Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಸಾದ್ ಬಿದ್ಪಪ್ಪನ ಮಗ ಆ್ಯಡಂ ಬಿದ್ದಪ್ಪನಿಗೆ ಕುಡಿಯೋದು ಗೊತ್ತು, ಕಾನೂನು ಪಾಲಕರೊಂದಿಗೆ ಮಾತಾಡೋ ರೀತಿ ಗೊತ್ತಿಲ್ಲ!

ಪ್ರಸಾದ್ ಬಿದ್ಪಪ್ಪನ ಮಗ ಆ್ಯಡಂ ಬಿದ್ದಪ್ಪನಿಗೆ ಕುಡಿಯೋದು ಗೊತ್ತು, ಕಾನೂನು ಪಾಲಕರೊಂದಿಗೆ ಮಾತಾಡೋ ರೀತಿ ಗೊತ್ತಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 27, 2023 | 10:22 AM

ಎರಡು ದಿನಗಳ ಹಿಂದೆ ಮದ್ಯದ ಅಮಲೇರಿಸಿಕೊಂಡು ನಗರದ ಯಲಹಂಕ ಪ್ರದೇಶದಲ್ಲಿ ರ‍್ಯಾಶ್ ಡ್ರೈವ್ ಮಾಡುತಿದ್ದ ಆ್ಯಡಂನನ್ನು ಯಾರೋ ಒಬ್ಬರ ದೂರಿನ ಮೇರೆಗೆ ಈ ಪೊಲೀಸ್ ಕಾರನ್ನು ಅಡ್ಡಹಾಕಿ ನಿಲ್ಲಿಸಿದ್ದಾರೆ. ಆಗಲೇ ಅವನು ಹೀಗೆ ಹುಚ್ಚನಂತೆ ನಡುರಸ್ತೆಯಲ್ಲಿ ಪೊಲೀಸ್ ಮೇಲೆ ಕೂಗಾಡಿದ್ದಾನೆ.

ಬೆಂಗಳೂರು: ಕಂಠಮಟ್ಟ ಕುಡಿದು ನಡುರಸ್ತೆಯಲ್ಲಿ ಕರ್ತವ್ಯನಿರತ ಪೊಲೀಸ್ ಜೊತೆ ದುರ್ವರ್ತನೆ ಪ್ರದಶಿಸುತ್ತಿರುವ ಇವನ ಯಾರ ಮಗನಾದರೇನು? ಹೆತ್ತವರ ಹೆಸರಿಗೆ ಕಳಂಕವೇ. ಅಂದಹಾಗೆ ಪೊಲೀಸ್ ಹೆದರಿಸಲ ಪ್ರಯತ್ನಿಸುತ್ತಿರುವ ಇವನು ಸೆಲಿಬ್ರಿಟಿ ಫ್ಯಾಶನ್ ಡಿಸೈನರ್ (fashion designer) ಪ್ರಸಾದ್ ಬಿದ್ದಪ್ಪ (Prasad Bidapa) ಮಗ ಆ್ಯಡಂ ಬಿದ್ದಪ್ಪ (Adam Bidapa). ತನ್ನ ವರ್ತನೆಯಿಂದ ಇವನು ಕನ್ನಡಿಗರ ದೃಷ್ಟಿಯಲ್ಲಿ ಬಿದ್ಹೋಗಿದ್ದಾನೆ! ಎರಡು ದಿನಗಳ ಹಿಂದೆ ಮದ್ಯದ ಅಮಲೇರಿಸಿಕೊಂಡು ನಗರದ ಯಲಹಂಕ ಪ್ರದೇಶದಲ್ಲಿ ರ‍್ಯಾಶ್ ಡ್ರೈವ್ ಮಾಡುತಿದ್ದ ಇವನನ್ನು ಯಾರೋ ಒಬ್ಬರ ದೂರಿನ ಮೇರೆಗೆ ಈ ಪೊಲೀಸ್ ಕಾರನ್ನು ಅಡ್ಡಹಾಕಿ ನಿಲ್ಲಿಸಿದ್ದಾರೆ. ಆಗಲೇ ಆ್ಯಡಂ ಹೀಗೆ ಹುಚ್ಚನಂತೆ ನಡುರಸ್ತೆಯಲ್ಲಿ ಪೊಲೀಸ್ ಮೇಲೆ ಕೂಗಾಡಿದ್ದಾನೆ. ನಂತರ ಇವನನ್ನು ಪೊಲೀಸ್ ಸ್ಟೇಷನ್ ಗೆ ಎಳೆದೊಯ್ದಾಗಲೂ ಗೂಂಡಾ ವರ್ತನೆ ಮುಂದುವರಿಸಿದ್ದಾನೆ. ಯಲಹಂಕ ನ್ಯೂ ಟೌನ್ ಪೊಲೀಸರು ದೂರು ಆಧರಿಸಿ ಎಫ್ ಐ ಆರ್ ದಾಖಲಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ