Hubballi: 8 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್​ ವಾಪಸ್ ನೀಡಿ ಮಾನವೀಯತೆ ಮೆರೆದ ಆಟೋ ಚಾಲಕ

Hubballi: 8 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್​ ವಾಪಸ್ ನೀಡಿ ಮಾನವೀಯತೆ ಮೆರೆದ ಆಟೋ ಚಾಲಕ

ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on:Apr 18, 2024 | 9:43 AM

ಮಹಿಳೆ ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟುಹೋದ 8 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಇದ್ದ ಬ್ಯಾಗ್​ ಅನ್ನು ಆಟೋ ಚಾಲಕ ಪೊಲೀಸರು, ಆಟೋ ಚಾಲಕರ ಸಮ್ಮುಖದಲ್ಲಿ ವಾಪಸ್​ ನೀಡುವ ಮೂಲಕ ಮಾನವೀಯತೆ ಮೆರೆದಿರುವಂತಹ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸದ್ಯ ನಾಗರಾಜ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಆಟೋ ಚಾಲಕನ ಮಾನವೀಯತೆಗೆ ಪೊಲೀಸರು ಕೂಡ ಸನ್ಮಾನ ಮಾಡಿದ್ದಾರೆ. 

ಹುಬ್ಬಳ್ಳಿ, ಏಪ್ರಿಲ್​​ 18: 8 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯನ್ನು ವಾಪಸ್ ನೀಡುವ ಮೂಲಕ ಆಟೋ ಚಾಲಕರೊಬ್ಬರು (auto driver) ಮಾನವೀಯತೆ (humanity) ಮೆರೆದಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಹುಬ್ಬಳ್ಳಿಯ ನಾಗರಾಜ್​ ಎನ್ನುವವರ ಆಟೋದಲ್ಲಿ ನಗರದ ಗೋಕುಲ ಬಸ್ ನಿಲ್ದಾಣದಿಂದ ಹೊಸುರ ಬಸ್ ನಿಲ್ದಾಣದವರೆಗೆ ಮೂವರು ಪ್ರಯಾಣ ಮಾಡಿದ್ದಾರೆ. ಈ ವೇಳೆ ಆಟೋದಿಂದ ಇಳಿಯುವಾಗ ಗಡಿಬಿಡಿಯಲ್ಲಿ ಧಾರವಾಡದ ನಿಸ್ಸಾಮುದ್ದೀನ್ ಕಾಲೋನಿ ಮಹಿಳೆಯೊಬ್ಬರು ತಮ್ಮ ಬ್ಯಾಗ್​ನ್ನು​​ ಆಟೋದಲ್ಲಿ ಬಿಟ್ಟು ಹೋಗಿದ್ದಾರೆ. ಹೀಗೆ ಪ್ರಯಾಣಿಕರು ಬಿಟ್ಟು ಹೋದ ಬ್ಯಾಗ್​ನಲ್ಲಿ 4 ತೊಲೆ ಬಂಗಾರ, 16 ತೊಲೆ ಬೆಳ್ಳಿ ಹಾಗೂ ಮನೆಯ ದಾಖಲಾತಿಗಳು ಇವೆ. ಪ್ರಯಾಣಿಕರು ಬ್ಯಾಗ್​ ಬಿಟ್ಟು ಹೋಗಿರುವುದನ್ನು ಗಮನಿಸಿದ ಆಟೋ ಚಾಲಕ ಹುಬ್ಬಳ್ಳಿಯ ಗೋಕುಲ ಠಾಣೆಯ‌ ಪೊಲೀಸರು, ಆಟೋ ಚಾಲಕರ ಸಮ್ಮುಖದಲ್ಲಿ ಪ್ರಯಾಣಿಕರಿಗೆ ಬ್ಯಾಗ್​ ವಾಪಸ್ ನೀಡಿದ್ದಾರೆ. ಆ ಮೂಲಕ ಆಟೋ ಚಾಲಕ ನಾಗರಾಜ್ ಮಾನವೀಯತೆ ಮೆರೆದಿದ್ದಾರೆ.​ ಸದ್ಯ ನಾಗರಾಜ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಆಟೋ ಚಾಲಕನ ಮಾನವೀಯತೆಗೆ ಪೊಲೀಸರು ಕೂಡ ಸನ್ಮಾನ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.  

Published on: Apr 18, 2024 09:42 AM