‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಕಿಚ್ಚ ಸುದೀಪ್
ಮಾತಿನ ವಿಚಾರದಲ್ಲಿ ಚೈತ್ರಾ ಕುಂದಾಪುರ ಅವರಿಗೆ ತಿರುಗೇಟು ನೀಡುವುದು ಕಷ್ಟ. ಆದರೆ ತಾವು ಬಿಗ್ ಬಾಸ್ ಮನೆಯಲ್ಲಿ ಈಗತಾನೇ ಮಾತಾಡುವುದು ಕಲಿಯುತ್ತಿರುವುದಾಗಿ ಚೈತ್ರಾ ಹೇಳಿದ್ದಾರೆ. ‘ಸೂಪರ್ ಸಂಡೇ ವಿತ್ ಸುದೀಪ್’ ಎಪಿಸೋಡ್ನಲ್ಲಿ ಈ ವಿಚಾರ ಚರ್ಚೆ ಆಗಿದೆ. ಚೈತ್ರಾ ಹೇಳಿದ ಡೈಲಾಗ್ ಕೇಳಿ ಸುದೀಪ್ ಅವರಿಗೆ ಸಿಕ್ಕಾಪಟ್ಟೆ ನಗು ಬಂದಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಚೈತ್ರಾ ಕುಂದಾಪುರ ಹೈಲೈಟ್ ಆಗುತ್ತಿದ್ದಾರೆ. ‘ನಾನು ಈಗಿನ್ನೂ ಮಾತನಾಡೋದು ಕಲಿಯುತ್ತಿದ್ದೇನೆ. ರಂಜಿತ್ ಅಣ್ಣ, ಶಿಶರ್ ಅಣ್ಣ ಇವರೆಲ್ಲ ಮಾತನಾಡೋದು ಹೇಗೆ ಅಂತ ನನಗೆ ಹೇಳಿಕೊಡುತ್ತಿದ್ದಾರೆ’ ಎಂದಿದ್ದಾರೆ ಚೈತ್ರಾ. ಈ ಮಾತು ಕೇಳಿ ಸುದೀಪ್ ಅವರಿಗೂ ಅಚ್ಚರಿ ಆಗಿದೆ. ‘ರಂಜಿತ್.. ನಿಮಗೆ ಇಷ್ಟು ಧೈರ್ಯ ಇದೆಯಾ? ಚೈತ್ರಾಗೆ ಮಾತಾಡೋದು ಕಲಿಸುತ್ತಿದ್ದೀರಾ’ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.