Haripriya: ಹರಿಪ್ರಿಯಾ-ವಸಿಷ್ಠ ಸಿಂಹ ನಡುವೆ ಪ್ರೀತಿ ಹುಟ್ಟಲು ಕಾರಣ ಆಗಿದ್ದೇ ಈ ನಾಯಿಮರಿ

Haripriya Vasishta Simha Love Story: ವಸಿಷ್ಠ ಸಿಂಹ ಅವರು ಕ್ರಿಸ್ಟಲ್​ ಎಂಬ ನಾಯಿಮರಿಯನ್ನು ಹರಿಪ್ರಿಯಾಗೆ ನೀಡಿದ್ದರು. ಇಬ್ಬರ ನಡುವೆ ಪ್ರೀತಿ ಬೆಳೆಯಲು ಈ ಶ್ವಾನವೇ ಕಾರಣ ಎಂಬುದು ವಿಶೇಷ.

Haripriya: ಹರಿಪ್ರಿಯಾ-ವಸಿಷ್ಠ ಸಿಂಹ ನಡುವೆ ಪ್ರೀತಿ ಹುಟ್ಟಲು ಕಾರಣ ಆಗಿದ್ದೇ ಈ ನಾಯಿಮರಿ
ಕ್ರಿಸ್ಟಲ್​, ಹರಿಪ್ರಿಯಾ, ವಸಿಷ್ಠ ಸಿಂಹ
Follow us
TV9 Web
| Updated By: ಮದನ್​ ಕುಮಾರ್​

Updated on: Dec 07, 2022 | 7:48 AM

ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಅವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ (Haripriya Vasishta Simha Engagement) ಮಾಡಿಕೊಂಡರು. ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಶುಭ ಕಾರ್ಯ ನಡೆದಿದೆ. ಇಬ್ಬರ ನಡುವಿನ ಪ್ರೀತಿ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಹರಿಪ್ರಿಯಾ (Hariprriya) ಅವರ ಮೂಗು ಚುಚ್ಚವ ಶಾಸ್ತ್ರದ ವಿಡಿಯೋ ವೈರಲ್​ ಆದ ನಂತರವಷ್ಟೇ ಇವರ ಲವ್​ ಸ್ಟೋರಿ ಹೊರಬಂತು. ಅಚ್ಚರಿ ಎಂದರೆ, ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಡುವೆ ಪ್ರೀತಿ ಶುರುವಾಗಲು ಕಾರಣ ಆಗಿದ್ದು ಒಂದು ನಾಯಿಮರಿ (Pet Dog)! ಈ ವಿಚಾರವನ್ನು ಸ್ವತಃ ಹರಿಪ್ರಿಯಾ ಬಯಲು ಮಾಡಿದ್ದಾರೆ. ತಮ್ಮ ಲವ್​ ಶುರುವಾಗಿದ್ದು ಹೇಗೆ ಎಂಬುದನ್ನು ಅವರು ಎಳೆಎಳೆಯಾಗಿ ವಿವರಿಸಿದ್ದಾರೆ.

ಹೊಸದೊಂದು ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ನಟಿಸುತ್ತಿದ್ದಾರೆ. ಆ ಚಿತ್ರದ ಸೆಟ್​ನಲ್ಲಿ ಸಲುಗೆ ಬೆಳೆದು ಇಬ್ಬರ ನಡುವೆ ಪ್ರೀರಿ ಚಿಗುರಿತು ಅಂತ ಕೆಲವರು ಊಹಿಸಿದ್ದುಂಟು. ಆದರೆ ಅಸಲಿ ಕಹಾನಿ ಏನು ಎಂಬುದನ್ನು ಹರಿಪ್ರಿಯಾ ತೆರೆದಿಟ್ಟಿದ್ದಾರೆ. ವಸಿಷ್ಠ ಸಿಂಹ ನೀಡಿದ ನಾಯಿಮರಿಯಿಂದ ಇವರ ಪ್ರೇಮ್​ ಕಹಾನಿ ಶುರುವಾಯಿತು. ಆ ಶ್ವಾನದ ಹೆಸರು ಕ್ರಿಸ್ಟಲ್​.

ಇದನ್ನೂ ಓದಿ
Image
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ನಡುವಿನ ವಯಸ್ಸಿನ ಅಂತರ ಎಷ್ಟು, ಯಾರು ದೊಡ್ಡವರು? ಇಲ್ಲಿದೆ ಉತ್ತರ
Image
ಮದುವೆ ವದಂತಿ ಬೆನ್ನಲ್ಲೇ ವಿಮಾನ ನಿಲ್ದಾಣದಲ್ಲಿ ಕೈ ಕೈ ಹಿಡಿದು ಸಾಗಿದ ವಸಿಷ್ಠ ಸಿಂಹ ಹರಿಪ್ರಿಯಾ
Image
Haripriya: ಶೀಘ್ರವೇ ಮೌನ ಮುರಿಯುತ್ತಾರಾ ಹರಿಪ್ರಿಯಾ-ವಸಿಷ್ಠ ಸಿಂಹ? ಎಲ್ಲೆಲ್ಲೂ ಇವರದ್ದೇ ಮಾತುಕತೆ
Image
Haripriya: ಹಸೆಮಣೆ ಏರಲು ಸಜ್ಜಾದ ಹರಿಪ್ರಿಯಾ-ವಸಿಷ್ಠ ಸಿಂಹ? ಮೂಗು ಚುಚ್ಚಿದ ವಿಡಿಯೋ ವೈರಲ್​ ಬಳಿಕ ಗುಸುಗುಸು

ಹರಿಪ್ರಿಯಾ ಅವರು ಲಕ್ಕಿ ಮತ್ತು ಹ್ಯಾಪಿ ಎಂಬ ನಾಯಿಗಳನ್ನು ಸಾಕಿದ್ದರು. ಆದರೆ ಲಕ್ಕಿ ಸತ್ತ ನಂತರ ಹ್ಯಾಪಿ ಒಂಟಿಯಾಯ್ತು. ಹರಿಪ್ರಿಯಾ ಕೂಡ ಲಕ್ಕಿಯನ್ನು ಮಿಸ್​ ಮಾಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ವಸಿಷ್ಠ ಸಿಂಹ ಅವರು ಕ್ರಿಸ್ಟಲ್​ ಎಂಬ ನಾಯಿಮರಿಯನ್ನು ಹರಿಪ್ರಿಯಾಗೆ ನೀಡಿದರು.

ಇದನ್ನೂ ಓದಿ: ಹೊಸ ಫೋಟೋ ಹಂಚಿಕೊಂಡು ಎಂಗೇಜ್​ಮೆಂಟ್ ವಿಚಾರ ಅಧಿಕೃತ ಮಾಡಿದ ವಸಿಷ್ಠ ಸಿಂಹ

‘ಹ್ಯಾಪಿ ಮತ್ತು ಕ್ರಿಸ್ಟಲ್​ ನಡುವೆ ಸ್ನೇಹ ಬೆಳೆಯಲು ಸ್ವಲ್ಪ ಸಮಯ ಹಿಡಿಯಿತು. ಕ್ರಿಸ್ಟಲ್​ ಯಾವಾಗಲೂ ಹ್ಯಾಪಿಯ ವಸ್ತುಗಳ ಜೊತೆ ಆಟ ಆಡ್ತಿದ್ದ. ಅದರಿಂದ ಹ್ಯಾಪಿಗೆ ಸಿಟ್ಟು ಬರ್ತಿತ್ತು. ಕ್ರಿಸ್ಟಲ್​ ಮೋಡಿ ಮಾಡ್ತಾನೆ. ಯಾರನ್ನು ಬೇಕಾದ್ರೂ ಬೇಗ ಫ್ರೆಂಡ್​ ಮಾಡಿಕೊಳ್ತಾನೆ. ಹ್ಯಾಪಿ ಜೊತೆಗೂ ಫ್ರೆಂಡ್​ಶಿಪ್​ ಬೆಳೆಸಿಕೊಂಡ. ಈಗ ಅವರಿಬ್ಬರೂ ಜೊತೆಯಲ್ಲೇ ಇರ್ತಾರೆ’ ಎಂದು ಹರಿಪ್ರಿಯಾ ಹೇಳಿದ್ದಾರೆ.

ಇದನ್ನೂ ಓದಿ: Vasishta Simha-Haripriya Engagement: ಎಲ್ಲಾ ಅಂತೆ-ಕಂತೆಗಳಿಗೆ ತೆರೆ: ಹರಿಪ್ರಿಯಾ-ವಸಿಷ್ಠ ಸಿಂಹ ಎಂಗೇಜ್​ಮೆಂಟ್ ಫೋಟೋಸ್ ಇಲ್ಲಿವೆ

‘ಇವತ್ತು ನಿಮಗೊಂದು ಸೀಕ್ರೆಟ್​ ಹೇಳ್ತೀನಿ. ವಸಿಷ್ಠ ಈ ನಾಯಿಯನ್ನು ಗಿಫ್ಟ್​ ಮಾಡಿದಾಗ ಇವನು ಒಂದು ಮೆಸೇಜ್​ ತಂದಿದ್ದಾನೆ ಎಂಬುದು ಗೊತ್ತಿರಲಿಲ್ಲ. ಅವನ ಹೊಟ್ಟೆಯಲ್ಲಿ ಹಾರ್ಟ್​ ಶೇಪ್​ನ ಒಂದು ಬರ್ತ್​ ಮಾರ್ಕ್​ ಇದೆ. ಅವನು ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಪ್ರೀತಿ ಕೂಡ ಬೆಳೆಯಿತು. ಕ್ರಿಸ್ಟಲ್​ ನಮ್ಮಿಬ್ಬರ ಪ್ರೀತಿಗೆ ಕನ್ನಡಿ ಹಿಡಿದಿದ್ದಾನೆ’ ಎಂದಿದ್ದಾರೆ ಹರಿಪ್ರಿಯಾ.

View this post on Instagram

A post shared by Hariprriya (@iamhariprriya)

ಹ್ಯಾಪಿ ಮತ್ತು ಕ್ರಿಸ್ಟಲ್​ ಕಥೆಯನ್ನು ಒಂದು ವಿಡಿಯೋ ಮೂಲಕ ಹರಿಪ್ರಿಯಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿ​ದ್ದಾರೆ. ಹರಿಪ್ರಿಯಾ-ವಸಿಷ್ಠ ಅವರ ಎಂಗೇಜ್​ಮೆಂಟ್​ ಫೋಟೋಗಳು ವೈರಲ್​ ಆಗಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ