AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?

ಇಂದಿನಿಂದ ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?

Shivaraj
| Edited By: |

Updated on: Apr 01, 2026 | 4:21 PM

Share

ರಾಜ್ಯದಲ್ಲಿ (Karnataka) ಇಂದಿನಿಂದ ಜನಗಣತಿ (Census) ಆರಂಭಗೊಂಡಿದ್ದು, ಎರಡು ಹಂತಗಳಲ್ಲಿ ಜನಗಣತಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಗಣತಿ ಮತ್ತು ಎರಡನೇ ಹಂತದಲ್ಲಿ ಜನ ಗಣತಿ ನಡೆಯಲಿದ್ದು, ಇಂದಿನಿಂದ ಸ್ವಯಂ ಗಣತಿ ಕೂಡ ಆರಂಭವಾಗಿದೆ. ಇನ್ನು ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದು, ಏನೆಲ್ಲಾ ಮಾಡಬೇಕು ಎನ್ನುವುದನ್ನು ವಿವರಿಸಿದ್ದಾರೆ ಕೇಳಿ

ಬೆಂಗಳೂರು, (ಏಪ್ರಿಲ್ 01): ರಾಜ್ಯದಲ್ಲಿ (Karnataka) ಇಂದಿನಿಂದ ಜನಗಣತಿ (Census) ಆರಂಭಗೊಂಡಿದ್ದು, ಎರಡು ಹಂತಗಳಲ್ಲಿ ಜನಗಣತಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಗಣತಿ ಮತ್ತು ಎರಡನೇ ಹಂತದಲ್ಲಿ ಜನ ಗಣತಿ ನಡೆಯಲಿದ್ದು, ಇಂದಿನಿಂದ ಸ್ವಯಂ ಗಣತಿ ಕೂಡ ಆರಂಭವಾಗಿದೆ. ಏ.1ರಿಂದ ಏ.15ರವರೆಗೂ ಸ್ವಯಂ ಗಣತಿಯಲ್ಲಿ ಭಾಗವಹಿಸಬಹುದು. ನಂತರ ಗಣತಿದಾರರು ಮನೆ ಮನೆಗೆ ತೆರಳಿ ಗಣತಿ ಮಾಡಲಿದ್ದಾರೆ. ಎರಡನೇ ಹಂತವಾಗಿ ಏ.16ರಿಂದ ಮೇ 15ರ ಅವಧಿಯಲ್ಲಿ ಗಣತಿದಾರರು ಮನೆ – ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಪರಿಶೀಲಿಸಿ ಸಂಗ್ರಹಿಸಲಿದ್ದಾರೆ. ಸ್ವಯಂ ಗಣತಿಯಲ್ಲಿ ಸ್ವತಃವಾಗಿ ಜನರೇ ಭಾಗವಹಿಸಿ ನೋಂದಣಿ ಮಾಡಿಕೊಳ್ಳಬಹುದು. ಗಣತಿಯ ವೆಬ್ ಪೋರ್ಟಲ್‌ನಲ್ಲಿ ಸ್ವಯಂ ಗಣತಿಯಲ್ಲಿ ಭಾಗವಹಿಸಬಹುದು. ಮನೆಯ ಯಾವುದೇ ಒಬ್ಬ ಸದಸ್ಯರು ವೆಬ್ ಪೋರ್ಟಲ್ ಮೂಲಕ ಮನೆಯ ವಿವರಗಳನ್ನ ದಾಖಲಿಸಬಹುದು. ನೋಂದಾಣಿ ನಂತರ ಸ್ವಯಂಗಣತಿಯ ಐಡಿಯನ್ನ ಮೊಬೈಲ್ ಅಥವಾ ಇಮೇಲ್ ಮೂಲಕ ಪಡೆಯಬಹುದು. ಇನ್ನು ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದು, ಏನೆಲ್ಲಾ ಮಾಡಬೇಕು ಎನ್ನುವುದನ್ನು ವಿವರಿಸಿದ್ದಾರೆ ಕೇಳಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us