ನಮ್ಮ ಪಕ್ಷದೊಂದಿಗೆ ಬೆಳೆದ ಚಲುವರಾಯಸ್ವಾಮಿ ಈಗ ಕಾಂಗ್ರೆಸ್ ಸೇನಾನಾಯಕನಂತೆ ಓಡಾಡುತ್ತಾರೆ: ಕುಮಾರಸ್ವಾಮಿ
ತಮ್ಮ ಸಮುದಾಯದ 1,000 ಮತಗಳನ್ನೂ ಹೊಂದಿರದ ಸಿಂಧ್ಯಾ ಅವರನ್ನು 1983 ರಲ್ಲಿ ಕನಕಪುರಕ್ಕೆ ತಂದು ವಿಧಾನಸಭೆಗೆ ಆಯ್ಕೆಯಾಗುವಂತೆ ಮಾಡಿದ್ದು ಹೆಚ್ ಡಿ ದೇವೇಗೌಡರು. ಜೆಡಿಎಸ್ ಪಕ್ಷದಲ್ಲಿ ಹಲವಾರು ಮಜಲುಗಳ ಅಧಿಕಾರ ಅನುಭವಿಸಿದ ಸಿಂಧ್ಯಾ ಈಗ ಡಿಕೆ ಸುರೇಶ್ ಜೊತೆ ನಿಂತು ಕಾಂಗ್ರೆಸ್ ಪರ ಮತ ಯಾಚಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ರಾಮನಗರ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಿನ್ನೆ ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ (Dr CN Manjunath) ಅವರ ಪರ ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಜೆಡಿಎಸ್ ಪಕ್ಷದೊಂದಿಗೆ ರಅಜಕೀಯ ಬದುಕು ಅರಂಭಿಸಿ ನಂತರ ಕಾಂಗ್ರೆಸ್ ಸೇರ್ಪಡೆಯಾದ ಹಿರಿಯ ರಾಜಕಾರಣಿ ಪಿಜಿಅರ್ ಸಿಂಧ್ಯಾ (PGR Sindhia) ಮತ್ತು ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವನಾಗಿರುವ ಎನ್ ಚಲುವರಾಯಸ್ವಾಮಿ (N Cheluvarayaswamy) ಅವರನ್ನು ಟೀಕಿಸಿದರು. ತಮ್ಮ ಸಮುದಾಯದ 1,000 ಮತಗಳನ್ನೂ ಹೊಂದಿರದ ಸಿಂಧ್ಯಾ ಅವರನ್ನು 1983 ರಲ್ಲಿ ಕನಕಪುರಕ್ಕೆ ತಂದು ವಿಧಾನಸಭೆಗೆ ಆಯ್ಕೆಯಾಗುವಂತೆ ಮಾಡಿದ್ದು ಹೆಚ್ ಡಿ ದೇವೇಗೌಡರು. ಜೆಡಿಎಸ್ ಪಕ್ಷದಲ್ಲಿ ಹಲವಾರು ಮಜಲುಗಳ ಅಧಿಕಾರ ಅನುಭವಿಸಿದ ಸಿಂಧ್ಯಾ ಈಗ ಡಿಕೆ ಸುರೇಶ್ ಜೊತೆ ನಿಂತು ಕಾಂಗ್ರೆಸ್ ಪರ ಮತ ಯಾಚಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಏನೂ ಆಗಿರದ ಚಲುವರಾಯಸ್ವಾಮಿಯನ್ನು ತಮ್ಮ ಪಕ್ಷ ಬೆಳೆಸಿತು, ಈಗ ಅವರು ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸೇನಾನಾಯಕನಂತೆ ಬಿಂಬಿಸಿಕೊಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ದೇವೇಗೌಡರ ಸಲಹೆ ಮೇರೆಗೆ ತಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರವ ಜೊತೆ ಕೈ ಜೋಡಿಸಿದ್ದೇನೆ, ಆದರೆ ಕಾಂಗ್ರೆಸ್ ನವರು ತನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸ್ವಾಮೀಜಿ ಅಥವಾ ಬೇರೆಯವರ ಫೋನ್ ಟ್ಯಾಪ್ ಮಾಡಿಸುವ ಅವಶ್ಯಕತೆ ನನಗಿರಲಿಲ್ಲ: ಹೆಚ್ ಡಿ ಕುಮಾರಸ್ವಾಮಿ