ಚಂದ್ರಯಾನ 3 ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು TV9ನಲ್ಲಿ ಕಣ್ತುಂಬಿಕೊಂಡ ಸಿಎಂ ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಹೀಗೆ: ಚಂದ್ರಯಾನ-3 ರ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಂಡೆ. ಇಸ್ರೋ ವಿಜ್ಞಾನಿಗಳ ದಶಕಗಳ ಪರಿಶ್ರಮವು ನನ್ನಂತ ಕೋಟ್ಯಂತರ ಭಾರತೀಯರ ಕನಸನ್ನು ನನಸಾಗಿಸಿದೆ. ಚಂದ್ರನ ಮೇಲೆ ಭಾರತದ ಪತಾಕೆ ಹಾರಿಸಿ ದೇಶವಾಸಿಗಳು ಹೆಮ್ಮೆಪಡುವಂತೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಧನ್ಯವಾದಗಳು..
Chandrayaan 3 Landing Success: ಚಂದ್ರಯಾನ 3 ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು TV9ನಲ್ಲಿ ವೀಕ್ಷಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣ್ತುಂಬಿಕೊಂಡರು. ಚಂದ್ರಲೋಕದಲ್ಲಿ ಭಾರತದ ದೊಡ್ಡ ಹೆಜ್ಜೆ ಅದಾಗಿತ್ತು. ವಿಕ್ರಮ್ ಲ್ಯಾಂಡಿಂಗ್ ಮೂಲಕ ಪ್ರಬಲ ದೇಶಗಳೇ ತಲುಪದ ಸ್ಥಳಕ್ಕೆ ವಿಕ್ರಮ್ ಎಂಟ್ರಿ ಕೊಟ್ಟಿದೆ. ಇನ್ನೂ ಹೆಮ್ಮೆಯ ಸಂಗತಿಯೆಂದರೆ ಲ್ಯಾಂಡರ್ ಟ್ರ್ಯಾಕಿಂಗ್ ಮತ್ತು ರೋವರ್ ಕಾರ್ಯ ನಿರ್ವಹಣೆ ಬೆಂಗಳೂರು ಇಸ್ರೋ ಕೇಂದ್ರದಿಂದಲೇ ನಡೆಯುತ್ತಿದೆ ಎಂಬುದು ಗಮನಾರ್ಹ. ಕೊನೆಯ 15 ನಿಮಿಷ ಕೌತುಕಕ್ಕೆ ಇಡೀ ದೇಶ ಕಾಯುತ್ತಿತ್ತು. ಸಂಜೆ 6 ಗಂಟೆ 3 ನಿಮಿಷಕ್ಕಾಗಿ ಅದನ್ನು ಖುದ್ದಾಗಿ ತಾವೂ ವೀಕ್ಷಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಸಂಭ್ರಮಿಸಿದರು. ಅದೂ ಈ ಐತಿಹಾಸಿಕ ಕ್ಷಣವನ್ನು TV9 ಮೂಲಕ ಕಣ್ತುಂಬಿಕೊಂಡರು.
ಈನ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಹೀಗೆ: ಚಂದ್ರಯಾನ-3 ರ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಂಡೆ. ಇಸ್ರೋ ವಿಜ್ಞಾನಿಗಳ ದಶಕಗಳ ಪರಿಶ್ರಮವು ನನ್ನಂತ ಕೋಟ್ಯಂತರ ಭಾರತೀಯರ ಕನಸನ್ನು ನನಸಾಗಿಸಿದೆ. ಚಂದ್ರನ ಮೇಲೆ ಭಾರತದ ಪತಾಕೆ ಹಾರಿಸಿ ದೇಶವಾಸಿಗಳು ಹೆಮ್ಮೆಪಡುವಂತೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಧನ್ಯವಾದಗಳು..
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

