ಬಿಗ್ ಬಾಸ್ ಮನೆಯಲ್ಲಿ ಡಾಗ್ ಸತೀಶ್ ಜೀವನ ನೀವಂದುಕೊಂಡಂತೆ ಇಲ್ಲ; ಎಲ್ಲವನ್ನೂ ವಿವರಿಸಿದ ಚಂದ್ರಪ್ರಭ

Updated on: Sep 30, 2025 | 7:13 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ಸ್ಪರ್ಧಿ ಆಗಿರುವ ಡಾಗ್ ಸತೀಶ್ ಅವರು ನೂರಾರು ಕೋಟಿ ರೂಪಾಯಿ ಒಡೆಯ. ಬಿಗ್ ಬಾಸ್ ಮನೆಯೊಳಗೆ ಅವರ ಲೈಫ್ ಸ್ಟೈಲ್ ಬೇರೆ ರೀತಿಯೇ ಇದೆ. ಹಾಸ್ಯ ನಟ ಚಂದ್ರಪ್ರಭ ಅವರು ಆ ಬಗ್ಗೆ ವಿವರಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ಸ್ಪರ್ಧಿ ಆಗಿರುವ ಡಾಗ್ ಸತೀಶ್ (Dog Satish) ಅವರು ನೂರಾರು ಕೋಟಿ ರೂಪಾಯಿ ಒಡೆಯ. ಬಿಗ್ ಬಾಸ್ (Bigg Boss Kannada) ಮನೆಯೊಳಗೆ ಅವರ ಲೈಫ್ ಸ್ಟೈಲ್ ಬೇರೆ ರೀತಿಯೇ ಇದೆ. ಸದ್ಯಕ್ಕೆ ಅವರು ಹಾಸ್ಯ ನಟ ಚಂದ್ರಪ್ರಭ (Chandraprabha) ಜೊತೆಗೆ ಜಂಟಿಯಾಗಿ ಆಟ ಆಡುತ್ತಿದ್ದಾರೆ. ಹಾಗಾಗಿ ಸತೀಶ್ ಅವರನ್ನು ಚಂದ್ರಪ್ರಭ ಹತ್ತಿರದಿಂದ ಗಮನಿಸಿದ್ದಾರೆ. ಸತೀಶ್ ಜೀವನ ಶೈಲಿ ಹೇಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಸೆ.30ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.