ಕರಾಚಿಯಲ್ಲಿ ಪಂದ್ಯಕ್ಕೂ ಮುನ್ನ ಏರ್ ಶೋ; ಬಾಂಬ್ ಬಿದ್ದವರಂತೆ ಭಯಭೀತರಾದ ಕಿವೀಸ್ ಪ್ಲೇಯರ್ಸ್!ವಿಡಿಯೋ
Champions Trophy 2025: ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಮಯದಲ್ಲಿ, ಪಾಕಿಸ್ತಾನಿ ವಾಯುಪಡೆಯ ವಿಮಾನಗಳು ಆಕಾಶದಲ್ಲಿ ಸಾಹಸ ಪ್ರದರ್ಶನ ನೀಡುತ್ತಿರುವುದು ಕಂಡುಬಂದಿತು. ಆದರೆ ಈ ವಿಮಾನಗಳು ಕ್ರೀಡಾಂಗಣದ ಬಳಿ ಬಂದಾಗ, ಅಭಿಮಾನಿಗಳು ಮಾತ್ರವಲ್ಲದೆ ಆಟಗಾರರು ಕೂಡ ಭಯಭೀತರಾದರು.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಇಂದಿನಿಂದ ಆರಂಭವಾಗಿದ್ದು ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿವೆ. ಕರಾಚಿಯ ನ್ಯಾಷನಲ್ ಬ್ಯಾಂಕ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯುತ್ತಿದೆ. ಈ ಪಂದ್ಯಕ್ಕೂ ಮುನ್ನ ಭವ್ಯ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ, ಪಾಕಿಸ್ತಾನಿ ವಾಯುಪಡೆಯ ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದವು. ಆದರೆ ಇದ್ದಕ್ಕಿದ್ದಂತೆ ಆಕಾಶದಲ್ಲಿ ಯುದ್ಧ ವಿಮಾನಗಳು ಕಾಣಿಸಿಕೊಂಡ ಕಾರಣ, ಆಟಗಾರರು ಮತ್ತು ಅಭಿಮಾನಿಗಳು ಅವುಗಳ ದೊಡ್ಡ ಶಬ್ದದಿಂದ ಆಶ್ಚರ್ಯಚಕಿತರಾದರು. ನ್ಯೂಜಿಲೆಂಡ್ ಆಟಗಾರರು ಆ ಶಬ್ದ ಕೇಳಿ ಸುತ್ತಲೂ ನೋಡಲಾರಂಭಿಸಿದರು. ಇತ್ತ ಅಭಿಮಾನಿಗಳು ಕೂಡ ಆಘಾತಕ್ಕೊಳಗಾಗಿ ತಮ್ಮ ಕೈಗಳಿಂದ ತಮ್ಮ ಕಿವಿಗಳನ್ನು ಮುಚ್ಚಿಕೊಂಡರು.
ಅದ್ಧೂರಿ ಉದ್ಘಾಟನಾ ಕಾರ್ಯಕ್ರಮದ ಸಮಯದಲ್ಲಿ, ವಾಯುಪಡೆಯ ಯುದ್ಧ ವಿಮಾನಗಳು ಆಕಾಶದಲ್ಲಿ ಸಾಹಸ ಪ್ರದರ್ಶನ ನೀಡಿದವು. ಹಲವಾರು ವಿಮಾನಗಳು ಸಾಹಸ ಪ್ರದರ್ಶನ ನೀಡಿ ಕರಾಚಿ ಕ್ರೀಡಾಂಗಣದ ಮೇಲೆ ಹಾರಾಟ ನಡೆಸಿದವು. ಇದೇ ವೇಳೆ ಬೌಂಡರಿಯ ಹೊರಗೆ ನಿಂತಿದ್ದ ನ್ಯೂಜಿಲೆಂಡ್ ಆಟಗಾರ ಡೆವೊನ್ ಕಾನ್ವೇ ದಿಗ್ಭ್ರಮೆಗೊಂಡರು. ವಿಮಾನದ ಸದ್ದು ಕೇಳಿ ಕಾನ್ವೇ ಕೆಳಗೆ ಬಾಗಿದರು. ಅವರ ಜೊತೆಗಿದ್ದ ಗ್ಲೆನ್ ಫಿಲಿಪ್ಸ್ ಮತ್ತು ಮಾರ್ಕ್ ಚಾಪ್ಮನ್ ಗೂ ಸಹ ಏನೂ ಅರ್ಥವಾಗಲಿಲ್ಲ. ನಂತರ ಮೂವರು ಆಟಗಾರರು ನಗುತ್ತಿರುವುದು ಕಂಡುಬಂದಿತು. ವಿಮಾನದ ಶಬ್ದ ಕೇಳಿ ಅಭಿಮಾನಿಗಳು ಕೂಡ ಭಯಭೀತರಾಗಿದ್ದರು. ಆದರೆ, ಮುಂದಿನ ಕ್ಷಣದಲ್ಲಿ ಅಭಿಮಾನಿಗಳು ವೀಡಿಯೊಗಳನ್ನು ಮಾಡಿ ನಗುತ್ತಿರುವುದು ಕಂಡುಬಂದಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್

ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ

ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್ಗೆ ಅಗಿಲ್ಲ: ಯತೀಂದ್ರ

VIDEO: ಆಂಬ್ಯುಲೆನ್ಸ್ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
