ಅಪ್ಪನಿಗೆ ತುತ್ತು ಹಾಕದ ಅವಳದ್ದೆಂಥ ದೇಶಪ್ರೇಮ: ಚೈತ್ರಾ ಕುಂದಾಪುರ ತಂದೆ ಆಕ್ರೋಶ

Updated on: May 15, 2025 | 12:36 PM

Chaithra Kundapura: ಹಿಂದುತ್ವದ ಭಾಷಣಗಳ ಮೂಲಕ ಜನಪ್ರಿಯತೆ ಪಡೆದು, ಬಳಿಕ ಹಣ ವಂಚನೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಚೈತ್ರಾ ಕುಂದಾಪುರ ಇತ್ತೀಚೆಗಷ್ಟೆ ಮದುವೆ ಆಗಿದ್ದಾರೆ. ಇದೀಗ ಚೈತ್ರಾ ಅವರ ತಂದೆ, ಮಗಳ ವಿರುದ್ಧ ಆರೋಪ ಮಾಡಿದ್ದು, ಹೆತ್ತ ತಂದೆಗೆ ಒಂದು ತುತ್ತು ಊಟ ಹಾಕದ ಆಕೆಯದ್ದು ಎಂಥಹಾ ದೇಶಪ್ರೇಮ ಎಂದು ಪ್ರಶ್ನೆ ಮಾಡಿದ್ದಾರೆ.

ಚೈತ್ರಾ ಕುಂದಾಪುರ (Chaithra Kundapura) ಹಿಂದೂಪರ ಸಂಘಟನೆಯ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ದೇಶಪ್ರೇಮದ ಭಾಷಣಗಳನ್ನು ಮಾಡಿ ಜನಪ್ರಿಯತೆ ಗಳಿಸಿದ್ದರು. ಬಳಿಕ ಐದು ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸಹ ಸೇರಿದರು. ಆದರೆ ಆ ಬಳಿಕ ಬಿಗ್​ಬಾಸ್ ಮತ್ತು ಇತರೆ ರಿಯಾಲಿಟಿ ಶೋಗಳಿಂದಾಗಿ ಮತ್ತೆ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗಷ್ಟೆ ಚೈತ್ರಾ ಕುಂದಾಪುರ ಮದುವೆ ಆಗಿದ್ದಾರೆ. ಇದೀಗ ಚೈತ್ರಾ ಅವರ ತಂದೆ, ಮಗಳ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಹೆತ್ತ ತಂದೆಗೆ ಒಂದು ತುತ್ತು ಊಟ ಹಾಕದ ಆಕೆಯದ್ದು ಎಂಥಹಾ ದೇಶಪ್ರೇಮ ಎಂದು ಪ್ರಶ್ನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ