‘ಚಂದ್ರಪ್ರಭ ಕೆಟ್ಟದಾಗಿ ಕಾಮಿಡಿ ಮಾಡ್ತಾರೆ’; ಸುದೀಪ್ ಎದುರೇ ಹೇಳಿದ ಡಾಗ್ ಸತೀಶ್

Updated on: Sep 29, 2025 | 10:50 AM

BBK 12: ಚಂದ್ರಪ್ರಭ ಅವರು ಹಾಸ್ಯದ ಮೂಲಕ ಗಮನ ಸೆಳೆದಿದ್ದಾರೆ. ಈಗ ಅವರು ದೊಡ್ಮನೆಗೆ ಬಂದಿದ್ದಾರೆ. ಈ ವೇಳೆ ಸತೀಶ್ ಅವರು ಚಂದ್ರಪ್ರಭನ ಶೇಪ್​ಔಟ್ ಮಾಡಿದ್ದಾರೆ. ಚಂದ್ರಪ್ರಭ ಕೆಟ್ಟದಾಗಿ ಕಾಮಿಡಿ ಮಾಡ್ತಾರೆ ಎಂದು ನೇರವಾಗಿ ಹೇಳಿದ್ದಾರೆ. ಈ ವಿಚಾರ ಚರ್ಚೆ ಹುಟ್ಟುಹಾಕಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಸೀಸನ್​ನಲ್ಲಿ ಕಾಮಿಡಿಯನ್ ಚಂದ್ರಪ್ರಭ ಹಾಗೂ ಡಾಗ್ ಬ್ರೀಡರ್ ಸತೀಶ್ ಜಂಟಿ ಆಗಿ ದೊಡ್ಮನೆ ಒಳಗೆ ಹೋಗಿದ್ದಾರೆ. ಈ ವೇಳೆ ಸುದೀಪ್ ಎದುರೇ ಪರಸ್ಪರ ಪರಿಚಯ ಮಾಡಿಕೊಳ್ಳಲಾಯಿತು. ‘ಇವರು ಯಾರು ಗೊತ್ತೇ’ ಎಂದು ಸತೀಶ್ ಅವರನ್ನು ತೋರಿಸಿ ಚಂದ್ರಪ್ರಭಗೆ ಕೇಳಲಾಯಿತು. ಇಲ್ಲ ಎಂದು ಚಂದ್ರಪ್ರಭ ಹೇಳಿದರು. ‘ನಾನು ನಾಯಿ ಮಾರೋವ್ನು’ ಎಂದು ತಮ್ಮ ಬಗ್ಗೆ ಪರಿಚಯಿಸಿಕೊಂಡರು ಸತೀಶ್. ಚಂದ್ರಪ್ರಭ ಬಗ್ಗೆ ಮಾತನಾಡುವಾಗ, ‘ನಾನು ಇವರನ್ನು ನೋಡಿದ್ದೇನೆ. ಕೆಟ್ಟದಾಗಿ ಕಾಮಿಡಿ ಮಾಡ್ತಾರೆ’ ಎಂದು ನೇರವಾಗಿ ಹೇಳಿಬಿಟ್ಟರು ಸತೀಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 29, 2025 10:50 AM