AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krishna G Rao: ಕೆಜಿಎಫ್ ಸಿನಿಮಾ ಖ್ಯಾತಿಯ ತಾತ ಕೃಷ್ಣ ಜಿ ರಾವ್‌ ನಿಧನ

ಕೃಷ್ಣ ರಾವ್ (Krishna Rao) ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ( ಡಿ. 7) ಕೊನೆಯುಸಿರೆಳೆದಿದ್ದಾರೆ. 

Krishna G Rao: ಕೆಜಿಎಫ್ ಸಿನಿಮಾ ಖ್ಯಾತಿಯ ತಾತ ಕೃಷ್ಣ ಜಿ ರಾವ್‌ ನಿಧನ
ಕೃಷ್ಣರಾವ್(70)​ ವಿಧಿವಶ
TV9 Web
| Updated By: Digi Tech Desk|

Updated on:Dec 08, 2022 | 4:29 AM

Share

‘ಕೆಜಿಎಫ್​’ (KGF) ತಾತ ಎಂದೇ ಫೇಮಸ್ ಆಗಿದ್ದ ಕೃಷ್ಣ ರಾವ್ (Krishna Rao) ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ( ಡಿ. 7) ಮಧ್ಯಾಹ್ನ 3:30ಕ್ಕೆ ಕೊನೆಯುಸಿರೆಳೆದಿದ್ದಾರೆ. ಶ್ವಾಸಕೋಶದ ಸೋಂಕು ಉಂಟಾಗಿದ್ದರಿಂದ ಅವರನ್ನು ಬೆಂಗಳೂರಿನ ಸೀತಾಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆರೋಗ್ಯದ ಬಗ್ಗೆ ಸೋದರ ಸಂಬಂಧಿ ನಂದಕುಮಾರ್ ಅವರು ಈ ಹಿಂದೆ ಮಾಹಿತಿ ಹಂಚಿಕೊಂಡಿದ್ದರು. ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಬಳಿಕ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಧನ ಹೊಂದಿದ್ದಾರೆ. ಸದ್ಯ ಕೃಷ್ಣ ರಾವ್ ಅವರ ಸಾವಿನ ಸುದ್ದಿ ತಿಳಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಾಳೆ ಬೆಳಗ್ಗೆ 11:00 ಘಂಟೆಗೆ ಸೀತಾ ಸರ್ಕಲ್​ನಲ್ಲಿರುವ ಕೃಷ್ಣ ಅವರ ಅಣ್ಣನ ಮನೆ ಬಳಿಯ ಸ್ಮಶಾನದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.

ಇದನ್ನೂ ಓದಿ: BBK9: ಹೊಡೆದಾಡಿಕೊಂಡ ಗುರೂಜಿ-ರೂಪೇಶ್​ ರಾಜಣ್ಣ; ಇಬ್ಬರ ಕೋಪದಿಂದ ಕೈ ಮೀರಿತು ಪರಿಸ್ಥಿತಿ

ಕೃಷ್ಣ ರಾಮ್​ ಅವರು ನಟ ಶಂಕರ್​ ನಾಗ್​ ಕಾಲದಿಂದಲೂ ಚಿತ್ರರಂಗದಲ್ಲಿದ್ದು, ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ನಟ ರಾಕಿಂಗ್​ ಸ್ಟಾರ್​ ಯಶ್​ ನಟನೆಯ ಕೆಜಿಎಫ್​ 1 ಮತ್ತು ಕೆಜಿಎಫ್​ 2 ಚಿತ್ರಗಳಲ್ಲಿ ಕೃಷ್ಣ ರಾಮ್​ ಅವರು ನಟಿಸಿದ ಬಳಿಕ ಖ್ಯಾತಿ ಪಡೆದುಕೊಂಡರು. ಈ ಚಿತ್ರಗಳಿಂದ ಅವರು ಕೆಜಿಎಫ್ ತಾತ ಎಂದು ಪ್ರಸಿದ್ಧರಾದರು. ಕೆಜಿಎಫ್ 2 ಚಿತ್ರದಲ್ಲಿನ ಅವರ ಡೈಲಾಗ್​ಗೆ ಫ್ಯಾನ್ಸ್​ ಫಿದಾ ಆಗಿದ್ದರು. ಚಿತ್ರದಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರು ಅವರ ಪಾತ್ರ ಮತ್ತು ಡೈಲಾಗ್​ನಿಂದ ಫ್ಯಾನ್ಸ್​ಗಳಿಗೆ ಇಷ್ಟವಾಗಿದ್ದರು.

ಕೆಜಿಎಫ್ ಸರಣಿ ಚಿತ್ರಗಳಿಂದ ಕೃಷ್ಣ ರಾವ್​​ ಅವರಿಗೆ ಸಾಕಷ್ಟು ಚಿತ್ರಗಳ ಆಫರ್​ ಕೂಡ ಬಂದಿದ್ದವು. ಕೃಷ್ಣ, ಕುಮಾರ್ ನಿರ್ದೇಶನದ ನ್ಯಾನೋ ನಾರಾಯಣಪ್ಪ ಎಂಬ ಹಾಸ್ಯ ಚಿತ್ರದಲ್ಲಿ ಕೃಷ್ಣ ರಾವ್​ ಅವರು ಬಣ್ಣ ಹಚ್ಚಿದ್ದರು. ಆದರೆ ಈ ಚಿತ್ರ ಬಿಡುಗಡೆಗೂ ಮುನ್ನವೆ ಅವರು ನಿಧನ ಹೊಂದಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:29 pm, Wed, 7 December 22