Army Chopper Crash: ಜನರಲ್‌ ಬಿಪಿನ್ ರಾವತ್ ನನಗೆ ನೀರು ಕೇಳಿದ್ದರು -ಪ್ರತ್ಯಕ್ಷದರ್ಶಿ

Army Chopper Crash: ಜನರಲ್‌ ಬಿಪಿನ್ ರಾವತ್ ನನಗೆ ನೀರು ಕೇಳಿದ್ದರು -ಪ್ರತ್ಯಕ್ಷದರ್ಶಿ

TV9 Web
| Updated By: ಆಯೇಷಾ ಬಾನು

Updated on:Dec 09, 2021 | 1:00 PM

ಘಟನೆ ನಡೆದಾಗ ಘಟನಾ ಸ್ಥಳದಲ್ಲಿದ್ದ ಗುತ್ತಿಗೆದಾರರಾಗಿರುವ ಶಿವಕುಮಾರ್, ತನ್ನ ಸಂಬಂಧಿ ಮನೆಗೆ ಬಂದಿದ್ದರು. ಈ ವೇಳೆ ಈ ಘಟನೆ ನಡೆದಿದೆ. ಜನರಲ್‌ ಬಿಪಿನ್ ರಾವತ್ ಶಿವಕುಮಾರ್ ಬಳಿ ನೀರು ಕೇಳಿದ್ದರಂತೆ. ಆಗ ತನ್ನ ಮಗನಿಗೆ ನೀರು ತರಲು ಶಿವಕುಮಾರ್ ಕಳಿಸಿದ್ದಾರೆ.

ಸೇನಾ ಹೆಲಿಕ್ಯಾಪ್ಟರ್ ದುರಂತ ಪ್ರಕರಣಕ್ಕೆ ಸಂಬಂಧಿಸಿ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ನಡೆದ ಕೆಲ ಘಟನೆಗಳನ್ನು ಪ್ರತ್ಯಕ್ಷದರ್ಶಿಗಳು ಟಿವಿ9 ಜೊತೆ ಹಂಚಿಕೊಂಡಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ಭಾರಿ ಸದ್ದು ಕೇಳಿಸಿತು. ನಾನು ಹೊರಬಂದೆ ಆಗ ಹೆಲಿಕಾಫ್ಟರ್ ಮರದ ರೆಂಬೆಗಳಿಗೆ ತಗುಲಿ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು ಕಾಣಿಸಿತ್ತು. ಕೆಲವರು ಚೀರುತ್ತಿದ್ದ ಸದ್ದೂ ಕೇಳಿಸುತ್ತಿತ್ತು. ಸ್ಥಳಕ್ಕೆ ಹೋಗು ನೋಡಿದ್ವಿ. ಬೆಂಕಿ ಹತ್ತಿ ಉರಿಯುತ್ತಿತ್ತು. ಹೆಲಿಕಾಫ್ಟರ್ ಹೊರೆಗೆ ಬಿದ್ದವರನ್ನು ರಕ್ಷಿಸಲು ಮುಂದಾದ್ವಿ ಆಗ ಕೊನೆ ಕ್ಷಣದಲ್ಲಿ ಜನರಲ್‌ ಬಿಪಿನ್ ರಾವತ್ ನೀರು ಕೇಳಿದ್ದರು ಎಂದು ಸ್ಥಳೀಯ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ನಿನ್ನೆ 12 ಗಂಟೆ ಸುಮಾರಿಗೆ ಡಮಾರ್ ಅಂತ ಶಬ್ಧ ಕೇಳಿಸ್ತು. ಶಬ್ಧ ಕೇಳಿ ಹೊರಗೆ ಬಂದಾಗ ಹೆಲಿಕಾಪ್ಟರ್ ಅಪಘಾವಾಗಿತ್ತು. ಬೆಟ್ಟದ ಹತ್ತಿರ ಆರ್ಮಿ ಹೆಲಿಕಾಪ್ಟರ್ ಯಾವಾಗಲೂ ಬರ್ತಿರುತ್ತೆ. ಹೆಲಿಕಾಪ್ಟರ್​ನಲ್ಲಿ ಇದ್ದವರನ್ನ ಕಾಪಾಡೋದ ಅಂತ ಹೋದಾಗ ಬೆಂಕಿ ಜಾಸ್ತಿಯಾಯ್ತು. ತೈಲ, ಗ್ಯಾಸ್ ಬ್ಲಾಸ್ಟ್ ಆಗಿಬಿಡಬಹುದು ಅನ್ನೋ ಭಯ ಶುರುವಾಯ್ತು. ಹೆಲಿಕಾಪ್ಟರ್​ನಿಂದ ಹೊರಗೆ ಬಂದವರನ್ನಾದರೂ ಕಾಪಾಡೋಣ ಅಂತ ಹೋದಾಗ, ಮೂರು ಜಾಗದಲ್ಲಿ ಮೂವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.

ಅವರು ತುಂಬಾ ಆಳದಲ್ಲಿ ಬಿದ್ದಿದ್ದವರನ್ನ ಬೇಗ ಮೇಲೆ ಎತ್ತಲು ಆಗಲಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದೆವು. ನಾವಿಬ್ಬರು ಕೆಳಗೆ ಇಳಿದು ಒಬ್ಬರನ್ನ ಮೇಲೆತ್ತಿದ್ವಿ. ಮತ್ತೆ ಕೆಳಗೆ ಇಳಿದು ಮತ್ತೊಬ್ಬರನ್ನ ಎತ್ತಲು ಕೆಳಗೆ ಇಳಿದ್ವಿ. ಆಗ ಅವರು ತಿರುಗಿ ನೋಡಿ ನನಗೆ ನೀರು ಬೇಕು ಎಂದು ಇಂಗ್ಲಿಷ್​ನಲ್ಲಿ ಕೇಳಿದ್ರು. ನೀರು ತರುವ ತನಕ ಸಮಯವಾಗುತ್ತೆ ಅಂತ ಬೆಡ್​ಶೀಟ್​ನಲ್ಲಿ ಸುತ್ತಿ ಅವರನ್ನ ಮೇಲೆ ಎತ್ತಿಕೊಂಡು ಹೋದ್ವಿ. ಅವರನ್ನ ಆಸ್ಪತ್ರೆಗೆ ಕಳುಹಿಸಿ ಮೂರು ಗಂಟೆ ನಂತರ ಒಬ್ಬ ಆರ್ಮಿ ಅಧಿಕಾರಿ ನನ್ನ ಭುಜ ತಟ್ಟಿ ಒಂದು ಫೋಟೋ ತೋರಿಸಿದ್ರು. ಆ ಫೋಟೋ ಬಿಪಿನ್ ರಾವತ್ ಅಂತ ಹೇಳಿದ್ರು. ನೀನು ರಕ್ಷಣೆ ಮಾಡಿದ್ದು ಅವರನ್ನೇ ಅಂತ ಹೇಳಿದ್ರು. ನಮ್ಮ ದೇಶವನ್ನ ಕಾಪಾಡುವ ಸಿಡಿಎಸ್ ಅವರು ನೀರು ಕೇಳಿದಾಗ, ನೀರು ಕೊಡಲು ಆಗಲಿಲ್ಲವಲ್ಲ ಅನ್ನೋ ನೋವು ನನಗೆ ಇದೆ.

Published on: Dec 09, 2021 12:14 PM