Daily Devotional: ನವರಾತ್ರಿ 3ನೇ ದಿನ ಚಂದ್ರಘಂಟಾ ದೇವಿಯ ಮಹತ್ವ ತಿಳಿಯಿರಿ

Updated on: Sep 24, 2025 | 6:49 AM

ನವರಾತ್ರಿಯ ಮೂರನೇ ದಿನವಾದ ಇಂದು ಚಂದ್ರಘಂಟಾ ದೇವಿಯ ಪೂಜೆಯ ವಿಧಾನ ಮತ್ತು ಮಹತ್ವವನ್ನು ತಿಳಿದುಕೊಳ್ಳೋಣ. ಶಾಂತ ಸ್ವರೂಪದ ಚಂದ್ರಘಂಟಾ ದೇವಿಗೆ ಬಿಳಿ ಬಣ್ಣದ ವಸ್ತ್ರ ಧರಿಸಿ ಪೂಜೆ ಸಲ್ಲಿಸುವುದು. ಚಕ್ಕುಲಿ, ಕೋಡುಬಳೆ ಮತ್ತು ಬೆಲ್ಲದ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಬಹುದು. ಈ ಪೂಜೆಯು ಮನಸ್ಸಿನ ಶಾಂತಿ ಮತ್ತು ಕುಟುಂಬದ ಸೌಖ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಬೆಂಗಳೂರು, ಸೆಪ್ಟೆಂಬರ್​ 24: ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ದೇವಿಯನ್ನು ಶಾಂತ ಮತ್ತು ಸೌಮ್ಯ ಸ್ವರೂಪ ಹೊಂದಿದ್ದಾಳೆ. ಹತ್ತು ಕೈಗಳನ್ನು ಹೊಂದಿರುವ ಚಂದ್ರಘಂಟಾ ದೇವಿ ಶಸ್ತ್ರಸಜ್ಜಿತಳಾಗಿದ್ದರೂ, ಆಕೆಯ ಸ್ವಭಾವ ಶಾಂತವಾಗಿದೆ. ಆಕೆಯ ಮಸ್ತಕದಲ್ಲಿ ಚಂದ್ರನ ಗಂಟೆಯ ಆಕಾರ ಇರುವುದರಿಂದ ಆಕೆಗೆ ಚಂದ್ರಘಂಟಾ ದೇವಿ ಎಂದು ಹೆಸರು. ಈ ದೇವಿಯ ಪೂಜೆಗೆ ಬಿಳಿ ಬಟ್ಟೆ ಧರಿಸುವುದು ಮತ್ತು ಕರಿದ ಪದಾರ್ಥಗಳು, ಬೆಲ್ಲದ ಪಾಯಸ ಮತ್ತು ಕೊತ್ತಂಬರಿಯನ್ನು ನೈವೇದ್ಯವಾಗಿ ಅರ್ಪಿಸುವುದು ವಾಡಿಕೆ.

Published on: Sep 24, 2025 06:47 AM