ವಿಡಿಯೋ: ಸಿನಿಮಾ ಸೆಟ್ನಲ್ಲಿ ಚಂದನ್-ನಿವೇದಿತಾ ಜೋಡಿಯ ಸಖತ್ ಡ್ಯಾನ್ಸ್
Chandan-Niveditha: ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಒಟ್ಟಿಗೆ ‘ಕ್ಯಾಂಡಿ ಕ್ರಶ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಸೆಟ್ನಲ್ಲಿಯೇ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಒಟ್ಟಿಗೆ ಡ್ಯಾನ್ಸ್ ಸಹ ಮಾಡಿದ್ದಾರೆ.
ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಚಂದನವದ ಕ್ಯೂಟ್ ಜೋಡಿಗಳಲ್ಲಿ ಒಂದು. ಇಂದು (ಫೆಬ್ರವರಿ 27) ಈ ಜೋಡಿಯ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ. ವಿಶೇಷವೆಂದರೆ ಈ ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು ‘ಕ್ಯಾಂಡಿ ಕ್ರಶ್’. ಸಿನಿಮಾ ಶೂಟಿಂಗ್ನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಚಂದನ್ ಶೆಟ್ಟಿ ಹಾಗೂ ನಿವೇದಿತಾ. ಸೆಟ್ನಲ್ಲಿ ಸಖತ್ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಸಹ ಮಾಡಿದ್ದಾರೆ. ‘ಕ್ಯಾಂಡಿ ಕ್ರಶ್’ ಸೈಕೋ ಥ್ರಿಲ್ಲರ್ ಸಿನಿಮಾ ಆಗಿದ್ದು. ಈ ಇಬ್ಬರೂ ಒಟ್ಟಿಗೆ ನಟಿಸಲು ಹಲವು ಕತೆಗಳನ್ನು ಕೇಳಿದ್ದರಂತೆ. ಆದರೆ ಕೊನೆಗೆ ‘ಕ್ಯಾಂಡಿ ಕ್ರಶ್’ ಸಿನಿಮಾದ ಕತೆ ಒಪ್ಪಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos