ಕರ್ನೂಲ್ ಬಸ್ ಬೆಂಕಿ ಅಪಘಾತಕ್ಕೂ ಮುನ್ನ ಪೆಟ್ರೋಲ್ ಪಂಪ್‌ಗೆ ಕುಡಿದು ಬಂದಿದ್ದ ಬೈಕ್ ಸವಾರ; ಸಿಸಿಟಿವಿ ವಿಡಿಯೋ ಇಲ್ಲಿದೆ
ಕರ್ನೂಲ್ ಬಸ್ ದುರಂತಕ್ಕೆ ಕಾರಣನಾದ ಬೈಕ್ ಸವಾರ ಸೇರಿದಂತೆ 20 ಜನರ ಸಾವಿಗೆ ಕಾರಣವಾದ ಅಪಘಾತಕ್ಕೆ ಕೆಲವೇ ಕ್ಷಣಗಳ ಮೊದಲು ಪೆಟ್ರೋಲ್ ಬಂಕ್‌ಗೆ ಪ್ರವೇಶಿಸುತ್ತಿರುವುದನ್ನು ತೋರಿಸುವ ದೃಢೀಕರಿಸದ ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿವೆ. ಮೃತ ಬೈಕ್ ಸವಾರನನ್ನು ಶಿವಶಂಕರ್ ಎಂದು ಗುರುತಿಸಲಾಗಿದೆ. 20 ಜನರ ಸಾವಿಗೆ ಕಾರಣವಾದ ಮಾರಕ ಬೆಂಕಿಗೆ ಸಂಬಂಧಿಸಿದಂತೆ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‌ನ ಇಬ್ಬರು ಚಾಲಕರ ವಿರುದ್ಧ ನಿರ್ಲಕ್ಷ್ಯ ಮತ್ತು ಅತಿವೇಗದ ಪ್ರಕರಣ ದಾಖಲಿಸಲಾಗಿದೆ.
ಕರ್ನೂಲ್, ಅಕ್ಟೋಬರ್ 25: ಆಂಧ್ರಪ್ರದೇಶದ ಕರ್ನೂಲ್ ಬಸ್ ಅಪಘಾತಕ್ಕೆ (Kurnool Bus Fire Accident) ಕಾರಣವಾದ ಬೈಕ್ ಓಡಿಸುತ್ತಿದ್ದ ವ್ಯಕ್ತಿ ಆ ಘಟನೆಗೂ ಮುನ್ನ ಪೆಟ್ರೋಲ್ ಬಂಕ್‌ಗೆ ಬಂದಿದ್ದ ಸಿಸಿಟಿವಿ ವಿಡಿಯೋದಲ್ಲಿ ಆತ ಆಲ್ಕೋಹಾಲ್ ಸೇವನೆ ಮಾಡಿ ವಿಚಿತ್ರವಾಗಿ ವರ್ತಿಸುತ್ತಿರುವುದು ದಾಖಲಾಗಿದೆ. ಕುಡಿದು ಬೈಕ್ ಚಲಾಯಿಸಿದ್ದರಿಂದಲೇ ಬೈಕ್ ಬ್ಯಾಲೆನ್ಸ್ ತಪ್ಪಿ ಬಸ್ಗೆ ಡಿಕ್ಕಿ ಹೊಡೆದಿರುವ ಸಾಧ್ಯತೆಯಿದೆ.
ಆ ಬೈಕ್ ಬಸ್‌ನ ಅಡಿಗೆ ಸಿಲುಕಿದ್ದರಿಂದಲೇ ಬೈಕ್ನ ಕಿಡಿ ತಗುಲಿ ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆ 20 ಜನರ ಸಾವಿಗೆ ಕಾರಣವಾಯಿತು. ಸ್ಲೀಪರ್ ಬಸ್ನಲ್ಲಿ ಮಲಗಿದ್ದ ಪ್ರಯಾಣಿಕರು ಬೆಂಕಿ ಹೊತ್ತಿದ್ದೇ ತಿಳಿಯದೆ ಜೀವಂತವಾಗಿ ಸುಟ್ಟುಹೋಗಿದ್ದಾರೆ. ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‌ನ ಇಬ್ಬರು ಚಾಲಕರ ವಿರುದ್ಧ ನಿರ್ಲಕ್ಷ್ಯ ಮತ್ತು ಅತಿವೇಗದ ಪ್ರಕರಣ ದಾಖಲಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ