ಮತ್ತೆ ಮಾಜಿ ಸಚಿವ ಡಾ. ಕೆ. ಸುಧಾಕರ್​ ವಿರುದ್ಧ ತೊಡೆ ತಟ್ಟಿ ಸವಾಲು ಹಾಕಿದ ಚಿಕ್ಕಬಳ್ಳಾಪುರ ಹಾಲಿ ಶಾಸಕ ಪ್ರದೀಪ್ ಈಶ್ವರ್

| Updated By: ಸಾಧು ಶ್ರೀನಾಥ್​

Updated on: Jul 08, 2023 | 4:25 PM

ಮಾಜಿ ಸಚಿವ ಡಾ. ಕೆ. ಸುಧಾಕರ್​ ವಿರುದ್ಧ ಚಿಕ್ಕಬಳ್ಳಾಪುರ ಹಾಲಿ ಶಾಸಕ, ಕಾಂಗ್ರೆಸ್​​ ಪಕ್ಷದ ಪ್ರದೀಪ್ ಈಶ್ವರ್ ತೊಡೆ ತಟ್ಟಿ ಸವಾಲು ಹಾಕಿದ್ದಾರೆ.

ಬಿರುಸಾದ ಮಳೆ ನಿಂತಿದ್ದರೂ ಇನ್ನೂ ಗಾಳಿ ಹನಿ ಜೋರಾಗಿಯೇ ಬೀಳುತ್ತಿದೆ. ಮಾಜಿ ಸಚಿವ, ಬಿಜೆಪಿ ನಾಯಕ ಡಾ. ಕೆ. ಸುಧಾಕರ್​ ಅವರನ್ನು ಭರ್ಜರಿಯಾಗಿ ಸೋಲಿಸಿದ ಚಿಕ್ಕಬಳ್ಳಾಪುರದ ಹಾಲಿ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಇನ್ನೂ ಸುಧಾಕರ್ ವಿರುದ್ಧ ಅಬ್ಬರಿಸುತ್ತಲೇ ಇದ್ದಾರೆ. ಮತ್ತೆ ಮಾಜಿ ಸಚಿವ ಡಾ. ಕೆ. ಸುಧಾಕರ್​ ವಿರುದ್ಧ ಚಿಕ್ಕಬಳ್ಳಾಪುರ ಹಾಲಿ ಶಾಸಕ, ಕಾಂಗ್ರೆಸ್​​ ಪಕ್ಷದ (Chikkaballapur MLA) ಪ್ರದೀಪ್ ಈಶ್ವರ್ ತೊಡೆ ತಟ್ಟಿ ಸವಾಲು ಹಾಕಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಗಾಗಿ ವೆಬ್ ಸೈಟ್ ಬಿಡುಗಡೆ 

ಈ ಮಧ್ಯೆ ಚಿಕ್ಕಬಳ್ಳಾಪುರದಲ್ಲಿ ಕ್ಷೇತ್ರದ ಜನರ ಕುಂದುಕೊರತೆಗಳನ್ನು ಆಲಿಸಲು ಸ್ಥಳೀಯ ಶಾಸಕ, ಕಾಂಗ್ರೆಸ್​ ಪಕ್ಷದ ಶಾಸಕ ಪ್ರದೀಪ್ ಈಶ್ವರ್ ಅವರು ಇಂದು ವೆಬ್ ಸೈಟ್ ಬಿಡುಗಡೆ ಮಾಡಿದ್ದಾರೆ. ಸ್ವತಃ ಅವರೇ ವೆಬ್ ಸೈಟ್ ಬಿಡುಗಡೆ ಮಾಡಿ, ಚಿಕ್ಕಬಳ್ಳಾಪುರ ಕ್ಷೇತ್ರದ ಜನರು ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದರು. ಕ್ಷೇತ್ರದಲ್ಲಿ ಯಾವುದೇ ರೀತಿಯಲ್ಲಿ, ಯಾರಿಗೆ ಕುಂದುಕೊರತೆ ಎದರಾದ್ರೂ ಮೊಬೈಲ್ ಮೂಲಕ ವೆಬ್ ಸೈಟ್ ಬಳಸುವಂತೆ ಅವರು ಕರೆ ನೀಡಿದರು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ