ನಮ್ಮ ರೈತಬಾಂಧವರು ಚೆಡ್ಡಿ ಧರಿಸುವುದರಿಂದ ಅದು ಗೌರವದ ಸಂಕೇತವಾಗಿದೆ, ಇದೇ ಬೇರೆ ಆರೆಸ್ಸೆಸ್ ಚೆಡ್ಡಿಯೇ ಬೇರೆ! ಕುಮಾರಸ್ವಾಮಿ
ಚೆಡ್ಡಿ ನಮ್ಮ ರೈತ ಬಾಂಧವರು ಧರಿಸುತ್ತಾರೆ, ಹಾಗಾಗಿ ನಮಗದು ಗೌರವದ ಸಂಕೇತವಾಗಿದೆ. ಆದರೆ ಅವರು ಧರಿಸುವ ಚೆಡ್ಡಿಯೇ ಬೇರೆ, ಆರೆಸ್ಸೆಸ್ ಚೆಡ್ಡಿಯೇ ಬೇರೆ ಎಂದು ಕುಮಾರಸ್ವಾಮಿ ಹೇಳಿದರು.
Mysuru: ರಾಜ್ಯದಲ್ಲಿ ಚೆಡ್ಡಿ ವಿವಾದ ಜೋರು ಹಿಡಿದಿದೆ ಮಾರಾಯ್ರೇ. ಅದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ಗಮನಕ್ಕೂ ಬಂದಿದೆ. ಮೈಸೂರಲ್ಲಿ (Mysuru) ಮಂಗಳವಾರ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಅವರು, ಚೆಡ್ಡಿಯನ್ನು ವಿನಾಕಾರಣ ವಿವಾದದ ವಸ್ತುವನ್ನಾಗಿ ಮಾಡಲಾಗಿದೆ. ಈ ಚೆಡ್ಡಿಯಲ್ಲಿ ಏನೂ ಇಲ್ಲ, ಅದರೆ ಅದನ್ನು ಧರಿಸಿ ನಾಗ್ಪುರನಲ್ಲೋ (Nagpur) ಮತ್ತೆಲ್ಲೋ ಕೂತಿರುತ್ತಾರಲ್ಲ, ಅವರ ವಿರುದ್ಧ ಹೋರಾಟ ಮಾಡಬೇಕಿದೆ. ಚೆಡ್ಡಿ ನಮ್ಮ ರೈತ ಬಾಂಧವರು ಧರಿಸುತ್ತಾರೆ, ಹಾಗಾಗಿ ನಮಗದು ಗೌರವದ ಸಂಕೇತವಾಗಿದೆ. ಆದರೆ ಅವರು ಧರಿಸುವ ಚೆಡ್ಡಿಯೇ ಬೇರೆ, ಆರೆಸ್ಸೆಸ್ ಚೆಡ್ಡಿಯೇ ಬೇರೆ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos