Loading video

ಬಾವಿಯಲ್ಲಿ ಅನುಮಾನಾಸ್ಪದ ಬುಲೆಟ್ ಬೈಕ್ ಪತ್ತೆ: ಭಯದಲ್ಲೇ ಮೇಲೆತ್ತಿದ ಜನರು

| Updated By: ಗಂಗಾಧರ​ ಬ. ಸಾಬೋಜಿ

Updated on: Feb 05, 2025 | 7:21 PM

ಚಿಕ್ಕಬಳ್ಳಾಪುರ ತಾಲೂಕಿನ ಹರಿಹರಪುರದ ಬಳಿ ರಸ್ತೆಬದಿಯ ಜಮೀನಿನ ಬಾವಿಯಲ್ಲಿ ಬುಲೆಟ್ ಬೈಕ್ ಪತ್ತೆಯಾಗಿದೆ. ತೋಟಕ್ಕೆ ನೀರು ಹಾಯಿಸಲು ಹೋದ ರೈತನಿಗೆ ಬೈಕ್ ಕಂಡುಬಂದಿದೆ. ಸ್ಥಳೀಯರು ಬಾವಿಯ ನೀರನ್ನು ಹೊರಗೆ ಹಾಕಿದ್ದಾರೆ. ಈ ಘಟನೆಯಿಂದ ಹಲವು ಅನುಮಾನಗಳು ಎದ್ದಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರ, ಫೆಬ್ರವರಿ 05: ಹರಿಹರಪುರ ಗ್ರಾಮದ ಬಳಿ ರಸ್ತೆ ಬದಿಯ ಜಮೀನೊಂದರ ಬಾವಿಯಲ್ಲಿ ಬುಲೆಟ್ ಬೈಕ್​ (bike) ಪತ್ತೆ ಆಗಿದೆ. ರೈತರೊಬ್ಬರು ತೋಟಕ್ಕೆ‌ ನೀರು ಹಾಯಿಸಲು ಹೋದಾಗ ಬೈಕ್ ಪತ್ತೆ ಆಗಿದೆ. ಬೈಕ್​ ಪತ್ತೆ ಹಿನ್ನೆಲೆ ಸ್ಥಳೀಯರು ಬಾವಿಯಲ್ಲಿನ ನೀರು ಹೊರಹಾಕಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಬಾವಿಯಲ್ಲಿ ಬಿದಿದ್ದ ಬುಲೆಟ್ ಬೈಕ್ ಯಾರದು, ಬಿದ್ದಿದ್ದು ಹೇಗೆ ಎಂಬ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Feb 05, 2025 07:20 PM