ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ಚಿಕ್ಕಬಳ್ಳಾಪುರ ತಾಲ್ಲೂಕಿನ ಗೋಪಿನಾಥ ಬೆಟ್ಟದ ದೇವಸ್ಥಾನದ ಬಳಿ ನಿಲ್ಲಿಸಿದ್ದ ಯಲಹಂಕದ ನರಸಿಂಹಮೂರ್ತಿ ಅವರ ಬ್ರೀಜಾ ಕಾರು ಹೊತ್ತಿ ಉರಿದಿದೆ. ದೇವರ ದರ್ಶನಕ್ಕೆ ಹೋಗಿದ್ದ ಅವರು ಹಿಂತಿರುಗಿ ಬಂದಾಗ ಕಾರು ಬೆಂಕಿಯಲ್ಲಿ ಸುಟ್ಟುಹೋಗಿರುವುದನ್ನು ಕಂಡಿದ್ದಾರೆ. ಕಾರಿನ ಬಾನೆಟ್‌ನಿಂದ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ, ಮಾರ್ಚ್ 14: ಚಿಕ್ಕಬಳ್ಳಾಪುರ ತಾಲೂಕಿನ ಗೋಪಿನಾಥ ಬೆಟ್ಟ ದೇವಸ್ಥಾನದ ಮುಂದೆ ನಿಂತಿದ್ದ ಕಾರು ಹೊತ್ತಿ ಉರಿದಿದೆ. ಯಲಹಂಕ ಮೂಲದ ನರಸಿಂಹಮೂರ್ತಿ ಎಂಬುವರಿಗೆ ಸೇರಿದ ಬ್ರೀಜಾ ಕಾರನ್ನು ದೇವಸ್ಥಾನದ ಕಾರು ಪಾರ್ಕಿಂಗ್ನಲ್ಲಿ ಪಾರ್ಕ್ ಮಾಡಲಾಗಿತ್ತು. ದೇವರ ದರ್ಶನ ಮಾಡಿಕೊಂಡು ಬರುವಷ್ಟರಲ್ಲಿ ಕಾರು ಬೆಂಕಿಗೆ ಆಹುತಿಯಾಗಿದೆ. ಕಾರಿನ ಬಾನೇಟ್ನಲ್ಲಿ ಬೆಂಕಿ ಕಾಣಿಸಿಕೊಂಡು ದುರ್ಘಟನೆ ಸಂಭವಿಸಿದೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದೆ.
Published on: Mar 14, 2025 02:39 PM