Army Chopper Crash: ಸೇನಾ ಮುಖ್ಯಸ್ಥರ ಹೆಲಿಕಾಪ್ಟರ್​​ ದುರಂತ, ಈಗ ಪರಿಸ್ಥಿತಿ ಅಲ್ಲಿ ಹೇಗಿದೆ?

| Updated By: ಆಯೇಷಾ ಬಾನು

Updated on: Dec 09, 2021 | 9:45 AM

ಉರಿ ಕಾರ್ಯಾಚರಣೆಯ ಸೂತ್ರಧಾರ ಬಿಪಿನ್ ರಾವತ್ ಆಗಿದ್ರು. ಅಷ್ಟೇ ಅಲ್ಲ 2016ರಲ್ಲಿ ಪಾಕ್ ಆಕ್ರಮಿಕ ಕಾಶ್ಮೀರದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಅನ್ನ ಮಾನಿಟರಿಂಗ್ ಮಾಡಿದ್ರು. ಇದಕ್ಕೂ ಮೊದಲು 2015ರ ಮಯನ್ಮಾರ್ನಲ್ಲಿ ಟೆರರ್ ಆಪರೇಷನ್ ‘ಮಾಸ್ಟರ್ ಮೈಂಡ್’ ಸಹ ರಾವತ್ ಆಗಿದ್ರು.

ತಮಿಳುನಾಡಿನ ಕೂನೂರು ಬಳಿ ದೇಶಕ್ಕೆ ದೇಶವೇ ಬೆಚ್ಚಿ ಬೀಳೋ ಘಟನೆ ನಡೆದಿದೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಅಂದ್ರೆ ಮೂರು ಸೇನೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿದೆ. ಸಿಡಿಎಸ್ ರಾವತ್ ಮತ್ತವರ ಪತ್ನಿ ಸೇರಿದಂತೆ 13 ಮಂದಿಯ ದುರಂತ ಅಂತ್ಯವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಏರ್‌ ಚೀಫ್ ಮಾರ್ಷಲ್ V.R.ಚೌಧರಿ ಭೇಟಿ ನೀಡಿದ್ದು Mi-17 ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಉತ್ತರಾಖಂಡ್ನ ಪುರಿಯಲ್ಲಿ ಮಾರ್ಚ್ 16, 1958ರಲ್ಲಿ ಬಿಪಿನ್ ರಾವತ್ ಜನಿಸಿದ್ರು. ರಾವತ್ ತಂದೆ ಲಕ್ಷ್ಮಣ್ ಸಿಂಗ್ ಕೂಡಾ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕರ್ತವ್ಯ ನಿರ್ವಹಿಸಿದ್ರು. ಡೆಹ್ರಾಡೂನ್ನಲ್ಲೇ ಶಾಲಾ ಶಿಕ್ಷಣ ಪೂರೈಸಿದ್ದ ರಾವತ್ ಬಳಿಕ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸೇರಿದ್ರು. ಅಷ್ಟೇ ಅಲ್ಲ ಅಕಾಡೆಮಿಯಲ್ಲಿ ‘Sword of Honour’ ಪಡೆದಿದ್ರು, ಬಳಿಕ ತಮಿಳುನಾಡಿನ ವೆಲ್ಲಿಂಗ್ಟನ್ನಲ್ಲಿರೋ ಸೇನಾ ಕಾಲೇಜು ಸೇರ್ಪಡೆಯಾಗಿ ಮದ್ರಾಸ್ ವಿವಿಯಲ್ಲಿ ರಕ್ಷಣಾ ಅಧ್ಯಯನದಲ್ಲಿ ಎಂಫಿಲ್ ಪದವಿ ಸಹ ಪಡೆದಿದ್ರು. 1978ರಲ್ಲಿ ಗೊರ್ಖಾ ರೈಫಲ್ಸ್ನ 5ನೇ ಬೆಟಾಲಿಯನ್ಗೆ ಜಾಯಿನ್ ಆಗಿದ್ರು. 10 ವರ್ಷಗಳ ಕಾಲ ಗೋರ್ಖಾ ರೈಫಲ್ಸ್ನಲ್ಲಿ ರಾವತ್ ಸೇವೆ ಸಲ್ಲಿಸಿದ್ರು. ಜಮ್ಮು-ಕಾಶ್ಮೀರದ ಉರಿಯಲ್ಲೂ ಸಹ ರಾವತ್ ಕರ್ತವ್ಯ ನಿರ್ವಹಿಸಿದ್ರು. ಬಳಿಕ ಬ್ರಿಗೇಡಿಯರ್ ಹುದ್ದೆಗೆ ಬಡ್ತಿ ಪಡೆದು ರಾಷ್ಟ್ರೀಯ ರೈಫಲ್ಸ್ನಲ್ಲಿ ತಮ್ಮ ಛಾಪು ಮೂಡಿಸಿದ್ರು. ನಂತ್ರ ಬಳಿಕ ಮೇಜರ್ ಜನರಲ್ ಹುದ್ದೆ ಅಲಂಕರಿಸಿದ್ದ ಬಿಪಿನ್ ರಾವತ್ ಅನೇಕ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ರು. 2016 ಸೆಪ್ಟೆಂಬರ್ನಲ್ಲಿ ಸೇನಾ ಉಪಮುಖ್ಯಸ್ಥ ಹುದ್ದೆಗೇರಿದ್ದ ರಾವತ್, 2016 ಡಿಸೆಂಬರ್ನಲ್ಲಿ ಭಾರತೀಯ ಭೂ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾಗಿದ್ರು. ಬಳಿಕ ಜನವರಿ 1, 2020ರಲ್ಲಿ ಸಿಡಿಎಸ್ ಅಂದ್ರ ಮೂರು ಸೇನೆಗಳ ಮುಖ್ಯಸ್ಥರಾಗಿ ಬಿಪಿನ್ ರಾವತ್ ನೇಮಕವಾಗಿದ್ರು.

ಉರಿ ಕಾರ್ಯಾಚರಣೆಯ ಸೂತ್ರಧಾರ ಬಿಪಿನ್ ರಾವತ್ ಆಗಿದ್ರು. ಅಷ್ಟೇ ಅಲ್ಲ 2016ರಲ್ಲಿ ಪಾಕ್ ಆಕ್ರಮಿಕ ಕಾಶ್ಮೀರದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಅನ್ನ ಮಾನಿಟರಿಂಗ್ ಮಾಡಿದ್ರು. ಇದಕ್ಕೂ ಮೊದಲು 2015ರ ಮಯನ್ಮಾರ್ನಲ್ಲಿ ಟೆರರ್ ಆಪರೇಷನ್ ‘ಮಾಸ್ಟರ್ ಮೈಂಡ್’ ಸಹ ರಾವತ್ ಆಗಿದ್ರು. ಹೀಗೆ ಸೇನೆಯಲ್ಲಿ ಸಾಹಸದ ಹೆಜ್ಜೆ ಮೂಡಿಸಿದ್ದ ರಾವತ್ ಇದೇ ಡಿಸೆಂಬರ್ 31ಕ್ಕೆ ಸಿಡಿಎಸ್ ಹುದ್ದೆಯಿಂದ ನಿವೃತ್ತಿಯಾಗಬೇಕಿತ್ತು. ಆದ್ರೆ ಹೆಲಿಕಾಪ್ಟರ್ ದುರಂತ ಅವರನ ಬದುಕಿನ ಪಯಣವನ್ನೇ ಅಂತ್ಯಗೊಳಿಸಿದೆ.