Dutch Vlogger Thrashed: ಬೆಂಗಳೂರಿನಲ್ಲಿ ವಿದೇಶಿ ಯೂಟ್ಯೂಬರ್ ಮೇಲೆ ಹಲ್ಲೆಗೆ ಯತ್ನ, ಚಿಕ್ಕಪೇಟೆ ವ್ಯಾಪಾರಿ ಅರೆಸ್ಟ್
ವಿದೇಶಿ ಯೂಟ್ಯೂಬರ್ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಭಾರತದ ಪ್ರವಾಸಕ್ಕೆ ಬಂದಿರುವ ವಿದೇಶಿ ಪ್ರವಾಸಿಗರೊಬ್ಬರಿಗೆ ಬೆಂಗಳೂರಿನಲ್ಲಿ (Bengaluru) ಪುಂಡನೊಬ್ಬ ಕಿರುಕುಳ ನೀಡಿದ ಘಟನೆ ನಡೆದಿದೆ. ನೆದರ್ ಲ್ಯಾಂಡ್ ಪ್ರಜೆ ಪೆಡ್ರೋ ಮೊಟಾ ಎನ್ನುವ ಯೂಟ್ಯೂಬರ್ ನನ್ನು ಚಿಕ್ಕಪೇಟೆಯಲ್ಲಿ ಸ್ಥಳೀಯ ವ್ಯಾಪಾರಿಯೊಬ್ಬ ಎಳೆದಾಡಿದ್ದಾನೆ. ಚಿಕ್ಕಪೇಟೆಯಲ್ಲಿ ವಿಡಿಯೋ ಶೂಟ್ ಮಾಡುತ್ತಿದ್ದರು. ಈ ವೇಳೆ ವ್ಯಾಪಾರಿ ಅಡ್ಡಿಪಡಿಸಿದ್ದಾನೆ. ಅತಿಥಿ ದೇವೋ ಭವ ಎಂಬ ಪರಿಕಲ್ಪನೆ ಇರುವ ದೇಶದಲ್ಲಿ ಕಿರುಕುಳಕ್ಕೆ ಕೊಟ್ಟಿದ್ದು ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಘಟನೆ ಸಂಬಂಧ ಸ್ಥಳೀಯರು ಪಶ್ಚಿಮ ಡಿಸಿಪಿ ಗಮನಕ್ಕೆ ತಂದಿದ್ದಾರೆ. ಬಳಿಕ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಸುಮೋಟೋ ಕೇಸ್ ದಾಖಲಿಸಿಕೊಂಡು ಆರೋಪಿ ನವಾಬ್ ನನ್ನು ಬಂಧಿಸಿದ್ದಾರೆ.
Published on: Jun 12, 2023 12:45 PM