ಮಧ್ಯರಾತ್ರಿ ಎಂಟ್ರಿ, ಬೆಳಗಿನ ಜಾವ ಎಸ್ಕೇಪ್; ಎಯು ಜ್ಯುವೆಲ್ಲರ್ಸ್‌ನಿಂದ 140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ

Edited By:

Updated on: Dec 24, 2025 | 2:16 PM

ಚಿಕ್ಕಬಳ್ಳಾಪುರದ ನಗರದ ಬಿಬಿ ರಸ್ತೆಯಲ್ಲಿರುವ ಎ ಯು ಜ್ಯುವೆಲ್ಲರ್ಸ್‌ನಲ್ಲಿ ಸೋಮವಾರ ರಾತ್ರಿ ಭಾರೀ ದರೋಡೆ ನಡೆದಿದ್ದು, ಸುಮಾರು 140 ಕೆ.ಜಿಯಷ್ಟು ಬೆಳ್ಳಿ ವಸ್ತುಗಳು ಕಾಣೆಯಾಗಿದ್ದವು. ಸಿಸಿ ಕ್ಯಾಮೆರಾದ ಡಿವಿಆರ್​ಅನ್ನೂ ದೋಚಿದ್ದ ಕದೀಮರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದರು.ಇದೀಗ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಮೂವರು ಕಳ್ಳರು ಸೇರಿ ಸುಮಾರು ಮೂರು ಕೋಟಿ ರೂ. ಮೌಲ್ಯದ 140 ಕೆಜಿ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ.

ಚಿಕ್ಕಬಳ್ಳಾಪುರ, ಡಿಸೆಂಬರ್ 24: ಚಿಕ್ಕಬಳ್ಳಾಪುರದ ನಗರದ ಬಿಬಿ ರಸ್ತೆಯಲ್ಲಿರುವ ಎಯು ಜ್ಯುವೆಲ್ಲರ್ಸ್‌ನಲ್ಲಿ ಸೋಮವಾರ ರಾತ್ರಿ ಭಾರೀ ದರೋಡೆ ನಡೆದಿದ್ದು, ಸುಮಾರು 140 ಕೆ.ಜಿಯಷ್ಟು ಬೆಳ್ಳಿ ವಸ್ತುಗಳು ಕಾಣೆಯಾಗಿದ್ದವು. ಸಿಸಿ ಕ್ಯಾಮೆರಾದ ಡಿವಿಆರ್​ಅನ್ನೂ ದೋಚಿದ್ದ ಖದೀಮರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದರು.. ಮೂವರು ಕಳ್ಳರು ಸೇರಿ ಸುಮಾರು ಮೂರು ಕೋಟಿ ರೂ. ಮೌಲ್ಯದ 140 ಕೆಜಿ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ. ಮಧ್ಯರಾತ್ರಿ 12 ಗಂಟೆ 10 ನಿಮಿಷಕ್ಕೆ ಅಂಗಡಿಗೆ ಪ್ರವೇಶಿಸಿದ ಕಳ್ಳರು, ಮೂರು ಗಂಟೆಗೂ ಹೆಚ್ಚು ಕಾಲ ಅಂಗಡಿಯಲ್ಲಿ ಉಳಿದು ದರೋಡೆ ನಡೆಸಿದ್ದಾರೆ. ಮೊದಲು ರಾಡ್ ಬಳಸಿ ಬೀಗ ಒಡೆಯಲು ಯತ್ನಿಸಿದ ಕಳ್ಳರು, ಬಳಿಕ ಕಟರ್‌ನಿಂದ ಬೀಗ ಕತ್ತರಿಸಿ ಒಳ ಪ್ರವೇಶಿಸಿದ್ದಾರೆ. ಮೂರು ಬ್ಯಾಗ್‌ಗಳಲ್ಲಿ ಕೋಟಿ ಕೋಟಿ ಮೌಲ್ಯದ ಆಭರಣಗಳನ್ನು ತುಂಬಿಕೊಂಡು 3 ಗಂಟೆ 10 ನಿಮಿಷಕ್ಕೆ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Dec 24, 2025 10:29 AM