ನೋಡ ನೋಡುತ್ತಿದ್ದಂತೆ ಸಫಾರಿ ವಾಹನದ ಮೇಲೆರಗಿದ ಮಕ್ನಾ ಆನೆ: ಪ್ರವಾಸಿಗರು ಶಾಕ್!
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿಗೆ ಹೋದ ಪ್ರವಾಸಿಗರು ಆನೆಯ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಸಫಾರಿ ವಾಹನದ ಮೇಲೆ ಆನೆ ದಾಳಿ ಮಾಡಲು ಬಂದಾಗ, ವಾಹನ ಚಾಲಕನ ಸಮಯ ಪ್ರಜ್ಞೆಯಿಂದ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲಾಯಿತು. ಈ ಘಟನೆಯ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಲಕನ ವೇಗದ ಚುರುಕುತನಕ್ಕೆ ಪ್ರವಾಸಿಗರು ಧನ್ಯವಾದ ಹೇಳಿದ್ದಾರೆ.
ಚಾಮರಾಜನಗರ, ಸೆಪ್ಟೆಂಬರ್ 07: ಬಂಡೀಪುರ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಬಿಗ್ ಶಾಕ್ವೊಂದು ಎದುರಾಗಿತ್ತು. ನೋಡ ನೋಡುತ್ತಿದ್ದಂತೆ ಮಕ್ನಾ ಆನೆ ಸಫಾರಿ ವಾಹನದ ಮೇಲೆರಗಿ ಬಂದಿತ್ತು. ಮಕ್ನಾ ಆನೆ ಕೊಟ್ಟ ಚಮಕ್ಗೆ ಒಂದು ಕ್ಷಣ ಪ್ರವಾಸಿಗರ ಜೀವ ಬಾಯಿಗೆ ಬಂದಂತ ಅನುಭವ ಉಂಟಾಗಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.