ಹೆದ್ದಾರಿ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಟಿಟಿ ಟೆಂಪೋ ಪಲ್ಟಿ
ಅಳದಂಗಡಿಯ ಗುರುವಾಯನಕೆರೆ-ಕಾರ್ಕಳ ರಸ್ತೆಯಲ್ಲಿ ಶನಿವಾರದಂದು ರಸ್ತೆ ಅಪಘಾತವೊಂದು ನಡೆದಿದೆ. ಇದೀಗ ಈ ಅಪಘಾತದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಂದು ಬಾರಿ ಈ ದೃಶ್ಯ ನೋಡಿದ್ರೆ ಎದೆ ಝಲ್ ಎನ್ನುತ್ತದೆ. ಹೆದ್ದಾರಿ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಟೆಂಪೋ ಟ್ರಾವೆಲರ್ ಪಲ್ಟಿಯಾಗಿದೆ. ಈ ಬಗ್ಗೆ ಇಲ್ಲಿದೆ ನೋಡಿ ವಿಡಿಯೋ
ಮಂಗಳೂರು, ಅ.6: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಅಳದಂಗಡಿಯ ಗುರುವಾಯನಕೆರೆ-ಕಾರ್ಕಳ ರಸ್ತೆಯಲ್ಲಿ ಶನಿವಾರದಂದು ಎದೆ ಝಲ್ ಎನ್ನುವ ಅಪಘಾತವೊಂದು ನಡೆದಿದೆ. ಹೆದ್ದಾರಿ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಟೆಂಪೋ ಟ್ರಾವೆಲರ್ ಪಲ್ಟಿಯಾಗಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮಹಿಳೆ ರಸ್ತೆ ದಾಟುವ ವೇಳೆ, ಟೆಂಪೋ ಟ್ರಾವೆಲರ್ ತುಂಬಾ ವೇಗವಾಗಿ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ ಚಾಲಕ ರಸ್ತೆ ದಾಟುತ್ತಿದ್ದ ಮಹಿಳೆಯನ್ನು ಅಪಘಾತದಿಂದ ತಪ್ಪಿಸಲು ಹೋಗಿ, ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಟೆಂಪೋ ಪಲ್ಟಿಯಾಗಿದೆ. ಈ ಅಪಘಾತದಿಂದ ಟೆಂಪೋದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣ ಅಪಾಯ ಆಗಿಲ್ಲ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ. ಇನ್ನು ಅಧಿಕಾರಿಗಳು ಕೂಡ ಗುರುವಾಯನಕೆರೆ-ಕಾರ್ಕಳ ಮಾರ್ಗದಲ್ಲಿ, ವಿಶೇಷವಾಗಿ ಜನನಿಬಿಡ ರಸ್ತೆಗಳನ್ನು ದಾಟುವಾಗ ಜಾಗರೂಕರಾಗಿರಲು ಒತ್ತಾಯಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Oct 06, 2025 11:14 AM
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!

