ಇಂದು ಚಂದ್ರನಿಗೆ ಇನ್ನೂ ಹತ್ತಿರವಾದ ಚಂದ್ರಯಾನ 3, ನೆಹರು ಪ್ಲಾನಿಟೋರಿಯಂ ನಿರ್ದೇಶಕರ ಜೊತೆ ಟಿವಿ9 ಮಾತುಕತೆ
Chandrayaan 3: ಭಾರತದ ಮಹತ್ವಾಕಾಂಕ್ಷಿ ನೌಕೆ ಚಂದ್ರಯಾನ 3 ಚಂದ್ರನ ಅಂತಿಮ ಕಕ್ಷೆಯೊಳಕ್ಕೆ ಸೇರಿಕೊಂಡಿದೆ. ಇಂದು ನಿರ್ಣಾಯಕ ದಿನವಾಗಿದ್ದು ನೌಕೆಯಿಂದ ಲ್ಯಾಂಡರ್ ಪ್ರತ್ಯೇಕವಾಗಿದೆ. ಐದನೇ ಹಾಗೂ ಅಂತಿಮ ಕಕ್ಷೆಯನ್ನ ಯಶಸ್ವಿಯಾಗಿ ತಲುಪಿದೆ. ನಿನ್ನೆ ಬುಧವಾರ ಬೆಳಗಿನ ಜಾವ 8.30ಕ್ಕೆ ಸರಿಯಾಗಿ ಅಂತಿಮ ಕಕ್ಷೆ ಸೇರಿದೆ. ನೌಕೆಯ ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕಗೊಂಡಿದೆ. ಆಗಸ್ಟ್ 23ರಂದು ನೌಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಸ್ಮೂತ್ ಲ್ಯಾಂಡಿಂಗ್ ಆಗಲಿದೆ.
ಬೆಂಗಳೂರು, ಆಗಸ್ಟ್ 17: ಚಂದ್ರಯಾನ 3 ಯಾನ ಇಂದು ಚಂದ್ರನಿಗೆ (Moon) ಇನ್ನೂ ಹತ್ತಿರವಾಗಿದೆ. ಇಸ್ರೋ ಸಾಹಸಕ್ಕೆ ವಿಶ್ವಾದ್ಯಂತ ಕುತೂಹಲ ಹೆಚ್ಚಿದ್ದು, ಬೆಂಗಳೂರಿನಲ್ಲಿರುವ ಜವಾಹರಲಾಲ್ ನೆಹರೂ ಪ್ಲಾನಿಟೋರಿಯಂ (Jawaharlal Nehru Planetarium, Bangalore) ನಿರ್ದೇಶಕ ಪ್ರಮೋದ್ ಗಲಗಲಿ ಅವರರೊಂದಿಗೆ ಟಿವಿ9 (TV9) ಮಾತುಕತೆ ನಡೆಸಿದೆ. ಚಂದ್ರನಿಗೆ ಇನ್ನೂ ಹತ್ತಿರವಾದ ಚಂದ್ರಯಾನ-3 (Chandrayaan 3) ಇಂದು ಮಹತ್ವದ ಘಟ್ಟ ತಲುಪುವ ಚಂದ್ರಯಾನ-3 – ಇಂದು ಪ್ರೊಪಲ್ಷನ್-ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕ – ಇಸ್ರೋ ಸಾಹಸದ ಬಗ್ಗೆ ವಿಶ್ವಾದ್ಯಂತ ಹೆಚ್ಚಿದ ಕುತೂಹಲ
ಭಾರತದ ಮಹತ್ವಾಕಾಂಕ್ಷಿ ನೌಕೆ ಚಂದ್ರಯಾನ 3 ಚಂದ್ರನ ಅಂತಿಮ ಕಕ್ಷೆಯೊಳಕ್ಕೆ ಸೇರಿಕೊಂಡಿದೆ. ಇಂದು ನಿರ್ಣಾಯಕ ದಿನವಾಗಿದ್ದು ನೌಕೆಯಿಂದ ಲ್ಯಾಂಡರ್ ಪ್ರತ್ಯೇಕವಾಗಿದೆ. ಐದನೇ ಹಾಗೂ ಅಂತಿಮ ಕಕ್ಷೆಯನ್ನ ಯಶಸ್ವಿಯಾಗಿ ತಲುಪಿದೆ. ನಿನ್ನೆ ಬುಧವಾರ ಬೆಳಗಿನ ಜಾವ 8.30ಕ್ಕೆ ಸರಿಯಾಗಿ ಅಂತಿಮ ಕಕ್ಷೆ ಸೇರಿದೆ. ನೌಕೆಯ ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕಗೊಂಡಿದೆ. ಆಗಸ್ಟ್ 23ರಂದು ನೌಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಸ್ಮೂತ್ ಲ್ಯಾಂಡಿಂಗ್ ಆಗಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ