Chamundi Rathotsava: ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ರಾಜ ವಂಶಸ್ಥರು

Updated on: Oct 06, 2025 | 11:30 AM

ನಾಡಹಬ್ಬ ಮೈಸೂರು ದಸರಾ ಸಂಭ್ರಮ ಈಗಷ್ಟೇ ಮುಗಿದಿದೆ. ಇದೀಗ ಮೈಸೂರು ಚಾಮುಂಡೇಶ್ವರಿ ದೇವಿಯ ರಥೋತ್ಸವದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಚಾಮುಂಡೇಶ್ವರಿಗೆ ರಾಜವಂಶಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಅಶ್ವಯುಜ ಶುಕ್ಲ ಚಮರ್ಧತಿ ಉತ್ತರಾಬಾದ್ರ ನಕ್ಷತ್ರದಲ್ಲಿ ರಥೋತ್ಸವ ನೆರವೇರಲಿದ್ದು,  ಸಂಜೆ ಸಿಂಹವಾಹನೋತ್ಸವ, ಹಂಸವಾಹನೋತ್ಸವ ಮಂಟಪೋತ್ಸವ ನಡೆಯಲಿದೆ.

ಮೈಸೂರು, ಅಕ್ಟೋಬರ್ 6: ಕೆಲವು ದಿನಗಳ ಹಿಂದೆಯಷ್ಟೇ ನಾಡಹಬ್ಬ ಮೈಸೂರು ದಸರಾ ವಿಜೃಂಭಣೆಯಿಂದ ನಡೆದಿದೆ.  ಮೈಸೂರಿನಲ್ಲಿ ಇದೀಗ ಚಾಮುಂಡಿ ರಥೋತ್ಸವದ ಸಂಭ್ರಮ ಮನೆಮಾಡಿದೆ. ಈ ಮಹೋತ್ಸವದಲ್ಲಿ ರಾಜವಂಶಸ್ಥರು ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು. ಅಶ್ವಯುಜ ಶುಕ್ಲ ಚಮರ್ಧತಿ ಉತ್ತರಾಬಾದ್ರ ನಕ್ಷತ್ರದಲ್ಲಿ ರಥೋತ್ಸವ ನೆರವೇರುತ್ತಿದ್ದು,  ಸಂಜೆ ಸಿಂಹವಾಹನೋತ್ಸವ, ಹಂಸವಾಹನೋತ್ಸವ ಮಂಟಪೋತ್ಸವ ನಡೆಯಲಿದೆ. ಈ ಮಹೋತ್ಸವಗಳಲ್ಲಿ ಪ್ರಮೋದಾದೇವಿ, ಯದುವೀರ್ ಮತ್ತು ತ್ರಿಷಿಕಾ ಭಾಗಿಯಾಗಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ