AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಖಾತೆ ತೆರೆದು ಶತಕ ಸಿಡಿಸಿದವರಂತೆ ಸಂಭ್ರಮಿಸಿದ ಕೊಹ್ಲಿ; ವಿಡಿಯೋ ನೋಡಿ

IND vs AUS: ಖಾತೆ ತೆರೆದು ಶತಕ ಸಿಡಿಸಿದವರಂತೆ ಸಂಭ್ರಮಿಸಿದ ಕೊಹ್ಲಿ; ವಿಡಿಯೋ ನೋಡಿ

ಪೃಥ್ವಿಶಂಕರ
|

Updated on:Oct 25, 2025 | 4:52 PM

Share

Virat Kohli's Celebration: ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ವಿರಾಟ್ ಕೊಹ್ಲಿ, ಸಿಡ್ನಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ತಮ್ಮ ಖಾತೆ ತೆರೆದು ಅಜೇಯ ಅರ್ಧಶತಕ ಸಿಡಿಸಿದರು. ಮೊದಲ ಎಸೆತದಲ್ಲೇ ಸಿಂಗಲ್ ಗಳಿಸಿದ ನಂತರ ಅವರು ಶತಕ ಬಾರಿಸಿದವರಂತೆ ಸಂಭ್ರಮ ಆಚರಿಸಿದರು. ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅಜೇಯ ಆಟದ ನೆರವಿನಿಂದ, ಭಾರತ ತಂಡ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಸರಣಿಯನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಿತು.

ಹಿಂದಿನ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ವಿರಾಟ್ ಕೊಹ್ಲಿ ಕೊನೆಗೂ ತಮ್ಮ ಖಾತೆ ತೆರೆದಿದ್ದಾರೆ. ಸಿಡ್ನಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ, ಅವರು ಮೊದಲ ಎಸೆತದಲ್ಲೇ ಸಿಂಗಲ್ ಗಳಿಸುವ ಮೂಲಕ ತಮ್ಮ ಖಾತೆ ತೆರೆದರು. 13 ಎಸೆತಗಳ ನಂತರ ಈ ರನ್ ಬಂದಿತು. ಕೊಹ್ಲಿ ಖಾತೆ ತೆರೆದ ನಂತರ ಶತಕ ಬಾರಿಸಿದವರಂತೆ ಸಂಭ್ರಮಿಸಿದರು. ಇತ್ತ ಕ್ರೀಡಾಂಗಣದಲ್ಲೂ ಸಂಭ್ರಮಾಚರಣೆ ಮನೆ ಮಾಡಿತು. ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕಳೆದುಕೊಂಡಿದ್ದ ಟೀಂ ಇಂಡಿಯಾ ಕೊನೆಯ ಪಂದ್ಯದಲ್ಲಿ 9 ವಿಕೆಟ್​ಗಳ ಜಯ ಸಾಧಿಸಿ, ಗೆಲುವಿನೊಂದಿಗೆ ಸರಣಿಗೆ ಅಂತ್ಯ ಹಾಡಿತು. ಈ ಪಂದ್ಯದಲ್ಲಿ ರೋಹಿತ್ ಅಜೇಯ ಶತಕ ಹಾಗೂ ಕೊಹ್ಲಿ ಅಜೇಯ ಶತಕ ಬಾರಿಸಿದರು.

237 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಭರ್ಜರಿ ಆರಂಭವನ್ನು ಪಡೆಯಿತು. ನಾಯಕ ಶುಭ್​ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್‌ಗೆ 62 ಎಸೆತಗಳಲ್ಲಿ 69 ರನ್‌ಗಳನ್ನು ಸೇರಿಸಿದರು. 11 ನೇ ಓವರ್‌ನ ಎರಡನೇ ಎಸೆತದಲ್ಲಿ ಜೋಶ್ ಹೇಜಲ್‌ವುಡ್, ಶುಭಮನ್ ಗಿಲ್ (24) ಅವರನ್ನು ಔಟ್ ಮಾಡಿದರು. ನಂತರ ಮೈದಾನಕ್ಕೆ ಬಂದ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲೇ ಸಿಂಗಲ್ ಗಳಿಸುವ ಮೂಲಕ ಸರಣಿಯ ಮೊದಲ ರನ್ ಗಳಿಸಿದರು. ಕೊಹ್ಲಿ ಖಾತೆ ತೆರೆಯುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಸಂಭ್ರಮಿಸಿತು. ವಿರಾಟ್ ಕೊಹ್ಲಿ ಕೂಡ ಕೈ ಎತ್ತಿ ಸಂಭ್ರಮಿಸಿದರು. ಅವರ ಮುಖದಲ್ಲಿ ಸಂತೋಷ ಸ್ಪಷ್ಟವಾಗಿ ಗೋಚರಿಸಿತು.

ಪರ್ತ್ ಮತ್ತು ಅಡಿಲೇಡ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ತಮ್ಮ ಖಾತೆ ತೆರೆಯುವಲ್ಲಿ ವಿಫಲರಾದರು. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಎಂಟು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾಗಿದ್ದ ಕೊಹ್ಲಿ, ಅಡಿಲೇಡ್‌ನಲ್ಲಿ ನಾಲ್ಕು ಎಸೆತಗಳನ್ನು ಎದುರಿಸಿದ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾ ಎರಡೂ ಪಂದ್ಯಗಳಲ್ಲಿ ಸೋತಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 25, 2025 04:50 PM