‘ದೇವಸ್ಥಾನದ ಮುಂದೆ ಆ ವಿಚಾರ ಬೇಡ’; ದರ್ಶನ್ ವಿಚಾರದಲ್ಲಿ ಶ್ರುತಿ ಖಡಕ್ ಮಾತು 

‘ದೇವಸ್ಥಾನದ ಮುಂದೆ ಆ ವಿಚಾರ ಬೇಡ’; ದರ್ಶನ್ ವಿಚಾರದಲ್ಲಿ ಶ್ರುತಿ ಖಡಕ್ ಮಾತು 

ರಾಜೇಶ್ ದುಗ್ಗುಮನೆ
|

Updated on: Aug 26, 2024 | 1:03 PM

ನಟ ದರ್ಶನ್ ಅವರು ಕೇಂದ್ರ ಕಾರಾಗೃಹದಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಜೈಲಿನಲ್ಲಿ ಕುಳಿತು ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಾ ಇದ್ದರು. ಈ ಫೋಟೋ ವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡೋಕೆ ನಟಿ ಶ್ರುತಿ ನಿರಾಕರಿಸಿದ್ದಾರೆ.

ನಟ ದರ್ಶನ್ ಅವರ ಫೋಟೋ ಒಂದು ವೈರಲ್ ಆಗಿ ಸೆನ್ಸೇಷನ್ ಸೃಷ್ಟಿ ಮಾಡಿದೆ. ಜೈಲಿನಲ್ಲಿ ಅವರು ರೌಡಿ ಶೀಟರ್ ನಾಗನ ಜೊತೆ ಕುಳಿತು ಸಿಗರೇಟ್ ಸೇದುತ್ತಿರುವ ಫೋಟೋ ಇದಾಗಿದೆ. ಈ ಫೋಟೋದಿಂದ ರಾಜ್ಯ ಸರ್ಕಾರ ಮುಜುಗರ ಅನುಭವಿಸುವಂತೆ ಆಗಿದೆ. ಜೈಲಿನಲ್ಲಿ ದರ್ಶನ್ ರಾಜಮರ್ಯಾದೆ ಪಡೆಯುತ್ತಿರುವುದು ಸ್ಪಷ್ಟವಾಗಿದೆ. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ನಟಿ ಶ್ರುತಿ ನಿರಾಕರಿಸಿದ್ದಾರೆ. ಅವರು ಕೃಷ್ಣಾಷ್ಟಮಿ ಆಚರಿಸಲು ಇಸ್ಕಾನ್​ಗೆ ಆಗಮಿಸಿದ್ದರು. ಈ ವೇಳೆ ದರ್ಶನ್​​ ಬಗ್ಗೆ ಕೇಳಲಾಗಿದೆ. ‘ದೇವಸ್ಥಾನದ ಮುಂದೆ ಇದೀನಿ. ನಾನು ಕನ್ನಡದವಳು. ಎಲ್ಲಾ ಸ್ಟುಡಿಯೋದಲ್ಲಿ ಸಿಕ್ತೀನಿ. ದೇವಸ್ಥಾನದ ಮುಂದೆ ಬೇರೆ ವಿಚಾರ ಬೇಡ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.