ಬಾಗಲಕೋಟೆಯ ನವವಿವಾಹಿತೆಯ ಆಕಸ್ಮಿಕ ಸಾವು ವರದಕ್ಷಿಣೆಗಾಗಿ ನಡೆದ ಕೊಲೆಯೇ?
ಮಹಾದೇವಿ ಸಾವಿಗೆ ಸಂಬಂಧಿಸಿದಂತೆ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣನ್ನು ದಾಖಲಿಸಿಕೊಳ್ಳಲಾಗಿದೆ. ಹೆಬ್ಬಾಳಪ್ಪ ಪತ್ನಿಯ ಜೊತೆ ಎರಡು ದಿನಗಳ ಮಟ್ಟಿಗೆ ಚೆನ್ನಾಗಿದ್ದು ನಂತರ ಜಗಳ ಕಾಯುತ್ತಿದ್ದ ಎಂದು ಮಹಾದೇವಿಯ ಪೋಷಕರು ಹೇಳುತ್ತಾರೆ. ಪೊಲೀಸರು ತನಿಖೆ ನಡೆಸಿ ನಿಜಾಂಶ ಬಯಲು ಮಾಡಬೇಕು.
ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲ್ಲೂಕಿನ ಮಂಟೂರು ಗ್ರಾಮಕ್ಕೆ ಇಂದು ಬೆಳಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಭೇಟಿ ನೀಡಿ ಆಗಸ್ಟ್ 15 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಮತ್ತು ಕೇವಲ 4 ತಿಂಗಳು ಹಿಂದಷ್ಟೇ ಮದುವೆಯಾಗಿದ್ದ ಮಹಾದೇವಿಯ ಪೋಷಕರಿಗೆ ಸಾಂತ್ವನ ಹೇಳಿ ಪ್ರಕರಣದ ವಿವರ ಪಡೆದುಕೊಂಡರು. ಮಹಾದೇವಿಯನ್ನು ಅದೇ ಮುಧೋಳ ತಾಲ್ಲೂಕಿ ವಜ್ಜರಹಟ್ಟಿ ಗ್ರಾಮದ ಹೆಬ್ಬಾಳಪ್ಪ ಹೆಸರಿನ ಯುವಕನಿಗೆ ಮದುವೆ ಮಾಡಿಕೊಡಲಾಗಿತ್ತು. ಆಗಸ್ಟ್ 15ರಂದು ಪತಿಯೊಂದಿಗೆ ಬೈಕ್ ಮೇಲೆ ಹೋಗುವಾಗ ಮಹಾದೇವಿ ಕೆಳಗೆ ಬಿದ್ದು ಸತ್ತಳು ಎಂದು ಹೆಬ್ಬಾಳಪ್ಪ ಮತ್ತು ಅವನ ಕುಟುಂಬದವರು ಹೇಳುತ್ತಾರೆ. ಅದರೆ, ತಮ್ಮ ಮಗಳದ್ದು ಆಕಸ್ಮಿಕ ಸಾವಲ್ಲ ಅವಳ ಕೊಲೆ ಮಾಡಲಾಗಿದೆ ಎಂದು ಮಹಾದೇವಿ ಪೋಷಕರು ಅರೋಪಿಸುತ್ತಿದ್ದಾರೆ. ಮಹಾದೇವಿ ಕುತ್ತಿಗೆ ಮೇಲೆ ಕಲೆ ಮತ್ತು ಗಾಯಗಳಿದ್ದವು, ಹೆಬ್ಳಾಳಪ್ಪ ಮತ್ತು ಅವನ ತಂದೆ ತಾಯಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು, ಅದೇ ಕಾರಣಕ್ಕೆ ಆಕೆಯನ್ನು ಕೊಂದು ಅಪಘಾತದಲ್ಲಿ ಸತ್ತಳು ಅಂತ ಬಿಂಬಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವರದಕ್ಷಿಣೆಗಾಗಿ ಗಂಡನ ಮನೆಯವರಿಂದಲೇ ವಿಷ ಹಾಕಿದ ಆರೋಪ; ಮಹಿಳೆ ಸಾವು, ಐದು ತಿಂಗಳ ಮಗು ಸ್ಥಿತಿ ಚಿಂತಾಜನಕ