ಸೆಲೆಬ್ರಿಟಿಗಳ ತಮ್ಮ ಪ್ರೀತಿಪಾತ್ರರಿಗೆ ದುಬಾರಿ ಉಡುಗೊರೆ ನೀಡುವ ಪರಿಪಾಠ ನಡೆದುಕೊಂಡು ಬಂದಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 19, 2021 | 1:46 AM

ಬಾಲಿವುಡ್​ನ ಅತ್ಯಂತ ಪ್ರತಿಭಾವಂತೆ ಮತ್ತು ಸುಂದರ ನಟಿ ವಿದ್ಯಾ ಬಾಲನ್ ಅವರಿಗೆ ಪತಿ ಸಿದ್ಧಾರ್ಥ್ ರಾಯ್ ಕಪೂರ್ ರೂ. 30 ಕೋಟಿ ಬೆಲೆ ಬಾಳುವ ಒಂದು ಫ್ಲ್ಯಾಟ್ ಉಡುಗೊರೆಯಾಗಿ ನೀಡಿದ್ದಾರೆ.

ಶ್ರೀಮಂತರು ಮತ್ತು ಸೆಲಿಬ್ರಿಟಿಗಳು ತಮ್ಮ ಪ್ರಿಯರಾದವರಿಗೆ ಉಡುಗೊರೆ ನೀಡುವುದರಲ್ಲಿ ಅತಿ ಅನಿಸುವಷ್ಟು ಧಾರಾಳಿಗಳಾಗಿರುತ್ತಾರೆ. ಅವರು ನೀಡಿರುವ ದುಬಾರಿ ಗಿಫ್ಟಗಳ ಒಂದು ಚಿಕ್ಕ ಲಿಸ್ಟ್ ನಮ್ಮಲ್ಲಿದೆ. ಇದನ್ನು ಓದವಾಗ ನಿಮ್ಮಲ್ಲಿ ಬೆರಗು ಮೂಡಿದರೆ ಉತ್ಪ್ರೇಕ್ಷೆಯೆನಿಸದು. ಮೊನ್ನೆ ಮದುವೆಯಾದರಲ್ಲ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್-ಇವರು ಪರಸ್ಪರ ಉಡುಗೊರೆಗಳನ್ನು ಕೊಟ್ಟುಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿಯೇನೆಂದರೆ, ವಿಕ್ಕಿ ತಮ್ಮ ಪತ್ನಿಗೆ ನೀಡಿದ ಉಡುಗೊರೆಗಿಂತ ಕತ್ರೀನಾ ತಮ್ಮ ಪತ್ನಿಗೆ ನೀಡಿದ ಗಿಫ್ಟ್ ಬಹಳ ದುಬಾರಿಯಾಗಿದೆ. ವಿಕ್ಕಿ ರೂ 1.3 ಕೋಟಿ ಬೆಲೆಬಾಳುವ ಡೈಮಂಡ್ ಉಂಗುರವನ್ನು ಕಾಣಿಕೆಯಾಗಿ ನೀಡಿದ್ದರೆ ಕತ್ರೀನಾ ರೂ. 15 ಕೋಟಿಯ ಬಂಗ್ಲೆಯನ್ನು ನೀಡಿದ್ದಾರೆ.

ನಿಕ್ ಜೋನಾಸ್ ತಮ್ಮ ಪತ್ನಿ ಪ್ರಿಯಾಂಕಾ ಚೋಪ್ರಾಗೆ ರೂ. 2.73 ಕೋಟಿಯ ಮರ್ಸಿಡಿಸ್ ಬೆಂಜ್ ಮೆಬ್ಯಾಕ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನಮ್ಮ ಟೀಮ್ ಇಂಡಿಯ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ತಾರಾ ಪತ್ನಿ ಅನುಷ್ಕಾ ಶರ್ಮಾಗೆ ರೂ. 35 ಕೋಟಿ ಬೆಲೆಯ ಬಂಗ್ಲೆ ನೀಡಿದ್ದಾರೆ.

ಬಾಲಿವುಡ್​ನ ಅತ್ಯಂತ ಪ್ರತಿಭಾವಂತೆ ಮತ್ತು ಸುಂದರ ನಟಿ ವಿದ್ಯಾ ಬಾಲನ್ ಅವರಿಗೆ ಪತಿ ಸಿದ್ಧಾರ್ಥ್ ರಾಯ್ ಕಪೂರ್ ರೂ. 30 ಕೋಟಿ ಬೆಲೆ ಬಾಳುವ ಒಂದು ಫ್ಲ್ಯಾಟ್ ಉಡುಗೊರೆಯಾಗಿ ನೀಡಿದ್ದಾರೆ. ಕನ್ನಡತಿ ಶಿಲ್ಪಾ ಶೆಟ್ಟಿಗೆ ಅವರಿಗೆ ಪತಿ ರಾಜ್ ಕುಂದ್ರಾ ದುಬೈನಲ್ಲಿರುವ ಬುರ್ಜ್ ಕಲೀಫಾನಲ್ಲಿ ರೂ. 50 ಕೋಟಿಯ ಫ್ಲ್ಯಾಟೊಂದನ್ನು ಖರೀದಿಸಿ ಕೊಟ್ಟಿದ್ದಾರೆ.

ಮೊನ್ನೆಯಷ್ಟೇ ಪತ್ನಿ ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿದ ಮಿ ಪರ್ಫಕ್ಷನಿಸ್ಟ್ ಅಮಿರ್ ಖಾನ್ ಡಿವೋರ್ಸ್ಗೆ ಮೊದಲು ಅಮೆರಿಕಾನಲ್ಲಿ ರೂ. 75 ಕೋಟಿ ಬೆಲೆಯ ಬಂಗ್ಲೆ ಉಡುಗೊರೆಯಾಗಿ ನೀಡಿದ್ದರು. ಸಂಜುಬಾಬಾ ತಮಗಿಂತ 19 ವರ್ಷ ಕಿರಿಯವರಾಗಿರುವ ಪತ್ನಿ ಮಾನ್ಯತಾ ದತ್ ಗೆ ರೂ. 3 ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರು ಗಿಫ್ಟ್ ನೀಡಿದ್ದಾರೆ.

ಇದನ್ನೂ ಓದಿ:   ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಿನ್ನಿಸುವ ವ್ಯವಸ್ಥಿತ ಜಾಲವೊಂದು ಪತ್ತೆ; ವಿಡಿಯೋ ನೋಡಿ

Published on: Dec 19, 2021 01:45 AM