ಚೈತ್ರಾ ಡಿಬಾರ್ ಆಗಿದ್ದಳು: ಮಗಳ ಕಿರುಕುಳಕ್ಕೆ ನೊಂದು ಎಲ್ಲ ವಿಷಯ ಹೇಳಿದ ಬಾಲಕೃಷ್ಣ

Edited By:

Updated on: Dec 19, 2025 | 9:02 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ ಸ್ಪರ್ಧಿ ಚೈತ್ರಾ ಕುಂದಾಪುರ ಅವರ ವಿರುದ್ಧ ನ್ಯಾಯಾಲಯ ಆದೇಶ ನೀಡಿದೆ. ತಂದೆ ಬಾಲಕೃಷ್ಣ ನಾಯ್ಕ್ ಅವರು ಚೈತ್ರಾ ಮೇಲೆ ಕೇಸ್ ಹಾಕಿದ್ದರು. ಕೋರ್ಟ್ ಆದೇಶದ ಬಳಿಕ ಬಾಲಕೃಷ್ಣ ನಾಯ್ಕ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಸ್ಪರ್ಧಿ ಚೈತ್ರಾ ಕುಂದಾಪುರ ಅವರ ವಿರುದ್ಧ ನ್ಯಾಯಾಲಯ ಆದೇಶ ನೀಡಿದೆ. ತಂದೆ ಬಾಲಕೃಷ್ಣ ನಾಯ್ಕ್ ಅವರು ಚೈತ್ರಾ ಮೇಲೆ ಕೇಸ್ ಹಾಕಿದ್ದರು. ಕೋರ್ಟ್ ಆದೇಶದ ಬಳಿಕ ಬಾಲಕೃಷ್ಣ ನಾಯ್ಕ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚೈತ್ರಾ (Chaithra Kundapura) ಅವರ ಇತಿಹಾಸವನ್ನು ಅವರು ತೆರೆದಿಟ್ಟಿದ್ದಾರೆ. ‘ನನಗೆ ನ್ಯಾಯಾಲಯದ ರಕ್ಷಣೆ ಸಿಕ್ಕಿದ್ದು ತುಂಬ ಅನುಕೂಲ ಆಗಿದೆ. ಇನ್ಮುಂದೆ ನನಗೆ ಮಕ್ಕಳಿಂದ, ಹೆಂಡತಿಯಿಂದ ತೊಂದರೆ ಆಗಬಾರದು. ವಿದ್ಯಾಭ್ಯಾಸ ಮಾಡುವಾಗಲೇ ಚೈತ್ರಾ ಪೋಕರಿ ಕೆಲಸ ಮಾಡುತ್ತಿದ್ದಳು. ಪ್ರಥಮ ವರ್ಷ ಪಿಯುಸಿ ಓದುವಾಗಲೇ ಡಿಬಾರ್ ಆಗಿದ್ದಳು. ನನ್ನ ಬುದ್ಧಿವಾದ ಕೇಳುತ್ತಿರಲಿಲ್ಲ’ ಎಂದು ಬಾಲಕೃಷ್ಣ ನಾಯ್ಕ್ (Balakrishna Naik) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.