ಹಬ್ಬದೂಟಕ್ಕೆ ಬಂದು ಪಾಳು ಬಾವಿಗೆ ಬಿದ್ದ ಮಹಿಳೆ: ಹೇಗಿದೆ ನೋಡಿ ರಕ್ಷಣಾ
ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ತಡಗ ಗ್ರಾಮದಲ್ಲಿ ಭೀಕರ ಘಟನೆ ನಡೆದಿದೆ. ಸ್ನೇಹಿತರ ಮನೆಯ ಹಬ್ಬದ ಊಟಕ್ಕೆ ಬಂದಿದ್ದ ಚಿಕ್ಕಜಾಜೂರು ಮೂಲದ 40 ವರ್ಷದ ಮಹಿಳೆ ರಾತ್ರಿ ಪಾಳು ಬಿದ್ದ 50 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ. ಮಧ್ಯಾಹ್ನ ಗ್ರಾಮಸ್ಥರು ಅವರ ನರಳಾಟ ಕೇಳಿ ರಕ್ಷಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ಬಾವಿಯಿಂದ ಹೊರಗೆ ತಂದಿದ್ದಾರೆ.
ಚಿಕ್ಕಮಗಳೂರು, ಫೆಬ್ರವರಿ 05: ಸ್ನೇಹಿತರ ಮನೆಯ ಹಬ್ಬದ ಊಟ ಮಾಡಲು ಬಂದು ತಡೆಗೋಡೆ ಇಲ್ಲದ 50 ಅಡಿ ಆಳವಾದ ನೀರಿಲ್ಲದ ಪಾಳು ಬಾವಿಯೊಳಗೆ (Well) ಮಹಿಳೆ ಬಿದ್ದು ಗಂಭೀರ ಗಾಯಗೊಂಡಿರುವಂತಹ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ತಡಗ ಗ್ರಾಮದಲ್ಲಿ ನಡೆದಿದೆ. ಚಿಕ್ಕಜಾಜೂರು ಮೂಲದ ತಿಮ್ಮಕ್ಕ (40) ಬಾವಿಗೆ ಬಿದ್ದ ಮಹಿಳೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಮಹಿಳೆಯ ರಕ್ಷಣೆ ಮಾಡಿದ್ದು, ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಮಹಿಳೆ ಬಾವಿಗೆ ಬಿದಿದ್ದು, ಮರುದಿನ ಮಧ್ಯಾಹ್ನದ ವೇಳೆಗೆ ಗೊತ್ತಾಗಿದೆ. ತಡೆಗೋಡೆ ಇಲ್ಲದ ಪಾಳು ಬಿದ್ದ ಬಾವಿಯನ್ನು ಗ್ರಾಮ ಪಂಚಾಯಿತಿ ಮುಚ್ಚಿಲ್ಲ. ನೂರಾರು ಬಾರಿ ಬಾವಿ ಮುಚ್ಚುವಂತೆ ಮನವಿ ಮಾಡಿದ್ದರೂ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.