Vasishta Simha-Haripriya Engagement: ಎಲ್ಲಾ ಅಂತೆ-ಕಂತೆಗಳಿಗೆ ತೆರೆ: ಹರಿಪ್ರಿಯಾ-ವಸಿಷ್ಠ ಸಿಂಹ ಎಂಗೇಜ್ಮೆಂಟ್ ಫೋಟೋಸ್ ಇಲ್ಲಿವೆ
ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿವೆ.
Updated on:Dec 03, 2022 | 4:12 PM

ದುಬೈನಲ್ಲಿ ಕೈ-ಕೈ ಹಿಡಿದುಕೊಂಡು ಸುತ್ತಾಡುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಕಲವು ದಿನಗಳಿಂದ ಹಲ್ ಚಲ್ ಎಬ್ಬಿಸಿದ ಜೋಡಿ ಅಂದರೆ ಅದು ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ. ಈ ಜೋಡಿ ಮದ್ವೆಗೆ ಸಜ್ಜಾಗುತ್ತಿದೆ ಎನ್ನುವ ಅಂತೆ-ಕಂತೆಗಳು ಹುಟ್ಟಿಕೊಂಡಿದ್ದವು. ಆದ್ರೆ, ಈ ಬಗ್ಗೆ ಯಾವುದೇ ಖಚಿತತೆ ಇರ್ಲಿಲ್ಲ.ಇದೀಗ ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಬಿದಿದ್ದು, ಸದ್ಯ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಎಂಗೇಜ್ಮೆಂಟ್ ಮಾಡಿಕೊಂಡಿರುವುದು ಕನ್ಫರ್ಮ್ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಿಂಗ್ ಬದಲಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಆ ಮೂಲಕ ನಿಶ್ಚಿತಾರ್ಥವಾಗಿರುವುದು ಖಚಿತವಾಗಿದ್ದು, ಹಸೆಮಣೆ ಏರೋಕೆ ಈ ಜೋಡಿ ರೆಡಿಯಾಗಿದೆ.

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡ ಫೋಟೋಗಳು ವೈರಲ್ ಆಗಿವೆ.

ನಟಿ ಹರಿಪ್ರಿಯಾ ಅವರ ನಿವಾಸದಲ್ಲಿ ನಿಶ್ಚಿತಾರ್ಥ ಶುಭಕಾರ್ಯ ನಡೆದಿದ್ದು, ಕುಟುಂಬಗಳ ಸಮ್ಮುಖದಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಹೊಸದೊಂದು ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ನಟಿಸಿದ್ದು, ಈ ವೇಳೆ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿದೆ ಎನ್ನಲಾಗುತ್ತಿದೆ.

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಸದ್ಯ ಈ ವಿಚಾರ ತಿಳಿದ ಇಬ್ಬರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
Published On - 4:11 pm, Sat, 3 December 22
























