Haripriya Vasishta Simha: ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಿಶ್ಚಿತಾರ್ಥದ ಎಕ್ಸಕ್ಲ್ಯೂಸಿವ್ ವಿಡಿಯೋ ಇಲ್ಲಿದೆ ನೋಡಿ

Edited By:

Updated on: Dec 09, 2022 | 4:51 PM

ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಅವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯ ನಿಶ್ಚಿತಾರ್ಥದ ವಿಡಿಯೋವನ್ನು ವಸಿಷ್ಠ ಸಿಂಹ ಹಂಚಿಕೊಂಡಿದ್ದಾರೆ.

ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಅವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ (Haripriya Vasishta Simha Engagement) ಮಾಡಿಕೊಂಡಿದ್ದಾರೆ. ಕೆಲವೇ ಕೆಲವು ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಜರುಗಿತ್ತು. ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಕೂಡ ಹರಿದಾಡಿದ್ದವು. ಸದ್ಯ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರ ನಿಶ್ಚಿತಾರ್ಥದ ವಿಡಿಯೋ ವೈರಲ್​ ಆಗಿದೆ. ನಟ ವಸಿಷ್ಠ ಸಿಂಹ ಅವರು ವಿಡಿಯೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಹರಸಿ’ ಎಂದು ಕ್ಯಾಪ್ಷನ್​ ನೀಡಿದ್ದಾರೆ. ವಿಡಿಯೋ ನೋಡಿದ ಅಭಿಮಾನಿಗಳು ಫುಲ್​​ ಖುಷ್​ ಆಗಿದ್ದು, ಒಳ್ಳೆಯದಾಗಲಿ ಎಂದೆಲ್ಲ ವಿಶ್​ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.