಿ ಮಾತನಾಡುತ್ತಿರುವಂತೆ ನಟಿಸುತ್ತಾನೆ. ಬಳಿಕ ರೈತ ಏನೋ ಕೆಲಸ ಮಾಡುತ್ತಿರುವ ಸಮಯ ನೋಡಿ ಬೈಕ್​ನ ಡಿಕ್ಕಿಯಲ್ಲಿದ್ದ ದುಡ್ಡಿನ ಚೀಲ ಎತ್ತಿಕೊಂಡು ಪರಾರಿಯಾಗುತ್ತಾನೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Published on: Apr 08, 2026 11:05 AM
Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More