ಬೇರೆ ಮಹಿಳೆ ಜತೆ ಲವ್ವಿಡವ್ವಿ: ಕಟ್ಟಿಕೊಂಡ ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಮೈಸೂರಿನಲ್ಲಿ ಪತ್ನಿ ನಾಗರತ್ನಳ ಕೊಲೆಗೆ 5 ಲಕ್ಷ ರೂ ಸುಪಾರಿ ನೀಡಿದ್ದ ಪತಿ ಮಹೇಶ್‌ನ ಅಕ್ರಮ ಸಂಬಂಧ ತನಿಖೆಯಲ್ಲಿ ಬಯಲಾಗಿದೆ. ಸಾಯಿಸುವ ಸಂಚು ವಿಫಲವಾದ ಕಾರಣ ನಾಗರತ್ನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಅಗ್ನಿ ಅವಘಡ ಎಂದು ಬಿಂಬಿಸಲು ಯತ್ನಿಸಲಾಗಿತ್ತು. ಪತಿಯನ್ನು ಬಂಧಿಸಲಾಗಿದೆ.
ಮೈಸೂರು, ಡಿಸೆಂಬರ್ 19: ಮರ್ಯಾದೆ ಕೊಡದಿದ್ದಕ್ಕೆ ಪತ್ನಿ ಕೊಲೆಗೆ ಪತಿ ಸುಪಾರಿ ಕೊಟ್ಟಿದ್ದ ಘಟನೆ ಮೈಸೂರಿನ ಬಿಎಂಶ್ರೀ ನಗರದಲ್ಲಿ ನಡೆದಿದೆ. ಗಂಡನಿಗೆ ಕಿಂಚಿತ್ತು ಮರ್ಯಾದೆ ಕೊಡದ ಹಿನ್ನೆಲೆ ಪತ್ನಿ ಕೊಲೆಗೆ ಪತಿ ಸ್ಕೆಚ್ ಹಾಕಿದ್ದ. ಆದರೆ ಆ ಪ್ಲ್ಯಾನ್ ಉಲ್ಟಾ ಹೊಡೆದಿದ್ದು, ಸದ್ಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬಗ್ಗೆ ಪೊಲೀಸ್ ಕಮಿಷನರ್ ಮೈಸೂರು ಸೀಮಾ ಲಾಟ್ಕರ್ ಮಾತನಾಡಿದ್ದು, ಮದುವೆ ಆಗಿ 10 ವರ್ಷವಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಇವಳು ಸತ್ತರೆ ನಾನು ಅವಳನ್ನ ಮನೆಗೆ ಕರೆದುಕೊಂಡು ಬರ್ತೀನಿ ಅಂತಾ ಮಹೇಶ್ ಫೋನ್‌ನಲ್ಲಿ ಮಾತನಾಡಿರುವುದು ಗೊತ್ತಾಗಿದೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 19, 2025 09:50 PM
Latest Videos
